ಮಾಲೂರು: ಜಕಣಾಚಾರಿ ಶಿಲ್ಪಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಬಿಡುಗಡೆ ಮಾಡಿರುವಅನುದಾನ ಕೇವಲ ವಿಶ್ವಕರ್ಮ ಸಮುದಾಯದ ಶಿಲ್ಪಿಗಳಿಗೆ ಮಾತ್ರ ಸೀಮಿತ ಎನ್ನುವಂತೆ ವರ್ತಿಸಿದ ಶಿವಾರಪಟ್ಟಣನ ವಿಶ್ವಕರ್ಮ ಶಿಲ್ಪಿಗಳ ಧೋರಣೆ ಖಂಡಿಸಿ ಇತರೆ ಸಮುದಾಯಗಳ ಶಿಲ್ಪಿಗಳು ಗ್ರಾಮದ ಮುಖ್ಯರಸ್ತೆ ತಡೆದು ಪ್ರತಿಭಟಿಸಿದರು.
ಶಿವಾರಪಟ್ಟಣವನ್ನು ಜಕಣಾಚಾರಿ ಶಿಲ್ಪಿಗ್ರಾಮವನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸರ್ಕಾರ ಮೊದಲ ಹಂತದಲ್ಲಿ 4 ಕೋಟಿ ರೂ. ಬಿಡುಗಡೆಮಾಡಿದ್ದು, ಶಿಲ್ಪಗ್ರಾಮದ ಉದ್ಘಾಟನೆ ನೆರವೇರಿಸಲು ಗ್ರಾಮದ ವಿಶ್ವಕರ್ಮ ಸಮುದಾಯದ ಶಿಲ್ಪಿಗಳು,ಕರ್ನಾಟಕ ರಾಜ್ಯ ಶಿಲ್ಪಕಲಾ ಪರಿಷತ್ ಅಧ್ಯಕ್ಷ ಪತ್ತರ್ ನೇತೃತ್ವದಲ್ಲಿ ಮುಂದಾಗಿದ್ದರು.
ಒಂದು ಸಮುದಾಯಕ್ಕೆ ಸೀಮಿತ ಅಲ್ಲ: ಇದನ್ನು ಖಂಡಿಸಿದ ಗ್ರಾಮದ ಇತರೆ ಸಮುದಾಯಗಳಶಿಲ್ಪಿಗಳು, ಸರ್ಕಾರ ಬಿಡುಗಡೆ ಮಾಡಿರುವ ಹಣಗ್ರಾಮದ ಎಲ್ಲಾ ಶಿಲ್ಪಿಗಳು ಬಳಕೆಗೆ ಯೋಗ್ಯವಾಗಿ ರುವ ಶಿಲ್ಪಗ್ರಾಮ ಆಗಬೇಕಾಗಿದೆ. ಇದು ಕೇವಲಒಂದು ಸಮುದಾಯಕ್ಕೆ ಸೀಮಿತ ಅಲ್ಲ ಎಂದುಗ್ರಾಮದ ಮುಖ್ಯರಸ್ತೆ ತಡೆದು ಪ್ರತಿಭಟಿಸಿದರು.
ಮನವಿ ಸ್ವೀಕರಿಸಿ ಶಾಸಕ ಕೆ.ವೈ.ನಂಜೇಗೌಡಮಾತನಾಡಿ, ರಾಜ್ಯಕ್ಕೆ ಮಾದರಿ ಎನ್ನುವಂತೆ ಶಿಲ್ಪಿಗಳ ತಯಾರಿಕೆಯ ಕೀರ್ತಿಯನ್ನು ಪರಿಚಯಿಸುವಉದ್ದೇಶದಿಂದ 10 ಕೋಟಿ ರೂ. ಅನುದಾನಕ್ಕೆಪ್ರಸ್ತಾವನೆ ನೀಡಿದ್ದರ ಫಲವಾಗಿ ಕಳೆದ ವರ್ಷ ಸರ್ಕಾರಶಿಲ್ಪ ಗ್ರಾಮದ ಅಭಿವೃದ್ಧಿಗೆ ಮುಂದಾಗಿತ್ತು. ಗ್ರಾಮದ ಅಭಿವೃದ್ಧಿಗಾಗಿ ನಾಲ್ಕು ಎಕರೆ ಭೂಮಿ ಕೋರಿದ್ದು,ಗ್ರಾಮದ ಬಳಿಯ ಸರ್ಕಾರಿ ಜಾಗ ಬಳಕೆ ಮಾಡಿ ಕೊಳ್ಳಲು ಡೀಸಿ ಹಾದಿಯಾಗಿ ಮಂಜೂರಾತಿ ಪಡೆಯಲಾಗಿದೆ. ಅದರಂತೆ ಮೊದಲ ಹಂತವಾಗಿ 4 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಎಲ್ಲಾಸಮುದಾಯಗಳ ಶಿಲ್ಪಿಗಳ ಅನುಕೂಲಕ್ಕಾಗಿ ಶಿಲ್ಪಗ್ರಾಮದ ಅಭಿವೃದ್ಧಿ ಪಡಿಸುತ್ತಿರುವುದಾಗಿ ಸ್ಪಷ್ಟ ಪಡಿಸಿದರು.
ಎಲ್ಲಾ ಸಮುದಾಯಗಳ ಪರಿಗಣಿಸಿ: ಆದರೆ, ಶಿವಾರಪಟ್ಟಣ ಶಿಲ್ಪಗ್ರಾಮವನ್ನು ಜಕಣಾಚಾರಿಶಿಲ್ಪಗ್ರಾಮ ಎಂದು ಕರೆದಿರುವುದರಿಂದ ಗೊಂದಲಕ್ಕೆಕಾರಣವಾಗಿದೆ. ಕೇವಲ ವಿಶ್ವಕರ್ಮ ಸಮುದಾಯದವರಿಗೆ ಮಾತ್ರ ಸಿಮೀತ ಎನ್ನುವಂತೆ ಕಾರ್ಯಕ್ರಮ ರೂಪಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಎರಡು ದಿನಗಳಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ, ಮುಂದಿನ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿಗ್ರಾಮದ ಇತರೆ ಸಮುದಾಯಗಳ ಶಿಲ್ಪಿಗಳನ್ನೂ ಪರಿಗಣಿಸಲು ಸೂಚಿಸುವುದಾಗಿ ತಿಳಿಸಿದರು.
ಗ್ರಾಮದ ಶಿಲ್ಪಿಗಳಾದ ಶ್ರೀನಿವಾಸ್, ಶಿವಕುಮಾರ್, ಮಂಜುನಾಥ್, ನಾರಾಯಣಪ್ಪ, ಜಗನ್ನಾಥಾಚಾರಿ ಮತ್ತಿತರರು ಇದ್ದರು.