Advertisement
ಅವರು ಮಂಗಳವಾರ ಬಿ.ಸಿ.ರೋಡು ಬಳಿಯ ಬಂಟವಾಳದ ಬಂಟರ ಭವನದಲ್ಲಿ ನಡೆದ ದ.ಕ.ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಮಾಣಿಕ ಕಾರ್ಯಕರ್ತ ಕಿಶೋರ್‌ಕುಮಾರ್ ಅವರು ಅತಿ ಹೆಚ್ಚು ಅಂತರದಿಂದ ಗೆಲ್ಲಲಿದ್ದಾರೆ. ಸಜ್ಜನಿಕೆಯ ರಾಜಕಾರಣಿ ಆಗಿರುವ ಅವರು ಕೋಟ ಅವರ ಸ್ಥಾನವನ್ನು ತುಂಬುವ ಮೂಲಕ ಪಂಚಾಯತ್ ಸದಸ್ಯರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದರು.
Related Articles
Advertisement
ರಾಜ್ಯ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ಶಾಸಕರಾದ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಡಿ. ವೇದವ್ಯಾಸ ಕಾಮತ್, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಡಾ| ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೇಯರ್ ಮನೋಜ್ ಕುಮಾರ್, ಉಪಮೇಯರ್ ಭಾನುಮತಿ, ಪ್ರಮುಖರಾದ ಉದಯಕುಮಾರ್ ಶೆಟ್ಟಿ, ರಾಜೇಶ್ ಕಾವೇರಿ, ಪ್ರೇಮಾನಂದ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ವೇದಿಕೆಯಲ್ಲಿದ್ದರು. ಸತೀಶ್ ಕುಂಪಲ ಸ್ವಾಗತಿಸಿದರು. ಕ್ಯಾ| ಗಣೇಶ್ ಕಾರ್ಣಿಕ್ ವಂದಿಸಿದರು. ಬಿ.ದೇವದಾಸ್ ಶೆಟ್ಟಿ ಹಾಗೂ ರಾಕೇಶ್ ರೈ ಕೆಡೆಂಜಿ ನಿರ್ವಹಿಸಿದರು.
ಪ್ರಾಮಾಣಿಕ ಸಿಎಂ: ಬಿವೈವಿ ವ್ಯಂಗ್ಯವಾಲ್ಮೀಕಿ ಹಗರಣದಲ್ಲಿ 87 ಕೋ.ರೂ.ಭ್ರಷ್ಟಾಚಾರ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲೇ ಒಪ್ಪಿಕೊಂಡಿದ್ದು, ಮುಡಾ ಹಗರಣದಲ್ಲಿ ನಿವೇಶನವನ್ನು ಹಿಂದಿರುಗಿಸುವುದಾಗಿ ಒಪ್ಪಿಕೊಳ್ಳುವ ಮೂಲಕ ಅವರು ಪ್ರಾಮಾಣಿಕ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.