Advertisement

ಇನ್ನರ್‌ ವ್ಹೀಲ್‌ ಕ್ಲಬ್‌ನಿಂದ ಪಾಲಿಕೆಗೆ ಕಸದ ಬುಟ್ಟಿ ಕೊಡುಗೆ

01:12 PM Jun 03, 2017 | Team Udayavani |

ಮೈಸೂರು: ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಸ್ವತ್ಛತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಇನ್ನರ್‌ ವ್ಹೀಲ್‌ ಕ್ಲಬ್‌ ವತಿಯಿಂದ ಮೈಸೂರು ಮಹಾನಗರ ಪಾಲಿಕೆಗೆ ಒಂಭತ್ತು ಸ್ಟೀಲ್‌ ಕಸದ ಬುಟ್ಟಿಗಳನ್ನು ನೀಡಲಾಯಿತು. 

Advertisement

ನಗರದ ಚಿಕ್ಕಗಡಿಯಾರ ಗೋಪುರದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮೇಯರ್‌ ಎಂ.ಜೆ.ರವಿಕುಮಾರ್‌, ಇನ್ನರ್‌ ವ್ಹೀಲ್‌ ಕ್ಲಬ್‌ನಿಂದ ನೀಡಲಾದ ಕಸದ ಬುಟ್ಟಿಗಳನ್ನು ಪಡೆದು, ಸಾರ್ವಜನಿಕ ಬಳಕೆಗೆ ಅರ್ಪಿಸಿದರು.

ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮಾತನಾಡಿ, ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಕಸದ ಬುಟ್ಟಿಗಳಲ್ಲಿ ಹಾಕುವುದರಿಂದ ನಮ್ಮ ಸುತ್ತಲಿನ ಪರಿಸರದ ಸ್ವತ್ಛತೆ ಕಾಪಾಡಿಕೊಳ್ಳಬಹುದು. ಇಲ್ಲದಿದ್ದಲ್ಲಿ ನಗರದ ನೈರ್ಮಲ್ಯ ಹಾಳಾಗಿ ಹೋಗಲಿದೆ.

ಈ ಹಿಂದೆ ದೇಶದ ಮೊದಲ ಸ್ವತ್ಛ ನಗರಿ ಎಂಬ ಪಟ್ಟ ಪಡೆದಿದ್ದ ಮೈಸೂರು ಇದೀಗ 5ನೇ ಸ್ಥಾನಕ್ಕೆ ಇಳಿದಿದೆ. ಆದ್ದರಿಂದ ಮುಂದಿನ ಬಾರಿ ಮತ್ತೂಮ್ಮೆ ಸ್ವತ್ಛನಗರಿ ಎಂಬ ಪಟ್ಟ ಪಡೆಯಬೇಕಿದ್ದು, ಅದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಬಿಸಾಡದೇ ನಗರದ ಸ್ವತ್ಛತೆ ಕಾಪಾಡುವ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದರು.

ಇನ್ನರ್‌ ವ್ಹೀಲ್‌ ಕ್ಲಬ್‌ ಅಧ್ಯಕ್ಷೆ ಶಕುಂತಲಾ ಮಣಿ ಮಾತನಾಡಿ, 45 ಸಾವಿರ ವೆಚ್ಚದಲ್ಲಿ 9 ಕಸದ ಬುಟ್ಟಿಗಳನ್ನು ನೀಡಿದ್ದೇವೆ. ನಗರವನ್ನು ಸ್ವತ್ಛವಾಗಿರಿ ಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ದೇವರಾಜ್‌ ಮಾರುಕಟ್ಟೆಯಲ್ಲಿ ಎರಡು ಹಾಗೂ ಉಳಿದ ಕಸದ ಬುಟ್ಟಿಗಳನ್ನು ಅರಸು ರಸ್ತೆಯಲ್ಲಿ ಸ್ಥಳ ಗುರುತಿಸಿ ಇಡಲು ತೀರ್ಮಾನಿಸಲಾಗಿದೆ.

Advertisement

ಇನ್ನರ್‌ ವ್ಹೀಲ್‌ ಕ್ಲಬ್‌ ಸದಸ್ಯರಾದ ಪುಷ್ಪಲತಾ, ನಾಗಲಕ್ಷೀ, ಸವಿತಾ, ಸೌಮ್ಯಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next