Advertisement
ರಾಜ್ಯ ಸರಕಾರವು ಸಮುದ್ರದಲ್ಲಿ 12 ನಾಟಿಕಲ್ ಮೈಲು ಒಳಗಿನ ಪ್ರದೇಶ ಹಾಗೂ ಕೇಂದ್ರ ಸರಕಾರವು 12 ನಾಟಿಕಲ್ ಮೈಲು ಹೊರಗಿನ ವ್ಯಾಪ್ತಿಯಲ್ಲಿ ಬುಲ್ ಟ್ರಾಲಿಂಗ್ ಹಾಗೂ ಬೆಳಕು ಹಾಕಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿವೆ. ಆದರೆ ಇತ್ತೀಚೆಗೆ ಭಟ್ಕಳಕ್ಕೆ ಬಂದಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿಯಾದ ಮೀನುಗಾರರಿಗೆ ಸದ್ಯ ಲೈಟ್ ಫಿಶಿಂಗ್ ನಡೆಸಬಹುದು ಎನ್ನುವ “ಮೌಖೀಕ’ವಾಗಿ ಆದೇಶಿಸಿದ್ದಾರೆ ಎನ್ನಲಾಗಿದೆ.
ಮೀನುಗಾರಿಕೆ ನಡೆಯುತ್ತಿರುವ ಅನ್ಯ ದೇಶಗಳಲ್ಲಿಯೂ ಲೈಟ್ ಫಿಶಿಂಗ್‌ಗೆ ಅನುಮತಿಯಿದೆ. ರಾತ್ರಿ ವೇಳೆ ಮೀನುಗಳ ಹೆಚ್ಚು ಪ್ರಮಾಣದಲ್ಲಿ ಹಾಗೂ ಬೃಹತ್ ಗಾತ್ರದ ಮೀನುಗಳು ಸಿಗುವುದರಿಂದ ರಾಜ್ಯ ಕರಾವಳಿಯಲ್ಲಿಯೂ ಲೈಟ್
ಫಿಶಿಂಗ್‌ಗೆ ಅವಕಾಶ ನೀಡುವಂತೆ ಮೀನುಗಾರರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
Related Articles
Advertisement
ಏನಿದು ಲೈಟ್ ಫಿಶಿಂಗ್?ಪಸೀನ್ ಬೋಟುಗಳಲ್ಲಿ ಜನರೇಟರ್ ವ್ಯವಸ್ಥೆ ಮಾಡಿ, ತೀರದಿಂದ 12 ನಾಟಿಕಲ್ ಮೈಲು ದೂರದಲ್ಲಿ ರಾತ್ರಿ ವೇಳೆ ಆಳ ಸಮುದ್ರದಲ್ಲಿ ಲೈಟ್ ಉರಿಸಿ, ಬೋಟುಗಳು ಸುತ್ತುವರಿದು, ಮೀನುಗಾರಿಕೆ ನಡೆಸುವ ವಿಧಾನ ಲೈಟ್ ಫಿಶಿಂಗ್. ಕೇಂದ್ರಕ್ಕೆ ಪತ್ರ: ಸಚಿವ ಪ್ರಮೋದ್
ರಾಜ್ಯ ಸರಕಾರಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಲೈಟ್ ಫಿಶಿಂಗ್ ನಿಷೇಧಿಸಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯಲಾಗುವುದು.
ಪ್ರಮೋದ್ ಮಧ್ವರಾಜ್, ರಾಜ್ಯ ಮೀನುಗಾರಿಕೆ ಸಚಿವರು ಇದು ಅಸಾಂಪ್ರದಾಯಿಕ ವಿಧಾನವೇ?
ಲೈಟ್ ಫಿಶಿಂಗ್ ಅಸಾಂಪ್ರದಾಯಿಕ ಮೀನುಗಾರಿಕೆಯ ವಿಧಾನ, ಇದರಿಂದ ಮತ್ಸé ಸಂತತಿ ನಾಶ ಆಗುತ್ತದೆ ಎನ್ನುವ ಅಪವಾದಗಳಿವೆ. ಆದರೆ ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಂಪಾಡನ್ ಎನ್ನುವ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಸಂಸ್ಥೆ ಈ ಬಗ್ಗೆ ವಿಜ್ಞಾನಿಗಳ ತಂಡದಿಂದ ಅಧ್ಯಯನ ನಡೆಸಿದ್ದು, ಅದರನ್ವಯ 25 ಕಿಲೋ ವ್ಯಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಜನರೇಟರ್ ಬಳಸಬಾರದು, 45 ಎಂಎಂಗಿಂತ ಸಣ್ಣ ಬಲೆಗಳನ್ನು ಬಳಸಬಾರದು, ಹುಣ್ಣಿಮೆ ಸಮಯದಲ್ಲಿ ಲೈಟ್ ಫಿಶಿಂಗ್ ನಡೆಸಬಾರದು ಎನ್ನುವ ಷರತ್ತು ವಿಧಿಸಿ ಅನುಮತಿ ನೀಡಲಾಗಿತ್ತು. ಆದರೆ ಕೆಲವು ತಿಂಗಳ ಹಿಂದೆ ಗೋವಾದಲ್ಲಿ ಪಸೀìನ್ ಹಾಗೂ ಸಾಮಾನ್ಯ ದೋಣಿ ಮೀನುಗಾರರ ನಡುವೆ ನಡೆದ ಸಂಘರ್ಷದ ಪರಿಣಾಮ ಅಲ್ಲಿನ ಸರಕಾರ ಕೇಂದ್ರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಲೈಟ್ ಫಿಶಿಂಗ್‌ಗೆ ಕೇಂದ್ರ ನಿಷೇಧ ಹೇರಿತ್ತು. ಪ್ರಶಾಂತ್ ಪಾದೆ