Advertisement

ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಸಿಡಿಲಿನ ಹೊಡೆತ: ಒಂದೇ ದಿನ 107 ಜನರು ಬಲಿ

12:56 PM Jun 26, 2020 | Mithun PG |

ಬಿಹಾರ: ಬಿಹಾರದಲ್ಲಿ ಗುರುವಾರ ಸಿಡಿಲಿನ ಹೊಡೆತಕ್ಕೆ ಸಿಲುಕಿ  83 ಜನರು ಸಾವನ್ನಪ್ಪಿದ್ದು, ಉತ್ತರಪ್ರದೇಶದಲ್ಲಿ 24 ಜನರು ಮೃತಪಟ್ಟಿದ್ದಾರೆ. ಹಾಗಾಗಿ ಒಂದೇ ದಿನ 107 ಜನರು ಬಲಿಯಾಗಿದ್ದು ಪ್ರಧಾನಿ ಮೋದಿ ಘಟನೆಯ ಕುರಿತು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

Advertisement

ಉತ್ತರ ಭಾರತದ ರಾಜ್ಯಗಳಲ್ಲಿ ಮುಂಗಾರು ಬಲಗೊಂಡಿದ್ದು, ಭಾರೀ ಮಳೆಯಾಗುತ್ತಿದೆ. .ಗುರುವಾರ ಸಂಜೆ, ಬಿಹಾರ ಸರ್ಕಾರವು ಸಿಡಿಲಿನ ಹೊಡೆತಕ್ಕೆ ಸಿಲುಕಿ 83 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ. ಗೋಪಾಲಗಂಜ್ ಜಿಲ್ಲೆಯಿಂದ (13) ಹೆಚ್ಚಿನ ಸಾವುಗಳು ಸಂಭವಿಸಿವೆ. ಮೃತಪಟ್ಟವರ  ಕುಟುಂಬಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲಾ 4 ಲಕ್ಷ  ರೂ. ಪರಿಹಾರ ಘೋಷಿಸಿದ್ದಾರೆ.

ಉತ್ತರ ಪ್ರದೇಶದಲ್ಲೂ ಕೂಡ ಸಿಡಿಲು ಬಡಿದು 24 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರ ವರದಿ ಮಾಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಪರಿಹಾರ ಘೋಷಿಸಿ ಸಂತಾಪ ಸೂಚಿಸಿದ್ದಾರೆ.

 

ಬಿಹಾರದಲ್ಲಿ 32 ಮತ್ತು ಉತ್ತರ ಪ್ರದೇಶದಲ್ಲಿ 12 ಜನರು ಸಿಡಿಲಿನ ಹೊಡತಕ್ಕೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ಮಾತ್ರವಲ್ಲದೆ ಹಲವಾರು ಆಸ್ತಿಪಾಸ್ಥಿಗಳು ಹಾನಿಗೊಮಡಿದ್ದು  ಬಿಹಾರದಲ್ಲಿ 40 ಕ್ಕ ಹೆಚ್ಚು ಪ್ರಾಣಿಗಳು ಅಸುನೀಗಿವೆ.

Advertisement

ಘಟನೆಯ ಕುರಿತು  ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರಗಳು ಪರಿಸ್ಥಿತಿಗೆ ಸೂಕ್ತವಾಗಿ ಸ್ಪಂದಿಸಲು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next