ಭೋಪಾಲ್: ಆಯುರ್ವೇದ ಮತ್ತು ಯೋಗವನ್ನು ನಿರ್ದಿಷ್ಟ ಧರ್ಮ ಅಥವಾ ಸಮುದಾಯದ ಜತೆ ತಳುಕುಹಾಕುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ (ಮೇ 28) ತಿಳಿಸಿದ್ದಾರೆ.
ಇದನ್ನೂ ಓದಿ:ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ : ಕಾರ್ಯ ವಿಧಾನದ ವಿಕೃತಿ ಎಂದ ಚಿದಂಬರಂ
ಆರೋಗ್ಯ ಭಾರತಿ ಆಯೋಜಿಸಿದ್ದ “ಒಂದು ರಾಷ್ಟ್ರ-ಒಂದು ಆರೋಗ್ಯ ವ್ಯವಸ್ಥೆ”ಯ ಆರೋಗ್ಯ ಮಂಥನ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಷ್ಟ್ರಪತಿ ಕೋವಿಡ್ ಈ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ದೇಶದ ನಾಗರಿಕರನ್ನು ಆರೋಗ್ಯವಂತರನ್ನಾಗಿ ಮಾಡುವ ಸಮಗ್ರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಭಾರತಿ ಕೆಲಸವನ್ನು ರಾಷ್ಟ್ರಪತಿ ಕೋವಿಂದ್ ಈ ಸಂದರ್ಭದಲ್ಲಿ ಶ್ಲಾಘಿಸಿದರು. ಅಷ್ಟೇ ಅಲ್ಲ ಸಂಸ್ಥೆ ರಾಷ್ಟ್ರಮಟ್ಟದಲ್ಲಿಯೂ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುತ್ತಿರುವುದು ಉತ್ತಮವಾದ ಕೆಲಸವಾಗಿದೆ ಎಂದು ಹೇಳಿದರು.
“ಯಾವಾಗ ಪ್ರತಿಯೊಬ್ಬರು ವೈಯಕ್ತಿಕಾಗಿ ಆರೋಗ್ಯವಾಗಿರುತ್ತಾರೋ, ಆಗ ಎಲ್ಲಾ ಕುಟುಂಬವೂ ಆರೋಗ್ಯವಂತವಾಗಿರುತ್ತದೆ. ಒಂದು ವೇಳೆ ಪ್ರತಿಯೊಂದು ಕುಟುಂಬವೂ ಆರೋಗ್ಯವಾಗಿದ್ದರೆ, ಬಳಿಕ ಪ್ರತಿ ಹಳ್ಳಿ ಮತ್ತು ಪ್ರತಿ ನಗರ ಆರೋಗ್ಯವಂತವಾಗಿರುತ್ತದೆ…ಇದರ ಪರಿಣಾಮ ಇಡೀ ದೇಶವು ಆರೋಗ್ಯವಂತವಾಗಿರುತ್ತದೆ ಎಂದು ರಾಷ್ಟ್ರಪತಿ ಕೋವಿಂದ್ ತಿಳಿಸಿದರು.
2017ರಲ್ಲಿ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಘೋಷಿಸುವ ಮೂಲಕ ದೇಶದ ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾಗಬೇಕೆಂಬುದು ಕೇಂದ್ರ ಸರ್ಕಾರದ ಗುರಿಯಾಗಿತ್ತು. ಎಲ್ಲರಿಗೂ ಉತ್ತಮ ದರ್ಜೆಯ ಆರೋಗ್ಯ ಸೇವೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.