Advertisement

ಪೊಲೀಸರ ವಿರುದ್ಧ ಲಿಂಬಾವಳಿ ಪ್ರತಿಭಟನೆ

12:11 PM Feb 26, 2017 | Team Udayavani |

ಮಹದೇವಪುರ: ಬೆಳ್ಳಂದೂರಿನ ಖಾಸಗಿ ನರ್ಸರಿ ಶಾಲೆಯಲ್ಲಿ ಹಸುಳೆಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಹಾದಿಯನ್ನು ಪೊಲೀಸರು ತಪ್ಪಿಸಿದ್ದಾರೆಂದು ಆರೋಪಿಸಿ ಶಾಸಕ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್‌ಎಎಲ್‌ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ  ನಡೆಸಿದರು.

Advertisement

ಈ ವೇಳೆ ಮಾತನಾಡಿದ ಶಾಸಕನ ಲಿಂಬಾವಳಿ, “ಶಾಲೆಯಲ್ಲಿ ಹದಿಹರೆಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಪೊಲೀಸ್‌ ಇಲಾಖೆ ಕಾನೂನು ಕ್ರಮಕೈಗೊಳ್ಳದೆ, ಆರೋಪಿಗಳಿಗೆ ಸಹಕರಿಸುತ್ತಿದ್ದಾರೆ,” ಎಂದು ದೂರಿದರು. 

“ಪೋಕೊ ಕಾಯ್ದೆಯಡಿ ಕೇವಲ ಒಬ್ಬನನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಪೋಕೊÕà ಕಾಯ್ದೆಧಿಯನ್ವಯ ಜಾಮೀನು ನೀಡುವಂತಿಲ್ಲ. ಆದರೆ, ಜಾಮೀನು ಸಿಕ್ಕಿರುವುದು ಪ್ರಕಧಿರಣದ ಹಾದಿಯನ್ನೇ ಬದಲಿಸಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿದೆ,” ಎಂದು ಹೇಳಿದರು.

“ಸರ್ಕಾರವೇ ಆರೋಪಿಗಳನ್ನು ಬಂಧಿಸುವಂತೆ ಆದೇಶಿಸಿದರು, ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯವೆಸಗಿದ್ದಾರೆ. ಈವರೆಗೂ ಹೆಚ್‌ಎಎಲ್‌ ಠಾಣೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಎಂಟು ಪ್ರಕರಣಗಳು ದಾಖಲಾಗಿವೆ. ಇದನ್ನು ತಡೆಯುವಲ್ಲಿ ಪೊಲೀಸರು ಸಂಪೂರ್ಣ ವಿಫ‌ಲರಾಗಿದ್ದಾರೆ,” ಎಂದರು. 

“ದೌರ್ಜನ್ಯ ಪ್ರಕರಣಗಳಲ್ಲಿ ಸಾರ್ವಜನಿಕರು ಧ್ವನಿ ಎತ್ತಿದರೇ ಮಾತ್ರವೇ ಪೊಲೀಸರು ಎಚ್ಚೆತುಕೊಳ್ಳುತ್ತಿದ್ದಾರೆ. ಪ್ರತಿಭಟನೆಯಿಂದ ಸಂಚಾರ ದಟ್ಟಣೆಯಾಗಲು ಪೊಲೀಸರೇ ನೇರ ಕಾರಣರಾಗಿದ್ದಾರೆ. ಒಂದು ಶಾಲೆಯಲ್ಲಿ ನಡೆದಿರುವ ಇಂತಹ ಪ್ರಕರಣಕ್ಕೆ ಕಾನೂನಿನ್ವಯ ಸೂಕ್ತ ಕ್ರಮ ಕೈಗೊಂಡರೆ, ಬೇರೆ ಶಾಲೆಯ ಆಡಳಿತ ಮಂಡಳಿಗಳೂ ಸಹ ಎಚ್ಚೆತ್ತುಕೋಳುತ್ತಾರೆ,” ಎಂದರು. ಹಲವರು ತಾಸು ಪ್ರತಿ¸‌ಟನೆ ನಡೆದಿದ್ದರಿಂದ ಕಿಲೋಮಿಟರ್‌ಗಳಷ್ಟು ದೂರು ಸಂಚಾರದಟ್ಟಣೆ ಉಂಟಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು. 

Advertisement

ಭರವಸೆ ನಂತರ ಪ್ರತಿಭಟನೆ ಹಿಂದಕ್ಕೆ 
ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಿರಿಯ ಪೋಲಿಸ್‌ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ನಂತರ ಮಾತನಾಡಿ, ತಪ್ಪಿತಸ್ಥರು ಯಾರೇ ಇದ್ದರು ಅವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎಲ್ಲೆ ಇದ್ದರೂ ಅಂಥವರನ್ನು ಬಂಧಿಸಿ ಜೈಲಿಗಟ್ಟಲಾಗುವುದು,” ಎಂದು ಅವರು ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next