ಬಾಗಲಕೋಟೆ: “ನಾನು ಬಸವ ಜನ್ಮ ಮತ್ತು ಐಕ್ಯ ಭೂಮಿಯಲ್ಲಿ ಹುಟ್ಟಿದವ. ಹೀಗಾಗಿ ಬಸವಣ್ಣನವರು ಹುಟ್ಟು ಹಾಕಿದ ಲಿಂಗಾಯತ ಪ್ರತ್ಯೇಕ ಧರ್ಮವಾಗಲೇಬೇಕು. ಅದಕ್ಕಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ. ಪ್ರತ್ಯೇಕ ಧರ್ಮ ಸ್ಥಾಪನೆಗಾಗಿ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಕೊಟ್ಟಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತ
ನಾಡಿ, ಲಿಂಗಾಯತ ಧರ್ಮದಲ್ಲಿ 99 ಉಪ ಜಾತಿಗಳಿವೆ.
ಅದರಲ್ಲಿ ಮೈಸೂರು ಭಾಗದ ವೀರಶೈವ ಎಂಬುದೂ ಒಂದು ಉಪಜಾತಿ. ಲಿಂಗಾಯತ ಒಂದು ಜಾತ್ಯತೀತ ಧರ್ಮವಾಗಿದೆ. ಬಸವಣ್ಣನವರ ಕಲ್ಯಾಣ ಕ್ರಾಂತಿಯ ಬಳಿಕ ಈಚೆಗೆ ವೀರಶೈವ ಮಹಾಸಭಾ ಮತ್ತು ಜಾತಿ ಚಾಲ್ತಿಗೆ ಬಂದಿದೆ. ವೀರಶೈವ ಮಹಾಸಭಾ ಏಕೆ ಹುಟ್ಟಿತು ಎಂಬುದನ್ನು ಸೂಕ್ತ ಸಂದರ್ಭದಲ್ಲಿ ಬಿಚ್ಚಿಡುತ್ತೇನೆ. ಈ ವೀರಶೈವ ಮಹಾಸಭೆ ಹುಟ್ಟು ಹಾಕುವ ವೇಳೆ ನನ್ನ ಅಜ್ಜ ಶಿರಸಂಗಿ ಲಿಂಗರಾಜರೂ ಇದ್ದರು ಎಂದರು.
ಬಿಎಸ್‌ವೈ ಹಿಂದೂ ಧರ್ಮಕ್ಕೆ: ಹಿಂದೆ ವೀರಶೈವ ಲಿಂಗಾಯತ ಧರ್ಮಕ್ಕಾಗಿ ನಾನೂ ಸೇರಿ ಯಡಿಯೂರಪ್ಪ ಕೂಡ ಸಹಿ ಮಾಡಿದ್ದರು. ಆಗ ನಾನು ತಪ್ಪು ಮಾಡಿದೆ ಎಂದು ಒಪ್ಪಿಕೊಂಡಿದ್ದೇನೆ. ಯಡಿಯೂರಪ್ಪ ಅವರಿಗೆ ಲಿಂಗಾಯತ ಧರ್ಮ ಪ್ರತ್ಯೇಕ ಆಗುವುದು ಬೇಕಿಲ್ಲ. ಅವರ ಪಕ್ಷದ ಮತ್ತು ಆರ್‌ಎಸ್‌ಎಸ್ ಕಟ್ಟುಪಾಡುಗಳಿಂದ ಬಿಎಸ್‌ವೈ ವೀರಶೈವ – ಲಿಂಗಾಯತ ಎರಡನ್ನೂ ಬಿಟ್ಟು ಹಿಂದೂ ಧರ್ಮಕ್ಕೆ
ಹೋಗಿದ್ದಾರೆ ಎಂದು ಟೀಕಿಸಿದರು.