Advertisement

ಆಪ್ರಿಕಾದಲ್ಲಿ ಸಿಂಹದ ಬೇಟೆಗಾರರು

12:30 AM Feb 21, 2019 | |

ತಾಂಜಾನಿಯಾ ಮತ್ತು ಕೀನ್ಯಾ ದೇಶಗಳ ಕಾಡುಗಳ ಅಂಚಿನಲ್ಲಿರುವ ಮಸಾಯಿ ಬುಡಕಟ್ಟು ಜನರು ಅಪರಿಚಿತರೊಡನೆ ವ್ಯವಹರಿಸುವುದಿಲ್ಲ. ಮಾಂಸಪ್ರಿಯರಾಗಿರುವ ಇವರು ಪ್ರಾಣಿಗಳನ್ನೂ ಸಾಕುತ್ತಾರೆ. ಈ ಸಮುದಾಯದಲ್ಲಿ ಪ್ರಾಣಿಗಳ ಸಂಖ್ಯೆ ಮತ್ತು ಮಕ್ಕಳ ಸಂಖ್ಯೆಯನ್ನು ಆಧರಿಸಿ ವ್ಯಕ್ತಿಯ ಸಂಪತ್ತನ್ನು ನಿರ್ಧರಿಸಲಾಗುತ್ತದೆ.

Advertisement

ಪ್ರಪಂಚವು ಎಷ್ಟೇ ಮುಂದುವರೆಯಲಿ ಕೆಲವರು ತಮ್ಮದೇ ಸಂಸ್ಕೃತಿಯನ್ನು ಅನುಸರಿಸಿಕೊಂಡು ಹೋಗುತ್ತಾರೆ. ಅದರಲ್ಲೂ ಕೆಲ ದೇಶಗಳ ಬುಡಕಟ್ಟು ಜನರ ಸಂಪ್ರದಾಯ- ಸಂಸ್ಕೃತಿ ಕೇಳಿದರೆ ತೀರಾ ವಿಸ್ಮಯ ಎನಿಸುವುದು ಸುಳ್ಳಲ್ಲ. ಅಂಥದೊಂದು ಸಂಪ್ರದಾಯವನ್ನು ಆಫ್ರಿಕಾ ಖಂಡದ ಮಸಾಯಿ ಬುಡಕಟ್ಟು ಜನಾಂಗ ಪಾಲಿಸಿಕೊಂಡು ಬರುತ್ತಿದೆ. 

ಬೇರೆಯದೇ ಕಾನೂನು
ತಾಂಜಾನಿಯಾ ಮತ್ತು ಕೀನ್ಯಾ ದೇಶಗಳ ಕಾಡುಗಳ ಅಂಚಿನಲ್ಲಿ ಮಸಾಯಿ ಜನರು ಹೆಚ್ಚಾಗಿ ಕಂಡು ಬರುತ್ತಾರೆ. ಮಸಾಯ್‌ ಮಾರಾ, ಸೆರೆಂಗಟಿ ಮತ್ತು ಅಂಬೊಸೇಲಿ ಮೀಸಲು ಅರಣ್ಯ ಪ್ರದೇಶದಲ್ಲಿ ವಾಸಿಸುವ ಇವರು ಕುರಿಗಾರಿಕೆ ಮತ್ತು ಬೇಟೆಯನ್ನು ಮುಖ್ಯ ಕಸುಬಾಗಿಸಿಕೊಂಡಿದ್ದಾರೆ. ಕೀನ್ಯಾ ಮತ್ತು ತಾಂಜಾನಿಯಾಗಳ ನಿವಾಸಿಗಳಾಗಿರುವ ಇವರ ಒಟ್ಟು ಜನಸಂಖ್ಯೆ 10 ಲಕ್ಷದಷ್ಟಿದೆ. ಆದರೆ ಇವರು ಯಾವುದೇ ಸರ್ಕಾರಿ ನಿಯಮಗಳನ್ನು ಮತ್ತು ಕಾನೂನುಗಳನ್ನು ಪಾಲಿಸುವುದಿಲ್ಲ. ತಮ್ಮದೇ ನಾಯಕನನ್ನು ಹೊಂದಿರುವ ಈ ಬುಡಕಟ್ಟು ಜನಾಂಗದಲ್ಲಿ ಇವರದೇ ಆದ ಕಾನೂನು ನಿಯಮಗಳಿವೆ. 

