ಶಾಸಕರು. 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಕಳೆದ ಎರಡೂ¾ರು ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈ ಬಾರಿ ಅವರಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಟಿಕೆಟ್ ಹಂಚಿಕೆ ನಿರ್ಧರಿಸುವ ಪಕ್ಷದ ಸ್ಕ್ರೀನಿಂಗ್‌ಕಮಿಟಿ ಮುಂದೆ ಕುರುಬ ಸಮುದಾಯದ ಬಸವರಾಜ ಶಿವಣ್ಣನವರ ಹಾಗೂ ರಡ್ಡಿ ಲಿಂಗಾಯತ ಸಮುದಾಯದ ಡಿ.ಆರ್. ಪಾಟೀಲ ಹೆಸರು ಮಾತ್ರ ಹೋಗಿತ್ತು. ಕೊಪ್ಪಳ ಕ್ಷೇತ್ರದಲ್ಲಿ ಕುರುಬ ಸಮುದಾಯದ ರಾಜಶೇಖರ ಹಿಟ್ನಾಳ ಹಾಗೂ ಲಿಂಗಾಯತ ಸಮುದಾಯದ
ಬಸವರಾಜ ರಾಯರಡ್ಡಿ, ಬಸನಗೌಡ ಬಾದರ್ಲಿ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಕೊಪ್ಪಳ ಕ್ಷೇತ್ರದಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಿದರೆ ಹಾವೇರಿಯಲ್ಲಿ ರಡ್ಡಿ ಲಿಂಗಾಯತರಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಕೊಪ್ಪಳದಲ್ಲಿ ಲಿಂಗಾಯತರಿಗೆ
ಟಿಕೆಟ್ ನೀಡಿದರೆ ಹಾವೇರಿಯಲ್ಲಿ ಕುರುಬ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿತ್ತು. ಆ ಪ್ರಕಾರ ಕೊಪ್ಪಳದಲ್ಲಿ ಕುರುಬ ಸಮುದಾಯದ ರಾಜಶೇಖರ ಹಿಟ್ನಾಳ ಅವರಿಗೆ ಟಿಕೆಟ್ ನೀಡಿದ ಪಕ್ಷ, ಹಾವೇರಿ ಕ್ಷೇತ್ರದಲ್ಲಿ ರಡ್ಡಿ ಲಿಂಗಾಯತ ಮುಖಂಡ ಡಿ.ಆರ್. ಪಾಟೀಲರಿಗೆ ಟಿಕೆಟ್ ಘೋಷಿಸಿದೆ.
Advertisement
ಡಿ.ಆರ್. ಪಾಟೀಲ ಕಳೆದ ಎರಡೂ¾ರು ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಪ್ರತಿ ಬಾರಿಯೂ ಟಿಕೆಟ್‌ಗಾಗಿಸಲೀಂ ಅಹ್ಮದ್ ಹಾಗೂ ಡಿ.ಆರ್. ಪಾಟೀಲ ಅವರ ನಡುವೆ ಪೈಪೋಟಿ ನಡೆದು ಹೈಕಮಾಂಡ್ ಮೇಲೆ ಭಾರಿ ಒತ್ತಡ ಹೇರಲಾಗುತ್ತಿತ್ತು. ಡಿ.ಆರ್. ಪಾಟೀಲ ಅವರು ಎಚ್.ಕೆ. ಪಾಟೀಲ ಅವರ ಸಹೋದರರಾಗಿದ್ದು, ಅವರ ಮೂಲಕವೂ ಪ್ರಭಾವ ಬೀರುತ್ತಲೇ ಬಂದಿದ್ದರು. ಆದರೆ,ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿಯೂ ಸಲೀಂ ಅಹ್ಮದ್ ಅವರು ಹೈಕಮಾಂಡ್ ಮೇಲೆ ಹೆಚ್ಚು ಪ್ರಭಾವ ಬೀರಿ ನಾಮಪತ್ರ ಸಲ್ಲಿಕೆಯ ಕೊನೆಯ
ದಿನಗಳಲ್ಲಿ ಬಿ ಫಾರ್ಮ್ ತಂದಿದ್ದರು.
ಸಲೀಂ ಅಹ್ಮದ್, ಡಿ.ಆರ್. ಪಾಟೀಲ, ಬಸವರಾಜ ಶಿವಣ್ಣನವರ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಎರಡು ಬಾರಿ ಸೋತಿರುವ ಕಾರಣವನ್ನು ಮುಂದಿಟ್ಟುಕೊಂಡು
ಈ ಬಾರಿ ಪಕ್ಷದ ಹೈಕಮಾಂಡ್ ಸಲೀಂ ಅಹ್ಮದ್ ಅವರಿಗೆ ಟಿಕೆಟ್ ನೀಡಲು
ನಿರಾಕರಿಸಿತು. ಹೈಕಮಾಂಡ್‌ನ ಈ ನಿರ್ಧಾರದಿಂದ ಕಾಂಗ್ರೆಸ್ ಪಾಲಿಗೆ ಮುಸ್ಲಿಂ
ಮೀಸಲು ಕ್ಷೇತ್ರವಾಗಿದ್ದ ಹಾವೇರಿ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು. ಈ
ಬಾರಿ ಕುರುಬ ಸಮುದಾಯದ ಮುಖಂಡ ಬಸವರಾಜ ಶಿವಣ್ಣನವರ ಹಾಗೂ ರಡ್ಡಿ
ಲಿಂಗಾಯತ ಮುಖಂಡ ಡಿ.ಆರ್. ಪಾಟೀಲ ಅವರ ನಡುವೆ ಟಿಕೆಟ್‌ಗಾಗಿ ಪ್ರಬಲ
ಸ್ಪರ್ಧೆ ಏರ್ಪಟ್ಟಿತ್ತು. ಈ ಬಾರಿ ಹೈಕಮಾಂಡ್ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಟಿಕೆಟ್
ಹಂಚಿಕೆ ಮಾಡಿದ್ದರಿಂದ ಕಳೆದ ಎರಡು ಚುನಾವಣೆ ವೇಳೆ ಟಿಕೆಟ್ ಸ್ಪರ್ಧೆಯಲ್ಲಿ
ಸೋತಿದ್ದ ಡಿ.ಆರ್. ಪಾಟೀಲ ಅವರಿಗೆ ಈ ಬಾರಿ ಟಿಕೆಟ್ ಜಯ ಸಿಕ್ಕಿದೆ. ● ಎಚ್.ಕೆ. ನಟರಾಜ