Advertisement
ಚುನಾಯಿತ ಜನಪ್ರತಿನಿಧಿಗಳಲ್ಲಿ ಅತಿದೊಡ್ಡ ಪಾಲು ಹೊಂದಿರುವುದು ಲಿಂಗಾಯತ ಸಮುದಾಯ. ಈ ಸಮುದಾಯದ 62 ಮಂದಿ ಶಾಸಕರಾಗಿದ್ದಾರೆ. ಎರಡನೇ ಅತಿದೊಡ್ಡ ಸಂಖ್ಯೆಯಲ್ಲಿ ಒಕ್ಕಲಿಗರಿದ್ದು, ಒಟ್ಟಾರೆ 45 ಶಾಸಕರು ಚುನಾಯಿತರಾಗಿದ್ದಾರೆ.
ಲಿಂಗಾಯತ ಸಮುದಾಯದ ಗರಿಷ್ಠ 39 ಶಾಸಕರನ್ನು ಬಿಜೆಪಿ ಹೊಂದಿದೆ. ಆಡಳಿತರೂಢ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಕ್ರಮವಾಗಿ 18 ಮಂದಿ ಐವರು ಲಿಂಗಾಯತ ಶಾಸಕರಿದ್ದಾರೆ.
Related Articles
Advertisement
ಪರಿಶಿಷ್ಟ ಜಾತಿಯ ಶಾಸಕರು ಬಿಜೆಪಿಯಲ್ಲಿ ಗರಿಷ್ಠ ಸಂಖ್ಯೆಯಲ್ಲಿದ್ದು, 17 ಮಂದಿ ಚುನಾಯಿತರಾಗಿದ್ದಾರೆ. ಕಾಂಗ್ರೆಸ್‌ನಿಂದ 12 ಹಾಗೂ ಜೆಡಿಎಸ್‌ನಿಂದ 6 ಮಂದಿ ಗೆದ್ದಿದ್ದಾರೆ. ಜತೆಗೆ ಬಿಎಸ್‌ಪಿ ಹಾಗೂ ಪಕ್ಷೇತರರು ತಲಾ ಒಬ್ಬರಿದ್ದಾರೆ. ಪರಿಶಿಷ್ಟ ಪಂಗಡದ ಶಾಸಕರು ಕಾಂಗ್ರೆಸ್‌ನಿಂದ ಗರಿಷ್ಠ 10 ಮಂದಿ ಇದ್ದು, ಬಿಜೆಪಿಯಿಂದ 7 ಮಂದಿ ಗೆಲುವು ಸಾಧಿಸಿದ್ದಾರೆ.
ರೆಡ್ಡಿ ಸಮುದಾಯದ ಬಿಜೆಪಿಯಿಂದ ಗರಿಷ್ಠ ಐವರು, ಕಾಂಗ್ರೆಸ್‌ನಿಂದ ಮೂವರು ಹಾಗೂ ಜೆಡಿಎಸ್‌ನಿಂದ ಒಬ್ಬರು ಗೆದ್ದಿದ್ದಾರೆ. ಕುರುಬ ಸಮುದಾಯದಿಂದ ಕಾಂಗ್ರೆಸ್‌ನಲ್ಲಿ 8 ಮಂದಿ, ಜೆಡಿಎಸ್‌ನಲ್ಲಿ ಇಬ್ಬರು, ಬಿಜೆಪಿ ಹಾಗೂ ಕೆಪಿಜೆಪಿಯಿಂದ ತಲಾ ಒಬ್ಬರು ಜಯ ಪಡೆದಿದ್ದಾರೆ. ಮರಾಠ ಸಮುದಾಯದಿಂದ ಬಿಜೆಪಿ 1 ಹಾಗೂ ಕಾಂಗ್ರೆಸ್‌ನಿಂದ ಇಬ್ಬರು ಗೆದ್ದಿದ್ದಾರೆ. ಮುಸ್ಲಿಂ ಸಮುದಾಯದಿಂದ ಕಾಂಗ್ರೆಸ್‌ನಲ್ಲಿ 7 ಮಂದಿ ಗೆದ್ದಿ ದ್ದಾರೆ. ಬಿಜೆಪಿಯಲ್ಲಿ ಬ್ರಾಹ್ಮಣ ಸಮುದಾಯದ 8, ಬಂಟ ಸಮುದಾಯದ 5, ಈಡಿಗ ಸಮುದಾಯದ ಐವರು, ಇಬ್ಬರು ಕೊಡವರು ಆಯ್ಕೆಯಾಗಿದ್ದರೆ, ಮೊಗವೀರ, ಗೌಡ ಸಾರಸ್ವತ, ನಾಮಧಾರಿ, ಗಾಣಿಗ ಶೆಟ್ಟಿ, ಕೊಂಕಣಿ ಮರಾಠ, ಜೈನ, ಯಾದವ ಸಮುದಾಯದಿಂದ ತಲಾ ಒಬ್ಬರು ಆಯ್ಕೆಯಾಗಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನಿಂದ ರಜಪೂತ ಸಮುದಾಯದಿಂದ ಇಬ್ಬರು, ಕ್ರಿಶ್ಚಿಯನ್ ಸಮುದಾಯ ಮತ್ತು ಉಪ್ಪಾರ, ಬ್ರಾಹ್ಮಣ, ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದಿಂದ ತಲಾ ಒಬ್ಬರು ಗೆದ್ದು ಬಂದಿದ್ದಾರೆ.