ಚೆನ್ನೈ:ವಂಡಲೂರು ಝೂ ಎಂದೇ ಜನಪ್ರಿಯವಾಗಿರುವ ತಮಿಳುನಾಡಿನ ಅರಿಗ್ನರ್ ಅಣ್ಣಾ ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹವೊಂದು ಕೋವಿಡ್ ನಿಂದ ಸಾವನ್ನಪ್ಪಿದ್ದು, ಇತರ ಎಂಟು ಸಿಂಹಗಳಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದಾಗಿ ದ ಹಿಂದೂ ವರದಿ ತಿಳಿಸಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಸದ್ಯ ಪಾಸಿಟಿವಿಟಿ ದರ ಶೇ.11 ಇದ್ದು, ಶೇ.5ಕ್ಕೆ ಬಂದರೆ ಅನ್ ಲಾಕ್ : ಸಿಎಂ BSY
ಅನಾರೋಗ್ಯದಿಂದ ಬಳಲುತ್ತಿದ್ದ ನೀಲಾ ಎಂಬ ಹೆಣ್ಣು ಸಿಂಹ ಗುರುವಾರ(ಜೂನ್ 04) ಸಂಜೆ 6.15ರ ಹೊತ್ತಿಗೆ ಸಾವನ್ನಪ್ಪಿರುವುದಾಗಿ ವಂಡಲೂರು ಪ್ರಾಣಿಸಂಗ್ರಹಾಲಯ ಬಿಡುಗಡೆಗೊಳಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ನೀಲಾ ಸಿಂಹದ ಮೂಗಿನಿಂದ ನೀರು ದ್ರವಿಸಲು ಆರಂಭಿಸಿದಾಗ ಕೂಡಲೇ ಚಿಕಿತ್ಸೆ ನೀಡಲಾಗಿತ್ತು ಎಂದು ತಿಳಿಸಿದೆ.
ಮೇ 26ರಂದು ಸಫಾರಿ ಪಾರ್ಕ್ ನಲ್ಲಿ ಐದು ಸಿಂಹಗಳಿಗೆ ಹಸಿವಿನ ಕೊರತೆ ಮತ್ತು ಕೆಮ್ಮಲು ಪ್ರಾರಂಭಿಸಿದ್ದವು. ಕೂಡಲೇ ವಂಡಲೂರು ಪ್ರಾಣಿಸಂಗ್ರಹಾಲಯದ ಪಶುವೈದ್ಯರು ಸುಮಾರು 11 ಸಿಂಹಗಳ ಅಗತ್ಯವಿರುವ ರಕ್ತದ ಮಾದರಿ, ಮೂಗಿನ ದ್ರವವನ್ನು ತಮಿಳುನಾಡು ವೆಟರ್ನರಿ ಹಾಗೂ ಪ್ರಾಣಿ ವಿಜ್ಞಾನ ಯೂನಿರ್ವಸಿಟಿ ಮತ್ತು ಭೋಪಾಲ್ ನಲ್ಲಿರುವ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಡಿಸೀಸ್ ಗೆ ಕಳುಹಿಸಿಕೊಡಲಾಗಿತ್ತು.
ಪ್ರಯೋಗಾಲಯದ ಪರೀಕ್ಷೆಯಲ್ಲಿ ಕಂಡು ಬಂದ ಫಲಿತಾಂಶದ ಪ್ರಕಾರ ಹನ್ನೊಂದು ಸಿಂಹಗಳಲ್ಲಿ ಒಂಬತ್ತು ಸಿಂಹಕ್ಕೆ SARS coV-2 ಸೋಂಕು ದೃಢಪಟ್ಟತ್ತು. ಈ ಎಲ್ಲಾ ಸಿಂಹಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಅಲ್ಲದೇ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ ಎಂದು ವರದಿ ಹೇಳಿದೆ.