ಪಾಲಿಕ್ಕಡ್ : ಕೇರಳ ರಾಜಕೀಯದಲ್ಲಿ ಎಲ್ ಡಿ ಎಫ್ ಹಾಗೂ ಯು ಡಿ ಎಫ್ ಸೌಹಾರ್ಧ ಒಪ್ಪಂದ ಮಾಡಿಕೊಂಡಿವೆ ಎನ್ನುವುದು ಹಲವಾರು ವರ್ಷಗಳಿಂದ ಕಾಪಾಡಿಕೊಂಡಿರುವ ಗೌಪ್ಯವಾದ ಗುಟ್ಟು , ಇದೇ ಮೊದಲ ಬಾರಿಗೆ ಕೇರಳದ ಮತದಾರರು ಏನಿದು ಮ್ಯಾಚ್ ಫಿಕ್ಸಿಂಗ್ ಎಂದು ಕೇಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಓದಿ : ಸಿಖ್ಖರ ಮೆರವಣಿಗೆಗೆ ಅನುಮತಿ ನಕಾರ, ಖಡ್ಗದಿಂದ ದಾಳಿ, ನಾಲ್ವರು ಪೊಲೀಸರಿಗೆ ಗಾಯ
ಕೇರಳದ ಪಾಲಿಕ್ಕಡ್ ನಲ್ಲಿ ಮೆಟ್ರೋ ಮ್ಯಾನ್ ಇ ಶ್ರೀಧರನ್ ಪರವಾಗಿ ಮತ ಪ್ರಚಾರ ಸಭೆಯಲ್ಲಿ ಶ್ರೀಧರನ್ ಅವರನ್ನು ಸನ್ಮಾನಿಸಿ ಮಾತನಾಡಿದ ಪ್ರಧಾನಿ, ಮೆಟ್ರೋಮ್ಯಾನ್ ಇ ಶ್ರೀಧರನ್ ಭಾರತವನ್ನು ಆಧುನೀಕರಣಗೊಳಿಸಲು ಹಾಗೂ ಸಂಪರ್ಕ ವ್ಯವಸ್ತೆಯನ್ನು ಸುಗಮಗೊಳಿಸಲು ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಸಮಾಜದ ಎಲ್ಲಾ ವಿಭಾಗದ ಜನರು ಅವರನ್ನು ಗೌರವಿಸುತ್ತಾರೆ. ಕೇರಳದ ಅಭಿವೃದ್ಧಿಗಾಗಿ ಅವರು ಬದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.
ಇನ್ನು, ಕೆಲವೇ ಕೆಲವು ಬೆಳ್ಳಿ ತುಂಡುಗಳಿಗಾಗಿ ಜೂಡಸ್ ಯೇಸು ಕ್ರಿಸ್ತನನ್ನು ಮೋಸ ಮಾಡಿದ್ದನು. ಅದೇ ರೀತಿ ಚಿನ್ನದ ಕೆಲವೇ ತುಂಡುಗಳಿಗಾಗಿ ಎಲ್ ಡಿ ಎಫ್ ಕೇರಳದ ಜನರಿಗೆ ಮೋಸ ಮಾಡಿದೆ ಎಂದು ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಸಿಡಿದಿದ್ದಲ್ಲದೇ, ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಆಶೀರ್ವಾದ ಮಾಡಿ, ಕೇರಳದ ಈಗಿನ ಸ್ಥಿತಿಯಿಂದ ಭಿನ್ನವಾದ ಕನಸುಗಳನ್ನು ನಾನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಓದಿ : ಕೋವಿಡ್ ಆತಂಕ : ಚಂಡಿಗಡದ 25 ಪ್ರದೇಶಗಳು ಕಂಟೈನ್ ಮೆಂಟ್ ಜ್ಹೋನ್