Advertisement

ತಾಲೂಕು ಆಸ್ಪತ್ರೆಗೆ ಶಾಸಕ ಹೂಲಗೇರಿ ಭೇಟಿ

04:32 PM Apr 15, 2020 | Naveen |

ಲಿಂಗಸುಗೂರು: ತಾಲೂಕಿನ ದೇವರ ಭೂಪುರ ಗ್ರಾಮದಲ್ಲಿ ವಾಂತಿ ಭೇದಿ ಯಿಂದಾಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಶಾಸಕ ಡಿ.ಎಸ್‌. ಹೂಲಗೇರಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Advertisement

ಗ್ರಾಮದಲ್ಲಿ ಶುದ್ಧ ನೀರು ಇಲ್ಲದಾಗಿದೆ. ಕಲುಷಿತ ನೀರೇ ಕುಡಿಯುವಂತಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನಮಗೆ ಇದೇ ಸಮಸ್ಯೆಯಾಗಿದೆ. ನಮ್ಮ ಗೋಳು ಯಾರು ಕೇಳುತ್ತಿಲ್ಲ, ಶುದ್ಧ ನೀರು ಪೂರೈಸುವಲ್ಲಿ ಗ್ರಾಪಂ-ತಾಪಂ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತಾಳಿದೆ ಎಂದು ಗ್ರಾಮಸ್ಥರು ಶಾಸಕರಲ್ಲಿ ಅಳಲು ತೋಡಿಕೊಂಡರು.

ಇದಕ್ಕೆ ಗರಂ ಆದ ಶಾಸಕ ಹೂಲಗೇರಿ, ಬಾವಿ ಸ್ವಚ್ಛತೆ ಮಾಡೋಕೆ ನಿಮಗೇನು ತೊಂದರೆಯಾಗಿದೆ. ಶುದ್ಧ ನೀರು ಪೂರೈಸಲು ಎಷ್ಟು ವರ್ಷ ಬೇಕು. ಗ್ರಾಮೀಣ ಭಾಗದ ಜನರ ಕಷ್ಟ ನಿಮಗೆ ಅರ್ಥವಾಗುವುದಿಲ್ಲವೇ? ಎಂದು ಪ್ರಶ್ನಿಸಿ ಕೂಡಲೇ ಅಲ್ಲಿನ ಸಮಸ್ಯೆ ಪರಿಹರಿಸಬೇಕೆಂದು ಸ್ಥಳದಲ್ಲಿದ್ದ ತಾಪಂ ಇಒ ಪಂಪಾಪತಿ ಹಿರೇಮಠ ಅವರನ್ನು ತರಾಟೆಗೆ ತೆಗೆದುಕೊಂಡರು.

ದೇವರಭೂಪುರ ಗ್ರಾಮದಲ್ಲಿ ಕುಲಷಿತ ನೀರು ಕುಡಿದು ಗ್ರಾಮಸ್ಥರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು 40 ಜನರು ತೀವ್ರ ಅಸ್ವಸ್ಥರಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ 8 ಜನ ಗುಣಮುಖರಾಗಿದ್ದಾರೆ. ಇನ್ನುಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಹಶೀಲ್ದಾರ್‌ ಚಾಮರಾಜ್‌ ಪಾಟೀಲ್‌, ಡಾ| ಲಕ್ಷ್ಮಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಮಹ್ಮದ್‌ ರಫಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next