Advertisement

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಭ್ಯಂತರವಿಲ್ಲ: ಸಚಿವ ಹೆಗಡೆ

08:07 AM Nov 04, 2017 | Team Udayavani |

ಯಲ್ಲಾಪುರ: ಕೇವಲ ಮುಸ್ಲಿಂ, ಕ್ರೈಸ್ತ, ಜೈನ್‌, ಫಾರ್ಸಿಗಳು ಮಾತ್ರ ಅಲ್ಪಸಂಖ್ಯಾತರೆಂದು ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಅದು ಲಿಂಗಾಯತರಿಗೂ ಸಿಗುವುದಾದರೆ ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮ ಆಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಕೇಂದ್ರ ಕೌಶಲಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

Advertisement

ಶುಕ್ರವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಅಧಿಕಾರಿಗಳು ತಿಂಗಳ ಸಂಬಳವನ್ನು ಮನೆಗೆ ಒಯ್ಯುವ ಬದಲು ಸರ್ಕಾರಕ್ಕೆ ಮಾಮೂಲಿ ನೀಡುವುದರಲ್ಲೇ ಖರ್ಚಾಗುವಂತ ಸ್ಥಿತಿ ರಾಜ್ಯದಲ್ಲಿದೆ. ಆಯಾ ಕ್ಷೇತ್ರದ ಚುನಾವಣಾ ಖರ್ಚುಗಳನ್ನು ಅಧಿ ಕಾರಿಗಳು ನೀಡುವ ಮಾಮೂಲಿಯಲ್ಲೇ ನಿಭಾಯಿಸುವ ಸಿದ್ಧತೆಯಲ್ಲಿ ಕಾಂಗ್ರೆಸ್‌ನವರು ತೊಡಗಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಾಣದಷ್ಟು ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜಕೀಯದಲ್ಲಿ ಶಿಷ್ಟಾಚಾರ ಮಾಯವಾಗಿದೆ. ಮುಖ್ಯಮಂತ್ರಿಗಳ ವರ್ತನೆಯಿಂದ ಸಭ್ಯರು ತಲೆತಗ್ಗಿಸುವಂತಾಗಿದೆ. ಸೋಲಿನ ಭೀತಿಯಿಂದ ಪರಿವರ್ತನಾ ರ್ಯಾಲಿಗೆ ತಡೆಯೊಡ್ಡಲು ಕಾಂಗ್ರೆಸ್‌ ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನಿಸಿದರೂ ಪರಿವರ್ಥನಾ ರ್ಯಾಲಿ ವ್ಯವಸ್ಥಿತವಾಗಿಯೇ ನಡೆಯುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next