ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಲಯನ್ಸ್ ಸೇವಾ ಚಟುವಟಿಕೆ ಎಂಬುದು ಉತ್ಸವದ ಮೂರ್ತಿಯಾಗಿ ನಿಂತಲ್ಲಿ ನಿಲ್ಲದೇ ಪ್ರಗತಿಯತ್ತ ಮುಂದೆ ಸಾಗಿ ಸೇವಾ ಗುರಿಯನ್ನು ಮುಟ್ಟುತ್ತದೆ. ಅಂತಹ ಮಹಾನ್ ಸೇವಾ ಕೈಂಕರ್ಯವನ್ನು ಹೊಂದಿರುವ ಸಂಸ್ಥೆ ಬೆಳ್ತಂಗಡಿ ಲಯನ್ಸ್ ಕ್ಲಬ್ ಆಗಿದೆ. ಈ ಸೇವಾ ತೇರು ವರ್ಷ ಪೂರ್ತಿ ಮುಂದುವರಿದು ಅರ್ಹರಿಗೆ ಸೇವಾ ಕೈಂಕರ್ಯವನ್ನು ಮಾಡುವಲ್ಲಿ ತೊಡಗಿಸಿಕೊಳ್ಳಲಿ ಎಂದು ಬೆಳ್ತಂಗಡಿಯ ನ್ಯಾಯವಾದಿ ಬಿ. ಕೆ. ಧನಂಜಯ ರಾವ್ ಹೇಳಿದರು.
ಅವರು ಬೆಳ್ತಂಗಡಿ ಲಯನ್ಸ್ ಕ್ಲಬ್‌ನಲ್ಲಿ ನಡೆದ ಜುಲೆ„ ತಿಂಗಳ ಪ್ರಥಮ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬೆಳ್ತಂಗಡಿಯ ಪೂರ್ವ ಹೆಸರು ಬೋಳು ತೇರು ಎಂದಾಗಿದ್ದು, ಆ ಹೆಸರಿನ ಅಂತಿಮ ಪದದಿಂದಲೇ ಈ ವರ್ಷ ಬೆಳ್ತಂಗಡಿ ಲಯನ್ಸ್ ಕ್ಲಬ್ ತೇರು ಎನ್ನುವ ಹೆಸರಿನಿಂದ ಸೇವಾ ಚಟುವಟಿಕೆಯನ್ನು ಆರಂಭಿಸಿದೆ. ಆ ತೇರು ಎಂಬುದು ನಾಲ್ಕು ಗೋಡೆಯ ಮಧ್ಯೆ ಇರುವ ಒಂದು ಸಂಸ್ಥೆಯಾದರೆ, ಇದರಲ್ಲಿ ಎರಡು ಮುಖ್ಯ ಗಾಲಿಗಳಾಗಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸೇವಾ ಕರ್ತವ್ಯವನ್ನು ಮುಂದುವರಿಸಿದರೆ ಪದಾಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಉಪಯುಕ್ತ ಕಾರ್ಯ ಮಾಡುತ್ತಾರೆ ಎಂದರು.
ಲಯನ್ಸ್ ಕ್ಲಬ್‌ನ ಅಧ್ಯಕ್ಷ ಧರಣೇಂದ್ರ ಕೆ. ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಂತ್ಯ 10ರ ಪ್ರಾಂತ್ಯಾಧ್ಯಕ್ಷ ನಿತ್ಯಾನಂದ ನಾವರ, ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ನಿಕಟ ಪೂರ್ವಾಧ್ಯಕ್ಷೆ ಸುಶೀಲಾ ಎಸ್. ಹೆಗ್ಡೆ, ಲಯನ್ಸ್ ಕ್ಲಬ್‌ನ ಪ್ರಥಮ ಉಪಾಧ್ಯಕ್ಷೆ ಮೇದಿನಿ ಡಿ. ಗೌಡ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾೖಲ, ಕೋಶಾಧಿಕಾರಿ ವಿನ್ಸೆಂಟ್ ಟಿ. ಡಿ ‘ಸೋಜಾ ಮತ್ತಿತರರು ಉಪಸ್ಥಿತರಿದ್ದರು.
ವಿ. ಆರ್. ನಾಯಕ್ ಧ್ವಜವಂದನೆ ವಾಚಿಸಿ, ನೀತಿಸಂಹಿತೆ ಮತ್ತು ತತ್ವಾದರ್ಶವನ್ನು ಪ್ರಕಾಶ್ ಶೆಟ್ಟಿ ನೊಚ್ಚ ಪಠಿಸಿ, ಜಯರಾಮ ಭಂಡಾರಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.
ಲಾಂಗೂಲ ಚಾಲಕ ದೇವಿಪ್ರಸಾದ್ ಸಲಹೆ ನೀಡಿದರು. ದಿನದ ಅದೃಷ್ಟ ವ್ಯಕ್ತಿಯಾಗಿ ರಾಜೀವ ಡಿ. ಗೌಡ ಆಯ್ಕೆ
ಯಾದರು. ಕೋಶಾಧಿಕಾರಿ ವಿನ್ಸೆಂಟ್ ಟಿ. ಡಿ’ಸೋಜಾ ವಂದಿಸಿದರು. ಕೃಷ್ಣ ಆಚಾರ್ ಸಹಕರಿಸಿದರು.