Advertisement
ಚಿಕ್ಕಬಳ್ಳಾಪುರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಲಕ್ಷಾಂತರ ಕುಟುಂಬಗಳು ಕೃಷಿ ಮೇಲೆಯೇ ಅವಲಂಬಿತವಾಗಿವೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ಹಾಗೂ ಚಿಂತಾಮಣಿ ನಗರಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳಿದ್ದು, ಬಾಗೇಪಲ್ಲಿ ತಾಲೂಕಿನ ಚೇಳೂರು, ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಮಾತ್ರ ಉಪ ಕೃಷಿ ಉತ್ಪನ್ನ ಮಾರುಕಟ್ಟೆಗಳಿವೆ. ಪ್ರತಿ ದಿನ ಲಕ್ಷಾಂತರ ರೂ. ವಾಣಿಜ್ಯ ವಹಿವಾಟು ನಡೆಯುತ್ತದೆ. ಆದರೆ, ಜಿಲ್ಲೆಯ ಎಪಿಎಂಸಿ ಅಧಿಕಾರಿಗಳು ಮಾರುಕಟ್ಟೆ ಸಪ್ತಾಹವನ್ನು ರೈತರಲ್ಲಿ ಸಮರ್ಪಕವಾಗಿ ಪ್ರಚಾರ ನಡೆಸದೇ ಕದ್ದುಮುಚ್ಚಿ ನಡೆಸುತ್ತಿದ್ದಾರೆಂಬ ಆರೋಪ ರೈತ ವಲಯದಲ್ಲಿ ಕೇಳಿ ಬರುತ್ತಿದೆ.
ಮಾರುಕಟ್ಟೆಗೆ ರೈತರು ತರುವ ಉತ್ಪನ್ನಗಳ ಮೇಲೆ ಶೇ.10 ಕಮಿಷನ್‌ನ್ನು ವ್ಯಾಪಾರಸ್ಥರು ರಾಜಾರೋಷವಾಗಿ ಪಡೆದರು ಕೇಳ್ಳೋವರೋ ಇಲ್ಲವಾಗಿದ್ದಾರೆ.
Related Articles
Advertisement
ರೈತರ ಅದಾಲತ್ ಮರೆತ ಅಧಿಕಾರಿಗಳು: ಇನ್ನೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರೈತರ ಅಹವಾಲುಗಳನ್ನು ಆಲಿಸಲು ಮಾರುಕಟ್ಟೆಯಲ್ಲಿ ರೈತರ ಅದಾಲತ್ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕೆಂಬ ನಿಯಮ ಇದೆ. ಆದರೆ, ಎಪಿಎಂಸಿ ಅಧಿಕಾರಿಗಳು ಮಾತ್ರ ಇದುವರೆಗೂ ಜಿಲ್ಲೆಯ ಯಾವೊಂದು ಎಪಿಎಂಸಿ ಮಾರುಕಟ್ಟೆಯೂ ಸಹ ರೈತರ ಕುಂದುಕೊರತೆಗಳ ಸಭೆ ನಡೆಸಿರುವುದು ಉದಾಹರಣೆಗಳಿಲ್ಲ. ಜಿಲ್ಲೆಯ ಮಾರುಕಟ್ಟೆಗಳಲ್ಲಿ ವಿದ್ಯುತ್ ದೀಪಗಳು, ಚರಂಡಿ, ಶೌಚಾಲಯಗಳು, ಕುಡಿಯುವ ನೀರಿನ ಸಮಸ್ಯೆ, ರೈತರ ಭವನ, ವಿಶ್ರಾಂತಿ ಕೊಠಡಿ, ಉಪಾಹಾರ ಮಂದಿರ ಹೀಗೆ ಅನೇಕ ಸೌಲಭ್ಯಗಳಿಂದ ರೈತರು ವಂಚಿತರಾಗಿದ್ದರೂ ರೈತರ ಸಂಕಷ್ಟ ಕೇಳಲು ಎಪಿಎಂಸಿ ಅಧಿಕಾರಿಗಳು ಮುಂದೆ ಬರುತ್ತಿಲ್ಲ ಎಂಬುದಕ್ಕೆ ಜಿಲ್ಲೆಯಲ್ಲಿ ಮಾರುಕಟ್ಟೆ ಸಪ್ತಾಹ ಆಚರಣೆಯಲ್ಲಿ ಅಧಿಕಾರಿಗಳು ತೋರುತ್ತಿರುವ ಆಸಡ್ಡೆ ಮನೋಭಾವ ಪ್ರತ್ಯಕ್ಷ ಸಾಕ್ಷಿಯಾಗಿದೆ
