Advertisement

ನಕಲಿ ಬಿತ್ತನೆ ಬೀಜ ಪೂರೈಕೆ: ಕ್ರಮಕ್ಕೆ ಆಗ್ರಹ

04:22 PM Jun 21, 2020 | Team Udayavani |

ಲಿಂಗಸುಗೂರು: ಕಳಪೆ ಬಿತ್ತನೆ ಬೀಜ ನೀಡಿ ರೈತರಿಗೆ ವಂಚಿಸಲಾಗಿದ್ದರೂ ಈ ಬಗ್ಗೆ ತನಿಖೆ ಮಾಡುವಲ್ಲಿ ವಿಫಲರಾದ ಕೃಷಿ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡುವಂತೆ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ)ಕಾರ್ಯಕರ್ತರು ಎಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

Advertisement

ಸಿಂಧನೂರಿನ ಸೂರ್ಯ ಆಗ್ರೋ ಟ್ರೇಡರ್ನಲ್ಲಿ ತಾಲೂಕಿನ ಜಾಗಿರನಂದಿಹಾಳ, ಆನಾಹೊಸೂರು, ಹಿರೇಜಾವೂರು ಗ್ರಾಮದ ರೈತರಿಗೆ ಕಾವೇರಿ ಸೂನಾ ತಳಿ ಭತ್ತದ ಬೀಜ ವಿತರಣೆ ಮಾಡಲಾಗಿದೆ. ಆದರೆ ಒಂದೇ ಸಲ ತನೆ ಒಡೆಯದೇ ಅಲ್ಲಿಲ್ಲಿ ತೆನೆ ಬಿಟ್ಟಿದೆ. ಇದಲ್ಲದೆ ಜಾಗಿರನಂದಿಹಾಳ ಗ್ರಾಮದಲ್ಲಿ ಮೂರು ತಿಂಗಳು ತೆನೆ ಬಿಟ್ಟಿಲ್ಲ. ಹೀಗಾಗಿ ಬಿತ್ತನೆ ಬೀಜ ಕಳಪೆಮಟ್ಟದ್ದಾಗಿದೆ. ವರ್ತಕರು ರೈತರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರಿಂದ ಕೃಷಿ ಇಲಾಖೆ ಉಪ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಕೃಷಿ ವಿಸ್ತರಣಾ ಘಟಕದ ಮುಖ್ಯಸ್ಥರು ಕಾಟಚಾರಕ್ಕಾಗಿ ಜಮೀನಿಗೆ ಭೇಟಿ ವರ್ತಕರೊಂದಿಗೆ ಶಾಮೀಲಾಗಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿ ಕೃಷಿ ಜಂಟಿ ನಿರ್ದೇಶಕರು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು.

ನಂತರ ಸ್ಥಳಕ್ಕೆ ಆಗಮಿಸಿದ ಕೃಷಿ ಉಪ ನಿರ್ದೇಶಕಿ ಮಂಜುಳಾ ಬಸರೆಡ್ಡಿ, ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಬಗ್ಗೆ ತನಿಖೆ ಮಾಡಿದ್ದಾರೆ. ಅವರು ವರದಿ ನೀಡಲು ವಿಳಂಬವಾಗಿದೆ. ಮಂಗಳವಾರ ಕೃಷಿ ಜಂಟಿ ನಿರ್ದೇಶಕರು ಇಲ್ಲಿಗೆ ಆಗಮಿಸಿ ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ ಎಂದು ಭರವಸೆ ನೀಡಿದರು. ಮಂಗಳವಾರ ಜಂಟಿ ನಿರ್ದೇಶಕರು ಇಲ್ಲಿಗೆ ಬಂದು ಸಮಸ್ಯೆ ಪರಿಹಾರ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಬುಧವಾರ ಕೃಷಿ ಇಲಾಖೆ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ರೈತರು ಎಚ್ಚರಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಬಸವನಗೌಡ ಹಿರೇಹೆಸರೂರು, ಸದಾನಂದ ಮಡಿವಾಳ, ಆದಪ್ಪ, ಬಿ.ಆರ್‌. ಪಾಟೀಲ, ಸಂಗನಗೌಡ್ರು, ಖಾಜಾವಲಿ, ಗೌಡಪ್ಪ ಮೂಲಿಮನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next