Advertisement

2ತಿಂಗಳುಗಳಲ್ಲಿ ಸಾಲು ಸಾಲು ಕ್ಷಿಪಣಿ  ಪ್ರಯೋಗ!

12:56 AM Nov 07, 2020 | mahesh |

ಗಡಿಯಲ್ಲಿ ಚೀನ ಜತೆ ಬಿಕ್ಕಟ್ಟು ಮುಂದುವರಿದಿರುವ ವೇಳೆಯಲ್ಲೇ ಕಳೆದ 2 ತಿಂಗಳುಗಳಲ್ಲಿ ಭಾರತ 12 ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದೆ. ಈ ಕ್ಷಿಪಣಿ ಪ್ರಯೋಗಗಳ ಹಿಂದೆ, “ದೇಶಕ್ಕೆ ಅಪಾಯ ಎದುರಾದರೆ ಸರ್ವಸನ್ನದ್ಧವಾಗಿರುವ’ ಮುಂದಾಲೋಚನೆ ಇದೆ. ಈ 2 ತಿಂಗಳುಗಳಲ್ಲಿ ನಡೆದ ರಕ್ಷಣ ಪ್ರಯೋಗಗಳಲ್ಲಿನ ಕೆಲವು ಪ್ರಮುಖ ಅಸ್ತ್ರಗಳ ಪರಿಚಯ ಇಲ್ಲಿದೆ…

Advertisement

ರುದ್ರಂ-1
ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ರಡಾರ್‌ ನಿಗ್ರಹ ಕ್ಷಿಪಣಿ ಎಂಬ ಗರಿಮೆ ರುದ್ರಂ-1ಗಿದೆ. ಶಬ್ದಕ್ಕಿಂತ ಎರಡು ಪಟ್ಟು ಅಧಿಕ ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿದೆ ರುದ್ರಂ-1 ಪ್ರಸ್ತುತ ಸುಖೋಯ್‌ ಯುದ್ಧ ವಿಮಾನಗಳಲ್ಲಿ ರುದ್ರಂ ಕ್ಷಿಪಣಿಯನ್ನು ಅಳವಡಿಸಲಾಗಿದ್ದು, 250 ಕಿಲೋಮೀಟರ್‌ ದೂರವಿರುವ ಗುರಿಯನ್ನು ತಲುಪಬಲ್ಲುದು.

ನಾಗ್‌
ವೈರಿಗಳ ಸಮರ ಟ್ಯಾಂಕರ್‌ಗಳು ಹಾಗೂ ಇತರ ಶಸ್ತ್ರಸಜ್ಜಿತ ವಾಹನಗಳನ್ನು ಕ್ಷಣಾರ್ಧದಲ್ಲೇ ಧ್ವಂಸಗೊಳಿಸಬಲ್ಲ ನಾಗ್‌ ಕ್ಷಿಪಣಿಯ ಅಂತಿಮ ಪ್ರಯೋಗ ಯಶಸ್ವಿಯಾಗಿದೆ. ಸಿಡಿತಲೆಗಳನ್ನು ಹೊಂದಿರುವ ಈ ಕ್ಷಿಪಣಿ 8 ಕಿ.ಮೀ. ದೂರದಲ್ಲಿರುವ ಗುರಿಯನ್ನು ನಾಶಪಡಿಸಬಲ್ಲುದು. ಭಾರತ ಇದುವರೆಗೆ ಮಿಲೆನ್‌-2ಟಿ, ಕುಂಕರ್‌ಗಳನ್ನು ಯುದ್ಧ ಟ್ಯಾಂಕರ್‌ ಧ್ವಂಸಕ್ಕೆ ಬಳಸುತ್ತಿತ್ತು.

ಪಿನಾಕಾ
ಪಿನಾಕಾ ಮಲ್ಟಿಪಲ್‌ ಲಾಂಚ್‌ ರಾಕೆಟ್‌ ಸಿಸ್ಟಮ್‌ (ಎಂಎಲ…ಆರ್‌ಎಸ್‌) ಅನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ. ಪಿನಾಕಾ ರಾಕೆಟ್‌ ಉಡಾವಣ ವಾಹನವು ಪರೀಕ್ಷೆಯ ಸಮಯದಲ್ಲಿ 6 ರಾಕೆಟ್‌ಗಳನ್ನು ಹಾರಿಸಿತು, ಅದರಲ್ಲಿನ ಕ್ಷಿಪಣಿಗಳೆಲ್ಲವೂ ಗುರಿಯನ್ನು ಸ್ಪಷ್ಟವಾಗಿ ಹೊಡೆದುರುಳಿಸಲು ಯಶಸ್ವಿಯಾಗಿವೆ.