ಅಸ್ತಿತ್ವ ಕಳೆದುಕೊಳ್ಳುವತ್ತ ಮಾರುಕಟ್ಟೆಗಳು ರೈತರು ಬೆಳೆಯುವ ಬೆಳೆಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸಿ ಉತ್ತಮ ಧಾರಣೆ ರೈತನ ಕೈಗೆಟುಕುವ ಮಹತ್ವಾಕಾಂಕ್ಷೆ ಯೊಂದಿಗೆ ಆರಂಭಗೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆಗಳು ಜಿಲ್ಲೆಯಲ್ಲಿ ಆಸ್ತಿತ್ವ ಕಳೆದು ಕೊಳ್ಳುವ ಆತಂಕದಲ್ಲಿವೆ. ಇತ್ತೀಚೆಗೆ ಜಿಲ್ಲಾದ್ಯಂತ ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ವ್ಯಾಪಾರಸ್ಥರು ನೇರವಾಗಿ ರೈತರ ತೋಟಗಳಿಗೆ ತೆರಳಿ ಅಲ್ಲಿಯೆ ಖರೀದಿ ಮಾಡುವ ಪರಿಪಾಠಬೆಳೆಸಿಕೊಂಡಿರುವುದರಿಂದ ರೈತರು ಬೆಳೆದ ಕೃಷಿ ಉತ್ಪನ್ನಗಳು ಅರ್ಧಕ್ಕೆ ಅರ್ಧ ಮಾರುಕಟ್ಟೆ ಪ್ರವೇಶಿಸುತ್ತಿಲ್ಲ. ವಾಣಿಜ್ಯ ಬೆಳೆ ಟೊಮೆಟೊ ಒಂದು ಬಿಟ್ಟರೆ ಹೂಕೋಸ್, ಕ್ಯಾರೆಟ್, ಮೂಲಂಗಿ, ಆಲೂಗಡ್ಡೆ, ನೆಲಗಡಲೆ, ಈರುಳ್ಳಿ, ಮಾವು ಮತ್ತಿತರ ಪ್ರಮುಖ ಬೆಳೆಗಳನ್ನು ವ್ಯಾಪಾರಸ್ಥರು ನೇರವಾಗಿ ರೈತರ ತೋಟಗಳಲ್ಲಿಯೇ ಖರೀದಿಗೆ ಮುಂದಾಗುತ್ತಿರುವುದರಿಂದ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ವಹಿವಾಟು ಮೇಲೆ ಗಂಭೀರ ಪರಿಣಾಮ ಬೀರಿ ಸರ್ಕಾರಕ್ಕೆ ಹರಿದು ಬರುತ್ತಿದ್ದ ಆದಾಯಕ್ಕೂ ಕತ್ತರಿ ಬಿದ್ದಂತಾಗಿದೆ. ಅತ್ತ ರೈತರಿಗೆ ನ್ಯಾಯವಾದ ಬೆಲೆ ಸಿಗದೇ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ, ಹೊರಗಿನ ವಹಿವಾಟು ನಿಲ್ಲಿಸಿ ಮಾರುಕಟ್ಟೆಯತ್ತ ರೈತರನ್ನು ಆಕರ್ಷಿಸುವ ದಿಸೆಯಲ್ಲಿ ಜಿಲ್ಲೆಯ ಎಪಿಎಂಸಿ ಅಧಿಕಾರಿಗಳು ಎಡವಿ ಬಿದ್ದಿರುವುದು ಎದ್ದು
ಕಾಣುತ್ತಿ¨ “ಎಪಿಎಂಸಿಯವರನೇ ‘ಕೇಳಿ ಜಿಲ್ಲೆಯಲ್ಲಿ ಮಾರುಕಟ್ಟೆ ಸಪ್ತಾಹವನ್ನು ನಿರ್ಲಕ್ಷಿಸಿರುವ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ನಿರ್ದೇಶಕ ದ್ವಾರಕಪ್ರಸಾದ್, ನೀವು ಎಪಿಎಂಸಿಯವರನ್ನೇ ಸ್ವಲ್ಪ ಕೇಳಿ ಬಿಡಿ. ನಾವು ಅವರಿಗೆ ಕಾರ್ಯಕ್ರಮ ಆಯೋಜಿಸುವಂತೆ ಎಲ್ಲಾ ಎಪಿಎಂಸಿಗಳಿಗೆ ಸೂಚಿಸಿದ್ದೇನೆ. ಅವರು ಸಭೆ, ಕಾರ್ಯಕ್ರಮ ರೂಪಿಸಿ ನಮ್ಮನ್ನು ಕರೆದರೆ ನಾವು ಪಾಲ್ಗೊಳ್ಳುತ್ತೇವೆ. ಮಾರುಕಟ್ಟೆ ಸಪ್ತಾಹ ಇನ್ನು ಸಮಯ ಇದೆ ಎಂದು ತಿಳಿಸಿದರು.