Advertisement

ಧರ್ಮದ ದಾರಿಯಲ್ಲಿ ಸನ್ಮಾರ್ಗದ ಸಂತೋಷ: ಡಾ|ಹೆಗ್ಗಡೆ

01:49 AM Jan 08, 2022 | Team Udayavani |

ಬೆಳ್ತಂಗಡಿ: ಸಾಮಾಜಿಕ ಗೌರವದೊಂದಿಗೆ ಆರ್ಥಿಕ ಸದೃಢತೆಯಿಂದ ಬಾಳಿದಾಗ ಕುಟುಂಬ ಮತ್ತು ಸಮಾಜ ಸುಭಿಕ್ಷೆಯ ಪಥದಲ್ಲಿ ಮುನ್ನಡೆ ಯಲು ಸಾಧ್ಯ. ಇದಕ್ಕಾಗಿಯೇ ವ್ಯಸನಮುಕ್ತಿಗಾಗಿ ಶಿಬಿರಗಳನ್ನು ಆಯೋಜಿಸಿ ಕೆಟ್ಟ ಚಟಗಳಿಂದ ಮುಕ್ತಿ ಹೊಂದಲು ಯೋಜನೆಯ ಮೂಲಕ ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಡಿ ಜನಜಾಗೃತಿ ವೇದಿಕೆ ಮೂಲಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದ 1,500ನೇ ಮದ್ಯವರ್ಜನ ಶಿಬಿರದ ಶಿಬಿರಾರ್ಥಿಗಳನ್ನುದ್ದೇಶಿಸಿ ವರ್ಚುವಲ್‌ ಕಾನ್ಫರೆನ್ಸ್‌ ಮೂಲಕ ಅವರು ಸಂದೇಶ ನೀಡಿದರು.

ಶಾಶ್ವತ ಸಂತೋಷವನ್ನು ಬಯಸುವವರು ಧರ್ಮದ ದಾರಿಯಲ್ಲಿಯೇ ನಡೆಯಬೇಕು. ಮದ್ಯ ಪಾನ, ಮಾದಕ ದ್ರವ್ಯ ಮುಂತಾದ ವ್ಯಕ್ತಿತ್ವವನ್ನು ನಾಶ ಮಾಡುವ ಚಟಗಳಿಂದ ಹೊರಬಂದು ದೃಢಚಿತ್ತದಿಂದ ಸಂಕಲ್ಪ ಶಕ್ತಿಯನ್ನು ಬೆಳೆಸಿ ಸಂಸಾರದಲ್ಲಿ ನೆಮ್ಮದಿ ಕಾಣಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ:ದೇಶದ ಜಿಡಿಪಿಗೆ ಶೇ.9.2ರ ನಿರೀಕ್ಷೆ; ಶರವೇಗದ ಅರ್ಥ ವ್ಯವಸ್ಥೆಯತ್ತ ದಾಪುಗಾಲು

ಯಾವುದೇ ಔಷಧ, ಚುಚ್ಚುಮದ್ದು, ಮಾತ್ರೆ ಗಳಿಲ್ಲದೆ, ಯಾವುದೇ ಅಡ್ಡ ಪರಿಣಾಮ ಉಂಟು ಮಾಡದೆ ನೇರವಾಗಿ ಮನಮುಟ್ಟುವ ಕೆಲಸ ಜನ ಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರಗಳಿಂದ ಆಗುತ್ತಿದೆ. ಮನಪರಿವರ್ತನೆಯ ಜತೆಗೆ ದೈಹಿಕ, ಮಾನಸಿಕ ಚಿಕಿತ್ಸೆಯನ್ನು ನೀಡಿ ಸನ್ಮಾರ್ಗದಲ್ಲಿ ನಡೆ ಸುವ ಪ್ರಯತ್ನವಾಗಿದೆ ಎಂದು ಹೆಗ್ಗಡೆ ತಿಳಿಸಿದರು.

Advertisement

ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್‌ ಕುಮಾರ್‌, ಜನಜಾಗೃತಿ ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿ. ಪಾçಸ್‌, ಯೋಜನಾಧಿಕಾರಿ ಮೋಹನ್‌ ಸಭೆಯಲ್ಲಿದ್ದರು. ಒಂದು ವಾರ ಕಾಲದ ಶಿಬಿರದಲ್ಲಿ 61 ಮಂದಿ ಶಿಬಿರಾರ್ಥಿಗಳಿದ್ದರು.

12 ಶಿಬಿರಗಳ ಆಯೋಜನೆ
ಮದ್ದೂರು ತಾಲೂಕಿನಲ್ಲಿ 1,500ನೇ ಶಿಬಿರ ನಡೆಯಿತು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡÛಘಟ್ಟ, ಹೊಸಪೇಟೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನಲ್ಲಿ 2 ವಿಶೇಷ ಮದ್ಯವರ್ಜನ ಶಿಬಿರಗಳು, ಜಗಳೂರು, ರಾಮನಗರ, ರೋಣ, ರಾಮದುರ್ಗ, ಅಥಣಿ ತಾಲೂಕು ಹೀಗೆ 12 ಕಡೆ ಜನವರಿಯಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿ. ಪಾçಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next