ಬ್ರಹ್ಮೋಸ್‌
ಬ್ರಹ್ಮೋಸ್‌ನ ನೌಕಾ ಆವೃತ್ತಿಯ ಯಶಸ್ವೀ ಪರೀಕ್ಷೆ ಇತ್ತೀಚೆಗೆ ನಡೆಯಿತು. ಅರಬ್ಬಿ ಸಮುದ್ರದಲ್ಲಿ ಐಎನ್‌ಎಸ್‌ ಚೆನ್ನೆç ನೌಕೆಯಿಂದ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು.ಈಗಿನ ಕ್ಷಿಪಣಿಯು 290 ಕಿ.ಮೀ ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸುತ್ತದೆ. ಇದಕ್ಕೂ ಮುನ್ನ ಭೂ ಭೂಸೇನಾ ಆವೃತ್ತಿಯ ಪರೀಕ್ಷೆಯೂ ಯಶಸ್ವಿಯಾಗಿತ್ತು.

Advertisement

ಪೃಥ್ವಿ-2
ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತು ಸಾಗುವ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿಯ ಎರಡನೇ ಪ್ರಯೋಗವೂ ಯಶಸ್ವಿಯಾಗಿ ನಡೆದಿದೆ. 250 ಕಿಲೋ ಮೀಟರ್‌ ದೂರದ ಗುರಿಯನ್ನು ಧ್ವಂಸಗೊಳಿಸಬಲ್ಲ ಪೃಥ್ವಿ-2 ಕ್ಷಿಪಣಿ 500-1000 ಕೆ.ಜಿ ಸಿಡಿತತಲೆಗಳನ್ನು ಹೊತ್ತೂಯ್ಯಬಲ್ಲುÉದು.

ಎಚ್‌ಎಸ್‌ಟಿಡಿವಿ
ಭವಿಷ್ಯದ ದೀರ್ಘ‌ ಶ್ರೇಣಿಯ ಕ್ಷಿಪಣಿ ವ್ಯವಸ್ಥೆಗಳು, ವೈಮಾನಿಕ ವೇದಿಕೆಗಳಿಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ ಹೈಪರ್‌ಸಾನಿಕ್‌ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್‌ ವೆಹಿಕಲ್‌(ಎಚ್‌ಎಸ್‌ಟಿಡಿವಿ) ಪರೀಕ್ಷೆ ಯಶಸ್ವಿಯಾಗಿದೆ. ಹೈಪರ್‌ಸಾನಿಕ್‌ ಪ್ರೊಪಲ್ಶನ್‌ ತಂತ್ರಜ್ಞಾನದ ಆಧಾರದ ಮೇಲೆ ರೂಪಿತವಾಗಿದೆ ಎಚ್‌ಎಸ್‌ಟಿಡಿವಿ.

ಶೌರ್ಯ
ಸೂಪರ್‌ಸಾನಿಕ್‌ ವಿಭಾಗದಲ್ಲಿ ವಿಶ್ವದ ಪ್ರಮುಖ 10 ಕ್ಷಿಪಣಿಗಳ ಸಾಲಿನಲ್ಲಿ ಶೌರ್ಯ ಕೂಡ ಒಂದು. 200-1000 ಕೆ.ಜಿ. ತೂಕದ ಸಿಡಿತಲೆಗಳನ್ನು ಹೊತ್ತು ಹಾರಬಲ್ಲುದು. ಶೌರ್ಯ ಕ್ಷಿಪಣಿಯ ನವೀಕತೃ ಮಾದರಿಯು ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ. 10 ಮೀಟರ್‌ ಉದ್ದದ ಶೌರ್ಯ, 700-1000 ಕಿಲೋಮೀಟರ್‌ ಸಂಚರಿಸಬಲ್ಲುದು, ಅಲ್ಲದೇ, 200-1000 ಕೆ.ಜಿ. ಭಾರವನ್ನು ಹೊರಬಲ್ಲುದು.

ಸ್ಮಾರ್ಟ್‌
ಸಮುದ್ರದಾಳದಲ್ಲಿರುವ ಶತ್ರುದೇಶಗಳ ಜಲಾಂತರ್ಗಾಮಿಗಳನ್ನು ಧ್ವಂಸಗೊಳಿಸಬಲ್ಲ ಸಾಮರ್ಥ್ಯ ಸೂಪರ್‌ಸಾನಿಕ್‌ “ಸ್ಮಾರ್ಟ್‌’ ಕ್ಷಿಪಣಿಯನ್ನು ರಕ್ಷಣ ಇಲಾಖೆ ಯಶಸ್ವಿಯಾಗಿ ಪರೀಕ್ಷಿಸಿದೆ. ಈಗಿರುವ ಯುದ್ಧನೌಕೆಗಳಲ್ಲಿ ಸ್ಮಾರ್ಟ್‌ ಕ್ಷಿಪಣಿಯನ್ನು ಸಾಗಿಸಬಹುದು. ಈ ಹಿಂದಿನ ಸೂಪರ್‌ಸಾನಿಕ್‌ ಕ್ಷಿಪಣಿ ಯ ರೀತಿಯಲ್ಲೇ ಇದನ್ನು ಉಡಾವಣೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next