Advertisement
ಕಾರ್ಕಳದಿಂದ ಬಜಗೋಳಿ ರಸ್ತೆಯ ಮೂಲಕ 3 ಕಿ.ಮೀ. ದೂರ ಕ್ರಮಿಸಿದ ಬಳಿಕ ಜೋಡುಕಟ್ಟೆ ಜಂಕ್ಷನ್‌ನಲ್ಲಿ ಬಲಬದಿಗೆ ಕವಲೊಡೆದು ಬೋರ್ಕಟ್ಟೆ ಮೂಲಕ ರೆಂಜಾಳ, ಇರ್ವತ್ತೂರು ಭಾಗಕ್ಕೆ ತೆರಳಲು ರಸ್ತೆ ಸಂಪರ್ಕ ವಿದೆ. ಜೋಡುಕಟ್ಟೆ ಜಂಕ್ಷನ್‌ನಿಂದ ಮುಂದಕ್ಕೆ ಸಂಚರಿಸಿದಾಗ ಕೇವಲ 1.5 ಕಿ.ಮೀ. ಅಂತರದಲ್ಲಿ ಏಳು ಬಸ್ ನಿಲ್ದಾಣಗಳಿವೆ. ಕಳೆದ ಕೆಲ ವರ್ಷಗಳಅವಧಿಯಲ್ಲಿ ಹಂತ ಹಂತವಾಗಿ ಇವು ಗಳನ್ನು ಪಂಚಾಯತ್ ವತಿಯಿಂದ ವಿವಿಧ ಅನುದಾನಗಳಿಂದ ಇಲ್ಲಿ ನಿರ್ಮಿಸಲಾಗಿದೆ.
ಬಸ್ ನಿಲ್ದಾಣಗಳು ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕುತ್ತಿಲ್ಲ. ರಸ್ತೆ ಬದಿಯಲ್ಲೇ ಬಸ್, ವಾಹನಗಳಿಗೆ ಕಾದು ನಿಂತಿರುತ್ತಾರೆ. ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರೂ ಎಲ್ಲರೂ ರಸ್ತೆ ಬದಿಯೇ ಬಸ್ ಕಾಯುತ್ತಿರುತ್ತಾರೆ.
Related Articles
ಬಸ್‌ನಿಲ್ದಾಣ ಕಟ್ಟಿಸಲು ಇದ್ದ ಆಸಕ್ತಿ ಅನಂತರದ ದಿನಗಳಲ್ಲಿ ನಿರ್ವಹಣೆ ವಿಚಾರದಲ್ಲಿ ಇಲ್ಲದೆ ನಿರ್ಲಕ್ಷ ವಹಿಸಿರು ವುದು ಇಲ್ಲಿ ಕಂಡುಬರುತ್ತಿದೆ. ಕೇವಲ 1.5 ಕಿ.ಮೀ. ಅಂತರದಲ್ಲಿ ಇಷ್ಟೊಂದು ಬಸ್ ನಿಲ್ದಾಣಗಳನ್ನು ಕಟ್ಟಿರುವುದು ಯಾಕೆ ಎನ್ನುವ ಅನುಮಾನ ಈ ರಸ್ತೆಯಲ್ಲಿ ತೆರಳಿದವರಿಗೆ ಅನಿಸದೆ ಇರದು. ಹೆಚ್ಚಿನ ಅವಶ್ಯಕತೆ ಇರುವ ಕಡೆಯಲ್ಲಿ ಇದನ್ನು ನಿರ್ಮಿಸುವ ಬದಲು ಕಡಿಮೆ ಅಂತರದಲ್ಲಿ ಇಷ್ಟೊಂದು ಬಸ್ ನಿಲ್ದಾಣ ನಿರ್ಮಿಸಿ ಲಕ್ಷಾಂತರ ರೂ. ಹಣ ಪೋಲು ಮಾಡಿರುವುದರ ಹಿಂದಿನ ಉದ್ದೇಶದ ಕುರಿತು ಸಾರ್ವಜನಿಕರಲ್ಲಿ ಸಂದೇಹಗಳಿವೆ. ಕನಿಷ್ಠ ನಿರ್ಮಾಣಗೊಂಡ ನಿಲ್ದಾಣಗಳನ್ನು ಸುವ್ಯವಸ್ಥಿತವಾಗಿ ಇಡಬೇಕು ಎನ್ನುವ ಒತ್ತಾಯ ಸ್ಥಳೀಯರದ್ದಾಗಿದೆ. ಹಿಂದಿನ ಆಡಳಿತ ಮಂಡಳಿಗಳ ಅವಧಿಯಲ್ಲಿ ಇವುಗಳ ನಿರ್ಮಾಣವಾಗಿದ್ದರೂ ಇದರ ಸುಸ್ಥಿತಿಗೆ ಈಗಿನ ಆಡಳಿತ, ಅಧಿಕಾರಿಗಳು ಇದಕ್ಕೆ ಜವಾಬ್ದಾರರಾಗುತ್ತಾರೆ.
Advertisement
ನಿರ್ವಹಣೆ ಮಾಡಲಾಗುವುದುಹಿಂದಿನ ಕೆಲವು ವರುಷಗಳಿಂದಲೂ ಹೀಗೆ ನಿರ್ವಹಣೆಯಿಲ್ಲದೆ ಇತ್ತು. ಇಲ್ಲಿಯ ತನಕವೂ ಅದು ಯಾರ ಕಣ್ಣಿಗೆ ಬಿದ್ದಿರಲಿಲ್ಲ. ನಿರ್ವಹಣೆಗೆ ಮುಂದಿನ ಕ್ರಿಯಾ ಯೋಜನೆಯಲ್ಲಿ ಹಣ ಇರಿಸುವುದಕ್ಕೆ ಪ್ರಯತ್ನಿಸಲಾಗುವುದು.
-ಗಿರೀಶ್ ಅಮೀನ್, ಅಧ್ಯಕ್ಷರು, ಗ್ರಾ.ಪಂ. ಮೀಯಾರು ಚಾಲಕ ಸುಸ್ತೋ ಸುಸ್ತು !
ಬಸ್ಸಿನ ಡ್ರೈವರಿಗೆ ತಲೆಬಿಸಿ. ಗೇರ್‌ಚೇಂಜ್ ಮಾಡುವ ಮೊದಲೇ ಮತ್ತೂಂದು ಸ್ಟಾಫ್ ಬಂದಾಗಿರುತ್ತೆ. 7 ಬಸ್‌ಸ್ಟಾಂಡ್ ಕಳೆದು ತಲುಪುವಾಗ ಚಾಲಕ ಸುಸ್ತೋ ಸುಸ್ತು.