Advertisement
1. ಆಲೂಗಡ್ಡೆ ಚಕ್ಕುಲಿಬೇಕಾಗುವ ಪದಾರ್ಥ: ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ-3, ಅಕ್ಕಿ ಹಿಟ್ಟು- 1 ಬಟ್ಟಲು, ಉದ್ದಿನ ಹಿಟ್ಟು- 1/2 ಬಟ್ಟಲು, ಬೆಣ್ಣೆ ಅಥವಾ ತುಪ್ಪ- 5 ಚಮಚ, ಓಂ ಕಾಳು- 1/2 ಚಮಚ, ಜೀರಿಗೆ- 1/2 ಚಮಚ, ಬಿಳಿ ಎಳ್ಳು- 1 ಚಮಚ, ಮೆಣಸಿನ ಪುಡಿ- 1 ಚಮಚ, ಉಪ್ಪು ಮತ್ತು ಎಣ್ಣೆ.
ಬೇಕಾಗುವ ಸಾಮಗ್ರಿ: ಬೇಯಿಸಿ ತುರಿದ ಆಲೂಗಡ್ಡೆ- 1 ಬಟ್ಟಲು, ತುರಿದ ಚೀಸ್- 1/2 ಬಟ್ಟಲು, ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಪಾವ್‌ಬಾಜಿ ಮಸಾಲ ಪುಡಿ- 1ಚಮಚ, ಗರಂಮಸಾಲ ಪುಡಿ- 1/2 ಚಮಚ, ಮೆಣಸಿನ ಪುಡಿ- 1 ಚಮಚ, ಬ್ರೆಡ್ ಕ್ರಂಬ್ಸ್ (ಬ್ರೆಡ್ ಪುಡಿ)- 1/2 ಬಟ್ಟಲು, ಜೋಳದಹಿಟ್ಟು- 2ಚಮಚ, ಕೊತ್ತಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಹಸಿಮೆಣಸು- 1 ಚಮಚ, ಲಿಂಬೆ ರಸ- 1 ಚಮಚ, ಕಾಳುಮೆಣಸಿನ ಪುಡಿ- 1/2 ಚಮಚ, ಉಪ್ಪು ಮತ್ತು ಎಣ್ಣೆ.
Related Articles
Advertisement
3. ಆಲೂ ವೆಜ್ 65ಬೇಕಾಗುವ ಸಾಮಗ್ರಿ: ಕತ್ತರಿಸಿದ ಆಲೂಗಡ್ಡೆ- 1 ಕಪ್, ಮೊಸರು- 1/2 ಕಪ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್- 1/2 ಚಮಚ, ಗರಂಮಸಾಲ ಪುಡಿ- 1/2 ಚಮಚ, ಮೆಣಸಿನ ಪುಡಿ- 1 ಚಮಚ, ಕಾಳು ಮೆಣಸಿನ ಪುಡಿ- 1/2 ಚಮಚ, ಜೋಳದ ಹಿಟ್ಟು- 2 ಚಮಚ, ಮೈದಾಹಿಟ್ಟು- 2 ಚಮಚ, ಕೊತ್ತಂಬರಿ ಸೊಪ್ಪು- 2 ಚಮಚ, ಕತ್ತರಿಸಿದ ಈರುಳ್ಳಿ- 3 ಚಮಚ, ಕತ್ತರಿಸಿದ ಹಸಿಮೆಣಸು- 1 ಚಮಚ, ಕರಿಬೇವಿನ ಸೊಪ್ಪು, ಜೀರಿಗೆ ಪುಡಿ- 1/2 ಚಮಚ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಯಲು ಎಣ್ಣೆ. ಮಾಡುವ ವಿಧಾನ: ಆಲೂಗಡ್ಡೆಯನ್ನು ಸಣ್ಣ ಸಣ್ಣ ಬಿಲ್ಲೆಯಾಗಿ ಕತ್ತರಿಸಿ, ಕುದಿಯುವ ನೀರಿಗೆ ಹಾಕಿ 5 ನಿಮಿಷ ಬೇಯಿಸಿ. ಬೆಂದ ಆಲೂವನ್ನು ಪಾತ್ರೆಗೆ ವರ್ಗಾಯಿಸಿ, ಮೈದಾಹಿಟ್ಟು, ಜೋಳದ ಹಿಟ್ಟು, ಕಾಳುಮೆಣಸಿನ ಪುಡಿ, ಚಿಟಿಕೆ ಉಪ್ಪು ಸೇರಿಸಿ, ನೀರಿಲ್ಲದೆ ಗಟ್ಟಿಯಾಗಿ ಕಲಸಿಕೊಳ್ಳಿ. ಕಲಸಿದ ಆಲೂವನ್ನು, ಕಂದುಬಣ್ಣ ಬರುವವರೆಗೆ ಕರಿದು, ನಂತರ ಟಿಶ್ಯೂ ಪೇಪರ್ ಮೇಲೆ ವರ್ಗಾಯಿಸಿಕೊಳ್ಳಿ. ನಂತರ ಮತ್ತೂಂದು ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಜೀರಿಗೆ ಪುಡಿ, ಮೊಸರು, ಕತ್ತರಿಸಿದ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಸಾಲೆ ತಯಾರಿಸಿ. ಆ ಮಸಾಲೆಗೆ ಕರಿದ ಆಲೂವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, 5 ನಿಮಿಷ ಬಿಟ್ಟರೆ ಆಲೂ ವೆಜ್ 65 ಸಿದ್ಧ. 4. ಆಲೂ ಮಂಚೂರಿಯನ್
ಬೇಕಾಗುವ ಸಾಮಗ್ರಿ: ಕತ್ತರಿಸಿದ ಆಲೂಗಡ್ಡೆ- 1 ಬೌಲ್, ಟೊಮೆಟೋ ಸಾಸ್- 4 ಚಮಚ, ಸೋಯ ಸಾಸ್- 1 ಚಮಚ, ವಿನೇಗರ್- 1 ಚಮಚ, ಚಿಲ್ಲಿ ಸಾಸ್- 1 ಚಮಚ, ಅಚ್ಚಮೆಣಸಿನ ಪುಡಿ- 1 ಚಮಚ, ಮೈದಾ ಹಿಟ್ಟು – 2 ಚಮಚ, ಅಕ್ಕಿಹಿಟ್ಟು – 2 ಚಮಚ, ಜೋಳದ ಹಿಟ್ಟು- 2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಉಪ್ಪು, ಕತ್ತರಿಸಿದ ಈರುಳ್ಳಿ-1, ಕತ್ತರಿಸಿದ ಕ್ಯಾಪ್ಸಿಕಮ್-1, ಕತ್ತರಿಸಿದ ಹಸಿಮೆಣಸು- 2, ಕೊತ್ತಂಬರಿ ಸೊಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಆಲೂಗಡ್ಡೆಯನ್ನು ಸಣ್ಣ ಸಣ್ಣ ಬಿಲ್ಲೆಯಾಗಿ ಕತ್ತರಿಸಿ, ಕುದಿಯುವ ನೀರಿಗೆ ಹಾಕಿ 5 ನಿಮಿಷ ಬೇಯಿಸಿ. ಬೆಂದ ಆಲೂವನ್ನು ಪಾತ್ರೆಗೆ ವರ್ಗಾಯಿಸಿ. ಮತ್ತೂಂದು ಪಾತ್ರೆಗೆ ಮೈದಾ ಹಿಟ್ಟು, ಅಕ್ಕಿಹಿಟ್ಟು, ಜೋಳದ ಹಿಟ್ಟು, ಶುಂಠಿ- ಬೆಳ್ಳುಳ್ಳಿ ಪೇಸ್ಟ್- 1/2 ಚಮಚ, ಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಆ ಹಿಟ್ಟಿಗೆ ಬೇಯಿಸಿದ ಆಲೂ ಬಿಲ್ಲೆಯನ್ನು ಒಂದೊಂದಾಗಿ ಅದ್ದಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ನಂತರ ಮತ್ತೂಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಅದು ಕಾದ ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ, ಕತ್ತರಿಸಿದ ಕ್ಯಾಪ್ಸಿಕಮ್, ಮೆಣಸಿನ ಪುಡಿ 1/2 ಚಮಚ, ವಿನೇಗರ್, ಎಲ್ಲಾ ಬಗೆಯ ಸಾಸ್, ರುಚಿಗೆ ತಕ್ಕಷ್ಟು ಉಪ್ಪು ಹಾಗೂ 1/2 ಚಮಚ ಜೋಳದ ಹಿಟ್ಟನ್ನು ಕಲಸಿಕೊಂಡು, ಅದನ್ನು ಒಗ್ಗರಣೆಗೆ ಸೇರಿಸಿ ಮಸಾಲೆ ತಯಾರಿಸಿ. ಆ ಮಸಾಲೆಗೆ ಕರಿದ ಆಲೂವನ್ನು ಸೇರಿಸಿ, ಚೆನ್ನಾಗಿ ಕೈಯಾಡಿಸಿ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸಾಸ್‌ನೊಂದಿಗೆ ಸವಿಯಿರಿ. ರೂಪಾ ವಿಶ್ವನಾಥ್