Advertisement

Likitth Shetty; ಮೋಶನ್‌ ಪೋಸ್ಟರ್‌ನಲ್ಲಿ ಫುಲ್‌ ಮೀಲ್ಸ್‌

05:08 PM Aug 01, 2024 | Team Udayavani |

ಲಿಖಿತ್‌ ಶೆಟ್ಟಿ ನಾಯಕ ನಟರಾಗಿರುವ “ಫ‌ುಲ್‌ ಮೀಲ್ಸ್‌’ ಚಿತ್ರದ ಮೋಶನ್‌ ಪೋಸ್ಟರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಸಖತ್‌ ರೊಮ್ಯಾಂಟಿಕ್‌ ಆಗಿರುವ ಪೋಸ್ಟರ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಬಹುತೇಕ ಸಂಪೂರ್ಣವಾಗಿದ್ದು, ಸದ್ಯ ರೀರೆಕಾರ್ಡಿಂಗ್‌ ನಡೆಯುತ್ತಿದೆ. ವರ್ಷಾಂತ್ಯದೊಳಗೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ ತಂಡ.

ವೆಡ್ಡಿಂಗ್‌ ಫೋಟೋಗ್ರಾಫ‌ರ್‌ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಮನರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದೆ. ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಲಿಖಿತ್‌ ಶೆಟ್ಟಿಯವರಿಗಿದೆ. ಎನ್‌.ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next