Advertisement
ದೀಪಸ್ಥಂಭಗಳು ಹಡಗುಗಳಿಗೆ ಸಂಚಾರಕ್ಕೆ ಸಹಾಯ ಮಾಡಲು ನಿರ್ಮಿಸಲಾಗುತ್ತದೆ. ಆಧುನಿಕ ತಂತ್ರಜ್ಞಾನಗಳ ಅನ್ವೇಷಣೆಗಳಿಂದಾಗಿ ಅವು ಸ್ವಲ್ಪ ಹಳೆಯದಾಗಿಕಂಡರೂ, ದೀಪಸ್ತಂಭಗಳು ಇನ್ನೂ ಪ್ರಮುಖವಾದುದಾಗಿದೆ. ಅನೇಕ ದೀಪಸ್ತಂಭಗಳು ಸಾರ್ವಜನಿಕರಿಗೆ ಅವಕಾಶ ನೀಡುವುದರಿಂದ, ಇದು ಬೀಚ್ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ನಾವು ಮರದ ಸುಡುವ ಬೆಳಕಿನಿಂದ ಲೈಟ್‌ಹೌಸ್‌ಗಳಲ್ಲಿ ಬಳಸುವ ಲೇಸರ್ ದೀಪಗಳವರೆಗೆ ಬಹಳ ಅಭಿವೃದ್ದಿಯನ್ನು ಹೊಂದಿದ್ದೇವೆ. ಈ ದೀಪಸ್ತಂಭಗಳು ಇಂದು, ಪ್ರಾಚೀನ ಕಾಲದಲ್ಲಿ ಸೇವೆ ಸಲ್ಲಿಸಿರುವ ಇತಿಹಾಸವನ್ನು ಹೊಂದಿವೆ. ವಾಣಿಜ್ಯ ಅಥವಾ ಯಾವುದೇ ಉದ್ದೇಶದ ಹಡಗು ಮತ್ತು ಹಿಂದಿನ ಹಾಯಿ ದೋಣಿಗಳಿಗೆ ದಾರಿ, ದಿಕ್ಕುಗಳನ್ನು ತೋರಿದ ಭಾರತದಲ್ಲಿನ ಐತಿಹಾಸಿಕ ನಿರ್ಮಾಣಗಳೇ ಈ ಜನಪ್ರಿಯ ಲೈಟ್‌ಹೌಸ್‌ಗಳು.
Related Articles
Advertisement
ಭಾರತದ ಇತರ ಪ್ರಮುಖ ಲೈಟ್ ಹೌಸ್ ಗಳು ಕೂಡ ಪ್ರವಾಸಿಗರನ್ನು ತನ್ನೆಡೆ ಆಕರ್ಷಿಸುತ್ತಿವೆ, ಅಂತಹ ಪ್ರಮುಖ ಲೈಟ್ ಹೌಸ್ ಗಳು ವಿಝಿಂಜಂ ಲೈಟ್ ಹೌಸ್, ಮಹಾಬಲಿಪುರಂ ಲೈಟ್ ಹೌಸ್, ತಂಗಸ್ಸೆರಿ ದೀಪಸ್ತಂಭಗಳಾಗಿವೆ.
ವಿಝಿಂಜಂ ಲೈಟ್ ಹೌಸ್ : ಕೋವಲಂ ನ ವಿಝಿಂಜಂ ದೀಪಸ್ತಂಭವು ಕೇರಳದ ಅತ್ಯಂತ ಹಳೆಯ ದೀಪಸ್ತಂಭಗಳಲ್ಲೊಂದಾಗಿದೆ. 18 ಮತ್ತು 19ನೇ ಶತಮಾನಗಳಲ್ಲಿ ವಿಝಿಂಜಂ ಅತ್ಯಂತ ಹೆಚ್ಚು ಕಾರ್ಯನಿರತವಾಗಿದ್ದ ಬಂದರಾಗಿತ್ತು ಆದುದರಿಂದ ಇಲ್ಲಿ ದೀಪಸ್ತಂಭವನ್ನು ನಿರ್ಮಿಸಲಾಗಿದೆ. ಇಂದು ಈ ದೀಪಸ್ತಂಭವು ಕೇರಳದ ಕೋವಲಂ ಬೀಚ್ ನ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ.
ಮಹಾಬಲಿಪುರಂ ಲೈಟ್ ಹೌಸ್: ಮಹಾಬಲಿಪುರಂ ದೀಪಸ್ತಂಭವು ಕಲ್ಲಿನಲ್ಲಿ ರಚಿತವಾದ ರಚನೆಯಾಗಿದ್ದು ಇದನ್ನು ವಸಾಹತು ಶಾಯಿಗಳ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು. ಇದನ್ನು ಪಲ್ಲವ ರಾಜ ಮಹೇಂದ್ರ ಪಲ್ಲವ ನಿರ್ಮಿಸಿದ ಪ್ರಾಚೀನ ದೀಪಸ್ತಂಭದ ಪಕ್ಕದಲ್ಲಿ ನಿರ್ಮಿಸಲಾಗಿದೆ. ಇದು ಭಾರತದ ರಾಜರ ದೂರದೃಷ್ಟಿಯನ್ನು ತೋರಿಸುತ್ತದೆ.
ತಂಗಸ್ಸೆರಿ ದೀಪಸ್ತಂಭ: ತಂಗಸ್ಸೆರಿ ದೀಪಸ್ತಂಭವನ್ನು ಕೊಲ್ಲಂನ ತಂಗಸ್ಸೆರಿಯಲ್ಲಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟಿದೆ. ಈ ದೀಪಸ್ತಂಭವು ಕೇರಳದ ಅತ್ಯಂತ ಎತ್ತರದ ದೀಪಸ್ತಂಭವೆನಿಸಿದೆ.
ಫ಼ೋರ್ಟ್ ಅಗುಡಾ, ದೀಪಸ್ತಂಭ: ಗೋವಾದ ಪೋರ್ಟ್ ಅಗುಡಾ ಪೋರ್ಚುಗೀಸರ ವಾಸ್ತುಶಿಲ್ಪಗಳಲ್ಲೊಂದಾಗಿದೆ. ಇದು ಗೋವಾ ಸಿಂಕ್ವೇರಿಯಂ ಬೀಚ್ ನ ಪ್ರಮುಖ ಆಕರ್ಷಣೆಯಾಗಿದೆ.
ದೀಪಸ್ಥಂಭಗಳು ಈಗ ಪ್ರವಾಸಿ ತಾಣಗಳಾಗಿ ಗುರುತಿಸಿಕೊಂಡರೂ, ಒಂದೊಮ್ಮೆ ಹಲವರ ಜೀವನಕ್ಕೆ, ಜೀವನಕ್ರಮಗಳಿಗೆ ದಾರಿ ತೋರಿದ ಬೆಳಕು ಅದು. ಸಮುದ್ರದ ಏರಿಳಿತಗಳ ಮಧ್ಯೆ ಕೇವಲ ಅನುಭವಗಳ ಮೇಲೆ ದಿಕ್ಕು ಕಂಡುಕೊಳ್ಳುತ್ತಿದ್ದ ಕಾಲದಲ್ಲಿ ದಡ ಸೇರಲು, ದಿಕ್ಕುಗಳನ್ನು ಅರಿಯಲು ಗುರುವಾಗಿ, ದಾರಿದೀಪವಾಗಿ ಭರವಸೆಯ ಬೆಳಕಾಗಿದ್ದದ್ದು ಇದೇ ದೀಪಸ್ತಂಭಗಳು.