Advertisement

ಸೇನೆ-ಎನ್‌ಡಿಆರ್‌ಎಫ್‌ ತಂಡದ ಸದಸ್ಯರಿಗೆ ರಕ್ಷಾಬಂಧನ

11:10 AM Aug 16, 2019 | Team Udayavani |

ಲಿಂಗಸುಗೂರು: ಪ್ರವಾಹ ನಿರ್ವಹಣೆಗಾಗಿ ತಾಲೂಕಿಗೆ ಆಗಮಿಸಿದ್ದ ಸೇನಾ ಪಡೆ ಹಾಗೂ ಎನ್‌ಡಿಆರ್‌ಎಫ್‌ ತಂಡದ ಸದಸ್ಯರಿಗೆ ತಹಶೀಲ್ದಾರ್‌ ಕಚೇರಿ ಮಹಿಳಾ ಸಿಬ್ಬಂದಿ ಗುರುವಾರ ರಾಖೀ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಿದರು.

Advertisement

ತಾಲೂಕಿನ ಕೃಷ್ಣಾ ನದಿಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಂತ್ರಸ್ತರ ನೆರವಿಗಾಗಿ ಕಳೆದ ಹತ್ತು ದಿನಗಳಿಂದ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸುತ್ತಿರುವ ಆರ್ಮಿ ಹಾಗೂ ಎನ್‌ಡಿಆರ್‌ಎಫ್‌ ತಂಡದವರಿಗೆ ರಾಖೀ ಕಟ್ಟಿ ಸಿಹಿ ತಿನಿಸಿ ಮತ್ತಷ್ಟು ದೇಶ ಸೇವೆ ಮಾಡಲೆಂದು ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗಳಾದ ಶಾರದಾ, ಸುಚೇತನಾ ಇತರರು ಶುಭ ಹಾರೈಸಿದರು.

ಪ್ರವಾಹ ಪರಿಸ್ಥಿತಿಯಲ್ಲಿ ತಮ್ಮ ಕುಟಂಬವನ್ನು ಬಿಟ್ಟು ತಾಲೂಕಿನ ಜನತೆಯನ್ನು ಸಂಕಷ್ಟದಿಂದ ದೂರ ಮಾಡಲು ಆಗಮಿಸಿದ ಸೈನಿಕರು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಎಲ್ಲ ಸದಸ್ಯರು ರಕ್ಷಾ ಬಂಧನ ಹಬ್ಬದಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಇಲ್ಲಿ ಅವರಿಗೆ ನಾವೇ ಸಹೋದರಿಯರಿದ್ದಂತೆ ಎಂದು ಸಿಬ್ಬಂದಿಗಳು ರಾಖೀ ಕಟ್ಟಿ ಸಂಭ್ರಮಿಸಿದರು.

ಇದೇ ವೇಳೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್‌ ಚಾಮರಾಜ ಪಾಟೀಲ, ಎನ್‌ಡಿಆರ್‌ಎಫ್‌ ಕಮಾಂಡರ್‌ ಬಲಬೀರಸಿಂಗ್‌, ಕರೆ ಪವರ್‌ ಪ್ರೊಜೆಕ್ಟ್ ಮುರುಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next