ಇವರು ದೇಹದಾಡ್ಯìಪಟುಗಳು
ಮಸಾಯಿ ಸಮುದಾಯದಲ್ಲಿ ಹಿರಿಯ ವ್ಯಕ್ತಿ ಹೇಳಿದ ಮಾತೇ ಇಲ್ಲಿ ಅಂತಿಮ.ಮಸಾಯಿ ಜನರು ಕಪ್ಪು ಬಣ್ಣದವರಾಗಿದ್ದು ಅವರ ಸಂಸ್ಕೃತಿಗೆ ತಕ್ಕಂತೆ ಕೆಂಪು ಬಣ್ಣ ಒಳಗೊಂಡಿರುವ ಉಡುಪುಗಳನ್ನು ಮಾತ್ರ ಧರಿಸುತ್ತಾರೆ. ಶೂಕಾ ಎಂದು ಕರೆಯಲ್ಪಡುವ ಈ ವಸ್ತ್ರವು ಇವರ ಗುರುತಿನ ಭಾಗವಾಗಿದೆ. ಉತ್ತಮ ದೇಹದಾಡ್ಯìವನ್ನು ಹೊಂದಿರುವ ಮಸಾಯಿಗಳು ಬೇಟೆಯಾಡುವುದರಲ್ಲಿ ನಿಸ್ಸೀಮರು. 

ಸಿಂಹವನ್ನು ಬೇಟೆಯಾಡುತ್ತಾರೆ
ಮಸಾಯಿ ಜನರು ಅಪರಿಚಿತರೊಂದಿಗೆ ವ್ಯವಹರಿಸಲು ಬಯಸುವುದಿಲ್ಲ. ಹಾಗೆಯೇ ಮಾಂಸಪ್ರಿಯರಾಗಿರುವ ಇವರು ಪ್ರಾಣಿಗಳನ್ನೂ ಸಾಕುತ್ತಾರೆ. ಪ್ರಾಣಿಗಳ ಸಂಖ್ಯೆ ಮತ್ತು ಮಕ್ಕಳ ಸಂಖ್ಯೆ ಆಧರಿಸಿ ಇವರ ಸಂಪತ್ತನ್ನು ನಿರ್ಧರಿಸಲಾಗುತ್ತದೆ. ಇವರ ಆಹಾರಗಳಲ್ಲಿ ಸಾಮಾನ್ಯವಾಗಿ ಹಾಲು ಮತ್ತು ಮಾಂಸವಲ್ಲದೆ ಪ್ರಾಣಿಗಳ ರಕ್ತವನ್ನು ಬಳಸಲಾಗುತ್ತದೆ. ಅಲ್ಲದೆ ವಿಶೇಷ ಸಂದರ್ಭದಲ್ಲಿ ಜೀವಂತ ಪ್ರಾಣಿಗಳ ರಕ್ತ ಕುಡಿಯುವ ಸಂಪ್ರದಾಯ ಕೂಡ ಚಾಲ್ತಿಯಲ್ಲಿದೆ. ರಕ್ತ ಕುಡಿಯುವುದರಿಂದ ದೇಹ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಮಸಾಯಿಗಳು ನಂಬುತ್ತಾರೆ. ಸಾಮಾನ್ಯವಾಗಿ ಇವರು ಪ್ರಾಣಿಗಳಿಗೆ ಬಾಣಗಳಿಂದ ಚುಚ್ಚಿ ರಕ್ತ ತೆಗೆದು ಕುಡಿಯುತ್ತಾರೆ.ಇನ್ನು ತಾವು ವಾಸಿಸುವ ಪ್ರದೇಶದ ಸುತ್ತಲೂ ಬೇಲಿ ಹಾಕಿ ಸಣ್ಣ ಪುಟ್ಟ ಗುಡಿಸಲಿನಲ್ಲಿ ಮಸಾಯಿ ಜನಾಂಗದವರು ವಾಸಿಸುತ್ತಾರೆ. ಇವರ ಜನಸಂಖ್ಯೆಯಲ್ಲಿ ಪುರುಷರು ಕಡಿಮೆ ಸಂಖ್ಯೆಯಲ್ಲಿದ್ದು, ಅಲ್ಲದೆ ಸಿಂಹವನ್ನು ಬೇಟೆಯಾಡಿ ಕೊಂದರೆ ಮಾತ್ರ ಪುರುಷರನ್ನು ಗಂಡಸು ಎಂದು ಒಪ್ಪಿಕೊಳ್ಳುತ್ತಾರೆ. ಇಂತಹ ಅಚ್ಚರಿ ಎನಿಸುವ ಈ ಬುಡಕಟ್ಟು ಜನಾಂಗ ಈಗ ಅಳಿವಿನಂಚಿನಲ್ಲಿದೆ.

Advertisement

ಅಚ್ಚರಿಯ ವಿಷಯವೆಂದರೆ ಮಸಾಯಿಗಳು ಸತ್ತ ಬಳಿಕ ದೇಹವನ್ನು ಹೂಳುವುದಿಲ್ಲ ಅಥವಾ ಸುಡುವುದಿಲ್ಲ. ಬದಲಾಗಿ ದೇಹವನ್ನು ಬಯಲು ಪ್ರದೇಶದಲ್ಲಿಡುತ್ತಾರೆ. ದೇಹ ಹೂಳಿದರೆ ಮಣ್ಣು ಹಾಳಾಗುತ್ತದೆ ಎಂದು ಈಗಲೂ ನಂಬಲಾಗುತ್ತಿದೆ.   

ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next