Advertisement

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಕಹಳೆ

06:30 AM Aug 23, 2017 | Team Udayavani |

ಬೆಳಗಾವಿ : ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡುವ ವಿಚಾರವಾಗಿ ಸರ್ವೋತ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಮನ್ನಿಸಿ ಯಾವುದೇ ವಿಳಂಬಕ್ಕೆ ಆವಕಾಶ ಕೊಡದೆ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂಬ ಒಂದೇ ನಿರ್ಣಯದ ಮೂಲಕ ಲಿಂಗಾಯತ ಸಮಾಜದ ಜನರು ಮತ್ತೂಮ್ಮೆ ಕೇಂದ್ರ ಹಾಗೂ ರಾಜ್ಯ ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸಿದರು.

Advertisement

ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಬೆಳಗಾವಿಯ ನೆಲದಲ್ಲಿ ಮಂಗಳವಾರ ಸೇರಿದ್ದ ಲಕ್ಷಾಂತರ ಜನರ ಸಮ್ಮುಖದಲ್ಲಿ ನಾಡಿನ ವಿವಿಧೆಡೆಗಳಿಂದ ಬಂದಿದ್ದ 50ಕ್ಕೂ ಹೆಚ್ಚು ಮಠಾಧೀಶರು, ಮಾತೆಯರು ಹಾಗೂ ರಾಜಕೀಯ ಮುಖಂಡರು ಈ ಒತ್ತಾಯ ಮಾಡಿದರಲ್ಲದೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು. ಈ ಸಮಾವೇಶದಲ್ಲಿ ಭಾಗಿಯಾಗಿದ್ದ ಮಠಾಧೀಶರು ವೀರಶೈವ ಮಠಾಧೀಶರ ವಿರುದಟಛಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಖೀಲ ಭಾರತ ಲಿಂಗಾಯತ  ಮಹಾಸಭಾ ಸ್ಥಾಪಿಸುವ ಹಾಗೂ ಬಸವ ಸೇನೆ ಕಟ್ಟುವ ಘೋಷಣೆ ಮಾಡಿದರು. ಇನ್ನು ಒಂದು ಸಾಲಿನ ನಿರ್ಣಯ ಮಂಡಿಸಿದ ಶಾಸಕ ಬಸವರಾಜ ಹೊರಟ್ಟಿ ಲಿಂಗಾಯತ ಧರ್ಮವು ಹಿಂದೂ ಸಮಾಜದಿಂದ ಭಿನ್ನವಾದ ಹಾಗೂ ಸ್ವತಂತ್ರ ಧರ್ಮವಾಗಿದೆ.

ಆದಕಾರಣ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸರ್ವೋತ್ಛ ನ್ಯಾಯಾಲಯದ ತೀರ್ಪು ಮನ್ನಿಸಿ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಎಲ್ಲ ಮಠಾಧೀಶರು ಹಾಗೂ ಆಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಕರತಾಡನದ ಮೂಲಕ ಆನುಮೋದನೆ ನೀಡಿತು.

ಎರಡನೇ ಕ್ರಾಂತಿ: ಇದಕ್ಕೂ ಮುನ್ನ ಮಾತನಾಡಿದ ಮಠಾಧೀಶರು ಹಾಗೂ ರಾಜಕೀಯ ನಾಯಕರು, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣ ಕ್ರಾಂತಿ ಮಾಡಿದರು. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಿದರೆ ಹಿಂದೂ ಧರ್ಮಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಇದರ ಬಗ್ಗೆ ಆತಂಕ ವ್ಯಕ್ತಪಡಿಸಿದವರ ಬಗ್ಗೆ ನಮಗೆ ಕಳಕಳಿ ಇದೆ. ಆದರೆ ನಮ್ಮ ವಿಷಯದಲ್ಲಿ ಮೂಗು ತೂರಿಸುವದು ಬೇಡ ಎಂದು ಬಹುತೇಕ ಮಠಾಧೀಶರು ಆರ್‌ಎಸ್‌ಎಸ್‌ ಪ್ರಮುಖ ಮೋಹನ್‌ ಭಾಗವತ್‌ಗೆ ಸಂದೇಶ ರವಾನಿಸಿದರು.

ವೀರಶೈವರು ನಮ್ಮ ಜೊತೆ ಬಂದರೆ ಅವರನ್ನು ಆಪ್ಪಿಕೊಳ್ಳುತ್ತೇವೆ. ಇಲ್ಲದಿದ್ದರೆ ಗಾಂಧೀಜಿ ಬ್ರಿಟಿಷರ ವಿರುದ್ದ ಭಾರತ ಬಿಟ್ಟು ತೊಲಗಿ ಚಳವಳಿ ಮಾಡಿದಂತೆ ವೀರಶೈವರ ವಿರುದಟಛಿ ಚಳವಳಿ ಮಾಡಬೇಕಾಗುತ್ತದೆ ಎಂದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಎಚ್ಚರಿಸಿದರು. ಮಾತೆ ಮಹಾದೇವಿ ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಿಸಿದ ನಂತರವೂ ಹಿಂದೂ ಧರ್ಮವನ್ನು ವಿರೋಧಿಸುವುದಿಲ್ಲ. ಇದನ್ನು ಕೇಂದ್ರ ಅರ್ಥ ಮಾಡಿಕೊಳ್ಳಬೇಕು ಎಂದರು. ಲಿಂಗಾಯತ ಧರ್ಮದ ವಿಚಾರದಿಂದ ದೂರ ಉಳಿದ ಬಿಜೆಪಿ ನಾಯಕರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಮುರುಘಾ ಶರಣರು ಮಾತನಾಡಿ, ಸಾವಿರಾರು ವಿರಕ್ತಮಠದ ಮಠಾಧೀಶರು ಈ ಸಮಾವೇಶಕ್ಕೆ ಬರ ಬೇಕಿತ್ತು. ಆದರೆ ಗೈರು ಹಾಜರಾದ ಮಠಾಧೀಶರ ಹೃದಯ ಪರಿವರ್ತನೆ ಮಾಡಬೇಕಿದೆ ಎಂದರು.

ಬಿಜೆಪಿ ನಾಯಕರು ಗೈರು: ಸಮಾವೇಶದಲ್ಲಿ ಬಿಜೆಪಿ ನಾಯಕರ ಗೈರು ಎದ್ದುಕಂಡಿತು. ಕೆಲ ಮಠಾಧೀಶರು ಈ ಬಗ್ಗೆ ಅಸಮಾಧಾನವನ್ನೂ ಹೊರ ಹಾಕಿದರು. ಕಾಂಗ್ರೆಸ್‌ ಮುಖಂಡರಾದ ಆಶೋಕ ಪಟ್ಟಣ, ವೀರಣ್ಣ ಮತ್ತಿಕಟ್ಟಿ, ಗಣೇಶ ಹುಕ್ಕೇರಿ, ಲಕ್ಷ್ಮಿ ಹೆಬ್ಟಾಳಕರ ಪಾಲ್ಗೊಂಡಿದ್ದರು. ಸಮಾವೇಶದ ನಂತರ ಮಠಾಧೀಶರು, ಲಿಂಗಾಯತ ಸಮಾಜದ ಮುಖಂಡರು, ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next