Advertisement

ಸಿ.ಡಿ. ಪ್ರಕರಣ: ಖಾಸಗಿ ಏಜೆನ್ಸಿಯಿಂದ ತನಿಖೆ?

01:22 AM Mar 12, 2021 | Team Udayavani |

ಬೆಂಗಳೂರು:  ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ತನ್ನ  ವಿರುದ್ಧ ಷಡ್ಯಂತ್ರ ಮಾಡಿರುವ ಬಗ್ಗೆ ರಮೇಶ್‌ ಜಾರಕಿಹೊಳಿ ಅವರು 2 ದಿನದೊಳಗೆ ಅಧಿಕೃತ ದೂರು ದಾಖಲಿಸಲು ಮುಂದಾಗಿ ದ್ದಾರೆ ಹಾಗೂ ಪ್ರಕರಣದ ಕುರಿತು ಜಾರಕಿಹೊಳಿ ಸಹೋದರರು ಮುಂಬಯಿ ಮೂಲದ ಖಾಸಗಿ ಏಜೆನ್ಸಿಯಿಂದ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Advertisement

ಈಗಾಗಲೇ ಸರಕಾರ ಈ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ಆದರೆ,  ಅಧಿಕೃತ ದೂರು ದಾಖಲಾಗದೆ ಸಂಪೂರ್ಣ ತನಿಖೆ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ರಮೇಶ್‌ ಜಾರಕಿಹೊಳಿ ಅಧಿಕೃತ ದೂರು ದಾಖಲಿಸಿ, ತನಿಖೆಗೆ ಸಹಕಾರ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಈಗಾಗಲೇ ತಮಗೆ ದೊರೆತಿರುವ ಮಾಹಿತಿ ಪ್ರಕಾರ ಸಿ.ಡಿ. ಸಿದ್ಧಪಡಿಸಲು ಪ್ರಮುಖ ಪಾತ್ರ ವಹಿಸಿದವರ ಹೆಸರು ಗಳ ಸಮೇತ ದೂರು ನೀಡಲು ರಮೇಶ್‌ ಜಾರಕಿಹೊಳಿ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದ್ದು, ಇದರಲ್ಲಿ  ಪ್ರಭಾವಿಗಳು ಇರುವ ಸಾಧ್ಯತೆ ಇರುವುದರಿಂದ ದೂರಿನಲ್ಲಿ ದಾಖಲಿಸುವ ಹೆಸರುಗಳ ಬಗ್ಗೆ ಸಂಪೂರ್ಣ ಅಧಿಕೃತ ದಾಖಲೆ ಸಂಗ್ರಹಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಖಾಸಗಿ ತನಿಖಾ ಸಂಸ್ಥೆಯು ಕೆಲಸ ಆರಂಭಿಸಿದ್ದು, ಕಳೆದ ಒಂದು ವರ್ಷದಲ್ಲಿ ಯಾರು ಯಾರೊಂದಿಗೆ ದೂರವಾಣಿ ಸಂಪರ್ಕ ಮಾಡಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ. ಸುಮಾರು 6,000 ಕಾಲ್‌ ರೆಕಾರ್ಡ್‌ ಲಭ್ಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಸಿ.ಡಿ.ಯನ್ನು ಸಂಪೂರ್ಣ ನಕಲಿಯಾಗಿ ಸೃಷ್ಟಿಸಿರುವುದಕ್ಕೆ ಪೂರಕವಾದ ಮಾಹಿತಿ ಗಳು ಲಭ್ಯವಾಗಿದೆ ಎನ್ನಲಾಗಿದ್ದು, ಅದೇ ಕಾರಣದಿಂದ  ರಮೇಶ್‌ ಜಾರಕಿಹೊಳಿ ಧೈರ್ಯವಾಗಿ ಮಾಧ್ಯಮಗಳ ಎದುರು ನಕಲಿ ಮಾತನ್ನಾಡಿದ್ದಾರೆ ಎನ್ನಲಾಗಿದೆ.

Advertisement

 ಮಾರ್ಫಿಂಗ್‌ ಅನುಮಾನ ? :

ತಂತ್ರಜ್ಞಾನ ಬಳಸಿ ಮಾರ್ಫಿಂಗ್‌ ಮಾಡಿ ದೃಶ್ಯಗಳನ್ನು ಜೋಡಿಸಲಾಗಿದೆ ಎಂಬ ಸಂದೇಹವಿದೆ ಎನ್ನಲಾಗಿದ್ದು, ಅದನ್ನು ಅದರ ಸತ್ಯಾಸತ್ಯತೆ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲದಲ್ಲಿ ಪರೀಕ್ಷೆ ನಡೆಸಬೇಕಿದೆ. ಆದರೆ, ಅಧಿಕೃತ ದೂರು ದಾಖಲಾಗದೇ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವುದು ಕಷ್ಟ ಎನ್ನುವ ಕಾರಣಕ್ಕೆ ದೂರು ದಾಖಲಿಸಿದ ಬಳಿಕ ಎಲ್ಲ ಮಾಹಿತಿಯನ್ನು ಎಸ್‌ಐಟಿಗೆ ಒದಗಿಸುವ ಆಲೋಚನೆಯಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಪಕ್ಷದ ವತಿಯಿಂದಲೇ ದಿಲ್ಲಿ  ವಕೀಲರ ತಂಡ? :

ಬಿಜೆಪಿ ಹೈಕಮಾಂಡ್‌ ಕೂಡ  ಜಾರಕಿಹೊಳಿಗೆ ಸಹಕಾರ ನೀಡುತ್ತಿದೆ ಎಂದು ತಿಳಿದು ಬಂದಿದ್ದು, ದಿಲ್ಲಿ ಯಿಂದ ಪಕ್ಷದ ವತಿಯಿಂದಲೇ ನಾಲ್ವರು ನ್ಯಾಯವಾದಿಗಳು ಬೆಂಗಳೂರಿಗೆ ಆಗಮಿಸಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next