ಸೊಲ್ಲಾಪುರ: ಲಿಂಗಾ ಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಲಿಂಗಾಯತ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮ ಮಹಾ ಮೋರ್ಚಾ ಸಮಾವೇಶದಲ್ಲಿ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಬಸವಾಭಿ ಮಾನಿಗಳು ಪಾಲ್ಗೊಂಡು ಸ್ವತಂತ್ರ ಧರ್ಮಕ್ಕಾಗಿ ಆಗ್ರಹಿಸಿದರು. ಜೂ. 3ರಂದು ಲಿಂಗಾಯತರು ಸೊಲ್ಲಾಪುರದಲ್ಲಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿನ 8ನೇ ರ್ಯಾಲಿ ನಡೆಸಿದರು.
ವಿವಿಧೆಡೆಗಳಿಂದ ಬಂದ ಮಠಾ ಧೀಶರ ಉಪಸ್ಥಿತಿಯಲ್ಲಿ ಇಲ್ಲಿಯ ಬಸವೇಶ್ವರ ವೃತ್ತದಲ್ಲಿಯ ಬಸವೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ರ್ಯಾಲಿಗೆ ಚಾಲನೆ ನೀಡಲಾಯಿತು. ಕುಂಬಾರವೇಸ್‌ನಿಂದ ಹಾದು ಜಿಲ್ಲಾ ಪಂಚಾಯತ್ ಹತ್ತಿರದ ಹೋಮ್ ಮೈದಾನದಲ್ಲಿ ರ್ಯಾಲಿ ಕೊನೆಗೊಂಡು, ಬಹಿರಂಗ ಸಭೆಯೊಂದಿಗೆ ಮುಕ್ತಾಯ ಗೊಂಡಿತು. ಸೊಲ್ಲಾಪುರ, ಲಾತೂರ್, ನಾಂದೇಡ್, ಸಾಂಗ್ಲೀ, ಜತ್, ಕೋಲ್ಹಾಪುರ, ಕಲಬುರಗಿ, ವಿಜಯಪುರ, ಬಾಗಲ್‌ಕೋಟೆ, ಬೀದರ್, ಭಾಲ್ಕಿ, ಬೆಳಗಾವಿ, ದಾವಣಗೆರೆ, ಜಮಖಂಡಿ, ಸೇರಿದಂತೆ ವಿವಿಧೆಡೆಗಳಿಂದ ಲಿಂಗಾ ಯತ ಧರ್ಮಿಯರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು.
ಕಿರೀಟಮಠ ಸೊಲ್ಲಾಪುರದ ಸ್ವಾಮಿನಾಥ ಶ್ರೀಗಳು, ಕಲ ಬುರ್ಗಿಯ ಪ್ರಭುಶ್ರೀ ಮಾತೆ, ಮುಗಳಿಯ ಮಹಾನಂದಾತಾಯಿ, ಬಸವಕಲ್ಯಾಣದ ಬಸವಪ್ರಭು ಶ್ರೀಗಳು, ಶಿವಾನಂದ ಶ್ರೀಗಳು ಬೇಲೂರು, ಬಸವಲಿಂಗ ದೇವರು ಭಾಲ್ಕಿ, ಶಿವಲಿಂಗ ಶ್ರೀಗಳು ವಿಜಯಪುರ, ಸಚ್ಚಿದಾನಂದ ಶ್ರೀಗಳು ದೆಹಲಿ, ರೇವಣಸಿದ್ಧ ಶ್ರೀಗಳು ನಾಗಣಸೂರ, ಮಹಾಂತ ದೇವರು ಬನಹಟ್ಟಿ, ರಮೇಶ ಶರಣರು, ಪ್ರಭುಲಿಂಗ ಶ್ರೀಗಳು, ಪೂರ್ಣಾನಂದ ಶ್ರೀಗಳು ವಿಜಯಪುರ, ಸಿದ್ದೇಶ್ವರಿ ಮಾತಾಜಿ ಕೊಲ್ಹಾಪುರ, ಮುರುಘರಾಜೇಂದ್ರ ದೇಶಿಕೇಂದ್ರ ಶ್ರೀಗಳು ದಾವಣಗೆರೆ ಮೊದಲಾದವರು ಪಾಲ್ಗೊಂಡಿದ್ದರು.
ಗಣ್ಯರುಗಳಾಗದ ಸುನೀಲ್ ಹಿಂಗಣೆ, ರಾಜೇಶ ವಿಭೂತೆ, ಸಿದ್ಧರಾಮ ಕಟಾರೆ, ಕಲಬುರ್ಗಿಯ ಪ್ರಭುಲಿಂಗ ಶೆಟಕಾರ, ಕವಿತಾ ದೇಶಮುಖ್, ಅಶೋಕ ಮಸ್ತಾಪುರೆ, ಮಾಧವ ರಾವ್ ಪಾಟೀಲ್, ರ್ಯಾಲಿಯ ಸಮನ್ವಯಕ ವಿಜಯ ಹತ್ತೂರೆ, ಮಯೂರ ಸ್ವಾಮಿ, ವಿಜಯ ಬುರಕುಲ, ಸಕಲೇಶ ಬಾಭುಳಗಾಂವ್ಕರ, ಪ್ರೊ| ಶಿವಾನಂದ ಅಚಲೇರಿ, ಸುಹಾಸ ಉಪಾಸೆ, ಮಲ್ಲಿಕಾರ್ಜುನ ಬಾಮಣೆ, ಬಸವರಾಜ ಚಾಕಾಯಿ, ಚಂದ್ರಶಾ ಬಾಗಲ, ಧರ್ಮರಾಜ ವಿರಾಪುರೆ, ಡಾ| ಖಂಡೇಶ ಮುದಕಣ್ಣಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸೊಲ್ಲಾಪುರ ಜಿಲ್ಲಾ ಸಮನ್ವಯಕ ವಿಜಯ ಹತ್ತುರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆನಂದ ಕರ್ಣೆ ಕಾರ್ಯಕ್ರಮ ನಿರೂಪಿಸಿದರೆ, ಅಮಿತಾ ರೊಡಗೆ ವಂದಿಸಿದರು.