ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಕಾವು ಇನ್ನಷ್ಟು ತೀವ್ರಗೊಂಡಿರುವುದಕ್ಕೆ ಸಾಕ್ಷಿಯಾಗಿ ಮಾತೆ ಮಹಾದೇವಿ ಅವರು ಲಿಂಗಾಯತರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಬಹಿರಂಗ ಮನವಿ ಮಾಡಿದ್ದಾರೆ.
ಬಸವ ಭವನದಲ್ಲಿ ಶನಿವಾರ ನಡೆದ ಲಿಂಗಾಯತ ಸ್ವಾಮೀಜಿಗಳ ಸಭೆಯಲ್ಲಿ ಕೇಂದ್ರ ಸರ್ಕಾರ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಆಕ್ರೋಶ ಹೊರ ಹಾಕಿದ ಮಾತೆ ಮಹಾದೇವಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು. ಯಾವುದೇ ಮುಚ್ಚುಮರೆ ಬೇಡ ಎಂದರು.
ಅಮಿತ್ ಶಾ ಅವರು ಪ್ರತ್ಯೇಕ ಲಿಂಗಾಯತದ ಪ್ರಸ್ತಾವನೆಯನ್ನು ತಿರಸ್ಕರಿಲು ಯಾರು ಎಂದು ಪ್ರಶ್ನಿಸಿದರು.
ಮಾತೆ ಮಹಾದೇವಿ ಅವರ ಹೇಳಿಕೆ ವಿರುದ್ಧ ಹಲವು ಮಠಾಧಿಪತಿಗಳು, ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ವೀರಶೈವರು ಸೇರಿದಂತೆ ಹಲವರ ವಿರೋಧವನ್ನೂ ಲೆಕ್ಕಿಸದೆ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.