ಬೆಂಗಳೂರು: ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬಂಧನದ ಹಿಂದೆ ದೆಹಲಿ ಸೇರಿದಂತೆ ರಾಜ್ಯದಲ್ಲಿ ಪ್ರಚಲಿತರಿರುವ ರಾಜಕಾರಣಿಗಳ ಕೈವಾಡವಿದೆ ಎಂದು ಲಿಂಗಾಯತ ಪಂಚಮಸಾಲಿ ಮಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ವಿನಯ್ ಕುಲಕರ್ಣಿ ಬಂಧನ ವಿರೋಧಿಸಿ ಸುದ್ದಿಗೋಷ್ಟಿ ನಡೆಸಿದ ಅವರು, ಲಿಂಗಾಯತ ಸಮಾಜಿದ ಮುಖಂಡ, ಕಾರ್ಮಿಕ ಜನಾಂಗದ ಮುಖಂಡರೊಬ್ಬರನ್ನು ಸಿಬಿಐ ಪೊಲೀಸರು ಬಂಧಿಸಿರುವುದು ಖಂಡನೀಯ. ಉತ್ತಮ ಹಿನ್ನಲೆಯುಳ್ಳ ಕುಟುಂಬದಿಂದ ಬಂದ ವ್ಯಕ್ತಿಯನ್ನು ಬೆಳಗಿನ ಜಾವ ಏಕಾಏಕಿ ಬಂಧಿಸಿರುವುದು ಸರಿಯಲ್ಲ. ಕನಿಷ್ಠ ನೋಟಿಸ್ ನೀಡಬಹುದಿತ್ತು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.
ಚುನಾವಣೆ ಸಂದರ್ಭದಲ್ಲಿ ಕೇವಲ ನಮ್ಮ ಜನಾಂಗವನ್ನು ಬಳಕೆ ಮಾಡಿಕೊಳ್ಳುವ ಪವೃತ್ತಿಯನ್ಬು ರಾಜಕೀಯ ನಾಯಕರು ಬೆಳೆಸಿಕೊಂಡಿದ್ದಾರೆ. ಯೋಗಿಶ್ ಗೌಡ ಕೊಲೆ ಪ್ರಕರಣದಲ್ಲಿ ಅಫರಾಧಿ ಅಲ್ಲದಿದ್ದರೂ ವಿನಯ್ ಕುಲಕರ್ಣಿಯವರನ್ನು ವಿಚಾರಣೆಗೆ ಒಳಪಡಿಸುವುದು ಸರಿಯಲ್ಲ. ಈ ವಿಚಾರದಲ್ಲಿ ಸಿಎಂ ಸಕರಾತ್ಮಕ ನಿರ್ಧಾರ ಕೈಗೊಳ್ಳಬೇಕು. ನಮ್ಮ ಇಡೀ ಸಮುದಾಯ, ಪಂಚಾಮಸಾಲಿ ಮಠ ಕುಲಕರ್ಣಿ ಜೊತೆಗಿದೆ ಎಂದರು.
ಇದನ್ನೂ ಓದಿ:ಯೋಗೀಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ, ಸಹೋದರ ವಿಜಯ್ ಸಿಬಿಐ ವಶಕ್ಕೆ
ಇಡೀ ಧಾರವಾಡದಲ್ಲಿ ವಿನಯ್ ಕುಲಕರ್ಣಿ ಏನು ಎಂದು ಗೊತ್ತಿದೆ. ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನ ನಡೆಸಿರುವುದು ಸರಿಯಲ್ಲ. ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಸ್ವಾಮೀಜಿ ಹೇಳಿದರು.
ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಅವರ ಕುಟುಂಬದವರು ಖುದ್ದಾಗಿ ಸಿಎಂ ಭೇಟಿ ಮಾಡಿ ಪ್ರಕರಣದ ವಿಚಾರ ಕುರಿತು ಮನವರಿಕೆ ಮಾಡುವ ಪ್ರಯತ್ನ ನಡೆಸಲಾಗುವುದು. ವಿಚಾರಣೆಗೆ ಕರೆದೊಯ್ದ ರೀತಿ ಸರಿಯಿಲ್ಲ. ರೌಡಿಗಳನ್ನ ಎಳೆದುಕೊಂಡು ಹೋಗುವ ರೀತಿ ನಡೆಸಿಕೊಂಡಿರುವುದು ಸರಿಯಲ್ಲ ಎಂದರು.