Advertisement

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ 5 ಮಹತ್ವದ ಸರ್ವ ಸಮ್ಮತ ನಿರ್ಣಯ

06:25 PM Aug 10, 2017 | Team Udayavani |

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಲಿಂಗಾಯತ ಧರ್ಮ ಸಮಾಲೋಚನಾ ಸಭೆಯಲ್ಲಿ  5 ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.

Advertisement

ಬೆಂಗಳೂರಿನಲ್ಲಿ ನಡೆದ ಲಿಂಗಾಯತ ಧರ್ಮ ಸಮಾಲೋಚನಾ ಸಮಾರಂಭದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಚಿಂತಕರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಮಾಜಿ ಸಚಿವ ಬಸವರಾಜ ಹೊರಟ್ಟಿ ಅವರು 5 ನಿರ್ಣಯಗಳನ್ನು ಮಂಡಿಸಿದ್ದು, ವೀರಣ್ಣ ಮತ್ತಿಕಟ್ಟಿ ಅವರು ನಿರ್ಣಯವನ್ನು ಅನುಮೋದಿಸಿದರು.

ವೀರಶೈವಕ್ಕೂ ಲಿಂಗಾಯತಕ್ಕೂ ಯಾವುದೇ ಸಂಬಂಧ ಇಲ್ಲ. ಎರಡೂ ಯಾವತ್ತಿಗೂ ಪ್ರತ್ಯೇಕವೇ. ಇನ್ಮುಂದೆ ನಮ್ಮ ನಾಲಗೆಯಿಂದ ವೀರಶೈವ ಶಬ್ದ ಬರಬಾರದು ಎಂದು ಲಿಂಗಾಯತ ಧರ್ಮ ಸಮಾಲೋಚನಾ ಸಭೆಯಲ್ಲಿ ಭಾಲ್ಕಿಯ ಬಸವಲಿಂಗ ಪಟ್ಟದೇವರು ಸ್ವಾಮೀಜಿ ಹೇಳಿದರು.

ಐದು ನಿರ್ಣಯಗಳು:

ಅಖಿಲ ಭಾರತ ವೀರಶೈವ ಮಹಾಸಭಾದ ಹೆಸರು ಬದಲಿಸಬೇಕು

Advertisement

1941ರಲ್ಲಿ ದಾವಣಗೆರೆಯಲ್ಲಿ ಈ ಬಗ್ಗೆ ನಿರ್ಣಯವಾಗಿತ್ತು.

ಬಸವಣ್ಣನವರ ವಚನಗಳನ್ನು ವೀರಶೈವರು ಬಳಸುವಂತಿಲ್ಲ

ಬಸವ ತತ್ವ ಪ್ರಚಾರ ಬಿಟ್ಟು ಬೇರಾವ ಕೆಲಸ ಮಾಡುವಂತಿಲ್ಲ

ವಿರಕ್ತ ಮಠದ ಸ್ವಾಮಿಗಳು ಬೇರಾವ ಕೆಲಸ ಮಾಡುವಂತಿಲ್ಲ.

ಬೇರೆ ಕೆಲಸ ಮಾಡುವುದಾದರೆ ಪೀಠ ತ್ಯಾಗ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next