ದೀಪ ಎಂದರೆ ಬೆಳಕು. ಬೆಳಕು ಜ್ಞಾನದ ಸಂಕೇತ. ದೀಪ ಎಂದರೆ ಶಾಂತಿ,. ದಿನ ನಿತ್ಯವೂ ದೀಪವನ್ನು ಬೆಳಗಿಸುವುದರಿಂದ ಜೀವನಕ್ಕೊಂದು ಸಂತೋಷ, ನೆಮ್ಮದಿ ಸಿಗುತ್ತದೆ. ಹಿಂದೆ ನಮ್ಮ ಹಿರಿಯರು ಮಣ್ಣಿನ ದೀಪಗಳನ್ನು ಬಳಸುತ್ತಿದ್ದರು. ಪ್ರತಿ ನಿತ್ಯ ಮನೆಯ ಮಹಿಳೆಯರು ಸ್ನಾನ ಮಾಡಿ ಬೆಳಗ್ಗೆ ಹಾಗೂ ಸಂಜೆ ಹೊತ್ತಿಗೆ ದೀಪ ಹಚ್ಚುತ್ತಿದ್ದರು. ಸಂಬಂಧಗಳು ಗಟ್ಟಿಯಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ದೀಪ ಹಚ್ಚುವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ.
ಅಯ್ಯೋ, ಅದನ್ನೆಲ್ಲಾ ಯಾರು ಮಾಡುತ್ತಾರೆ, ಆರ್ಟಿಫಿಶಿಯಲ್ ದೀಪ ತಂದು ಸ್ವಿಚ್ ಹಾಕಿದರೆ ಸಾಕು ಅದು ದೀಪವಲ್ಲವೇ? ಅಂತ ಹೇಳುತ್ತಾರೆ.
ಮನುಷ್ಯನ ಸೋಮಾರಿತನದಿಂದಾಗಿ ಮನೆಯಲ್ಲಿನ ಶಾಂತಿ ಹಾಳಾಗುತ್ತದೆ ಎಂದರೆ ತಪ್ಪಾಗಲಾರದು. ಮನುಷ್ಯ ಶಾಂತನಾಗಿರಬೇಕು ಎಂದರೆ ಪ್ರತಿನಿತ್ಯ ದೀಪ ಬೆಳಗಿಸಬೇಕು.
ಬೆಳಕಿನ ಹಬ್ಬ ದೀಪಾವಳಿಯ ಬಂದಿದೆ. ಪ್ರತಿ ಮನೆಯಲ್ಲಿಯೂ ಮನದಲ್ಲಿಯೂ ಶಾಂತಿಯನ್ನು ತಂದುಕೊಳ್ಳುವ ಹಬ್ಬ. ಕುಟುಂಬವೊಂದು ಒಂದುಗೂಡಿ ಹೊಸ ಹೊಸ ಬಟ್ಟೆಗಳ ಧರಿಸಿ ಆನಂದದಿಂದ ನಲಿದು ಸಂತೋಷದಿಂದ ಮನೆಯ ತುಂಬೆಲ್ಲಾ ದೀಪ ಬೆಳಗಿಸಿ ಮನೆಯವರೆಲ್ಲರೂ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಳ್ಳುತ್ತಾರೆ. ಹಸಿರು ಪಟಾಕಿಯನ್ನ ಬಳಸಿ ಪರಿಸರ ನಾಶ ಉಳಿಸಿ.
ಸದಾಶಿವ ಬಿ.ಎನ್
ಪತ್ರಿಕೋದ್ಯಮ ವಿಭಾಗ
ಎಂ. ಜಿ. ಎಂ ಕಾಲೇಜು ಉಡುಪಿ