Advertisement

ಲಿಂಗಾಯತಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಸಿಗಲಿ: ರಾಯರಡ್ಡಿ

08:05 AM Aug 16, 2017 | |

ಕೊಪ್ಪಳ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಕಲ್ಪಿಸುವ ಕುರಿತು ಸಂವಿಧಾನದಲ್ಲಿ ಅವಕಾಶವಿಲ್ಲ. ಹಾಗಾಗಿ ಅಲ್ಪಸಂಖ್ಯಾತರ ಸ್ಥಾನ-ಮಾನ ಕಲ್ಪಿಸುವುದು ಸೂಕ್ತ. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕೆನ್ನುವ ನಿಲುವು ನನ್ನದೂ
ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಕಲ್ಪಿಸಲು ಆಗ್ರಹಿಸಿ ನೂರಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ, ಇತ್ತೀಚೆಗೆ ಲಿಂಗಾಯತ-ವೀರಶೈವದ ನಡುವೆ ಸಮಾಜದಲ್ಲಿ ಗೊಂದಲ, ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿವೆ. ವಿರಕ್ತ ಮಠ- ಪಂಚಪೀಠಗಳು ತಮ್ಮದೇ ನಿಲವು ವ್ಯಕ್ತಪಡಿಸಿವೆ. ಲಿಂಗಾಯತರು ಹಿಂದೂ ಸಮುದಾಯಕ್ಕಿಂತಲೂ ಭಿನ್ನರು. ವೀರಶೈವ ಹಾಗೂ ಲಿಂಗಾಯತ ಒಂದು ನಿಲುವು ಪ್ರಕಟಿಸಬೇಕು ಎಂದರು. ಯಾರ ವಿರುದಟಛಿವೂ ಮಾತನಾಡಬೇಡಿ ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರಿಗೆ ಮನವಿ ಮಾಡಿದ್ದೇನೆ. ಆ.23ರಂದು ಬೆಂಗಳೂರಿನಲ್ಲಿ ಕರೆದಿರುವ ಲಿಂಗಾಯತ -ವೀರಶೈವ ಸಮುದಾಯದ ಮುಖಂಡರು ಹಾಗೂ ಸ್ವಾಮೀಜಿಗಳ ಸಭೆಯಲ್ಲಿ ಒಂದು ನಿರ್ಣಯಕ್ಕೆ ಬರಲು ಕೋರಿದ್ದೇನೆ ಎಂದರು. 

ಮೋಡ ಬಿತ್ತನೆ: ಆ.18 ರಿಂದ ಗದಗ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆ ಮಾರ್ಗ ವಾಗಿ ಮೋಡ ಬಿತ್ತನೆ ಪ್ರಕ್ರಿಯೆ ಆರಂಭವಾಗಲಿದೆ. ಸಚಿವ ಎಚ್‌.ಕೆ. ಪಾಟೀಲರು 3 ಕೇಂದ್ರಗಳ ಮೂಲಕ ಮೋಡ ಬಿತ್ತನೆಯ ಯೋಜನೆ ರೂಪಿಸಿದ್ದಾರೆ. ವೈಜ್ಞಾನಿಕವಾಗಿಯೇ ಮೋಡ ಬಿತ್ತನೆ ಪ್ರಕ್ರಿಯೆ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next