ತಿಳಿ ಬಣ್ಣದ ಡೆನಿಮ… ಉಡುಪುಗಳು ಇದೀಗ ಟ್ರೆಂಡಿ ಆಗುತ್ತಿವೆ. ಅಂದಹಾಗೆ, ಇವು “ಆ್ಯಸಿಡ್‌ವಾಶ್ ಡೆನಿಮ…’. ಅಚ್ಚರಿಯೆಂದರೆ, ಈ ಉಡುಪಿನ ಬಣ್ಣ ತೆಗೆಯಲು ಯಾವುದೇ ಆ್ಯಸಿಡ್ ಬಳಸಲಾಗುವುದಿಲ್ಲ. ಆದರೂ ಇದಕ್ಕೆ ಹೆಸರು ಆ್ಯಸಿಡ್ ವಾಶ್…
ಜೀನ್ಸ್ ಎಂಬುದು ಮಹಿಳೆಯರ ವಾರ್ಡ್‌ರೋಬ…ನ ಅವಿಭಾಜ್ಯ ಅಂಗ. ಜೀನ್ಸ್‌ನಲ್ಲೂ ಬಗೆ ಬಗೆಯ ವಿನ್ಯಾಸಗಳು, ಉಡುಪುಗಳು ಮತ್ತು ಬಣ್ಣಗಳಿವೆ. ಹೌದು, ಜೀನ್ಸ್‌ಗೆ ಬಣ್ಣ ಹಾಕುವುದು (ಡೈ) ಅಥವಾ ತೆಗೆಯುವುದೂ ಒಂದು ಕಲೆ! ಇದೀಗ ಟ್ರೆಂಡ್ ಆಗುತ್ತಿರುವ ಉಡುಗೆ ಎಂದರೆ, ತಿಳಿ ಬಣ್ಣದ ಡೆನಿಮ… ಉಡುಪುಗಳು. ಅಂದರೆ, ಆ್ಯಸಿಡ್‌ವಾಶ್ ಡೆನಿಮ…. ಆಶ್ಚರ್ಯ ಎಂದರೆ ಈ ಉಡುಪಿನ ಬಣ್ಣ ತೆಗೆಯಲು ಯಾವುದೇ ಆ್ಯಸಿಡ್ ಬಳಸಲಾಗುವುದಿಲ್ಲ. ಆದರೂ ಈ ವಿಧಾನಕ್ಕೆ “ಆ್ಯಸಿಡ್ ವಾಶ್’ ಎನ್ನಲಾಗುತ್ತದೆ.
ಜೀನ್ಸ್ ಮೇಲೆ ಬಗೆ ಬಗೆಯ ಆಕೃತಿ ಮೂಡಿಸಲು, ಕ್ಲೋರಿನ್‌ನಲ್ಲಿಟ್ಟಿದ್ದ ಕಲ್ಲುಗಳನ್ನು ಬೇಕಾದ ರೀತಿಯಲ್ಲಿ ಜೀನ್ಸ್ ಮೇಲೆ ಇಡಲಾಗುತ್ತದೆ. ಇದರಿಂದ ಬಟ್ಟೆಯ ಮೇಲೆ ಕಲ್ಲುಗಳಿಟ್ಟ ಜಾಗದಲ್ಲಿ ಬಣ್ಣ ತಿಳಿಯಾಗುತ್ತದೆ. ಮಿಕ್ಕ ಜಾಗವೆಲ್ಲ ಗಾಢ ಬಣ್ಣವಾಗಿಯೇ ಇರುತ್ತದೆ. ಆ್ಯಸಿಡ್ ವಾಶ್‌ನಿಂದ ಬಣ್ಣ ತಿಳಿಯಾಗುವುದೂ ಅಲ್ಲದೆ, ಬಟ್ಟೆ ಮೃದು ಕೂಡ ಆಗುತ್ತದೆ. ಸಾಪ್ಟ್ ಜೀನ್ಸ್‌ಗಾಗಿ ಜನರು, ಆ್ಯಸಿಡ್‌ವಾಶ್ ಅನ್ನು ಮಾಡುತ್ತಾರೆ, ಅಥವಾ ಮಾಡಿಸುತ್ತಾರೆ. ಆದ್ದರಿಂದಲೇ, ಸಾಮಾನ್ಯ ಜೀನ್ಸ್‌ಕ್ಕಿಂತ ಆ್ಯಸಿಡ್ ವಾಶ್ ಜೀನ್ಸ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚು, ಬೆಲೆಯೂ ಹೆಚ್ಚು.
ಮನೆಯಲ್ಲೇ ಆ್ಯಸಿಡ್ ವಾಶ್ ಮಾಡಬಹುದು. ಆದರೆ, ಪ್ರಯೋಗಕ್ಕೆ ಹೊಸ ಜೀನ್ಸ್ ಬಳಸದಿರಿ! ಹಳೆಯ, ಹರಿದ ಜೀನ್ಸ್ ಮೇಲೆ ಪ್ರಯೋಗಿಸಿ ನೋಡಿ. ಅಭ್ಯಾಸವಾದ ಬಳಿಕವಷ್ಟೇ ಒಳ್ಳೆ ಬಟ್ಟೆಯ ಮೇಲೆ ಆ್ಯಸಿಡ್‌ವಾಶ್ ಮಾಡಿ. ಮಾರುಕಟ್ಟೆಯಲ್ಲಿ ಊಹಿಸಲು ಸಾಧ್ಯವಿಲ್ಲದಷ್ಟು ಬಗೆಯ ಆ್ಯಸಿಡ್ ವಾಶ್ ಉಡುಪುಗಳು ಲಭ್ಯವಿರುವ ಕಾರಣ, ಯಾರೂ ಮನೆಯಲ್ಲಿ ಆ್ಯಸಿಡ್ ವಾಶ್ ಅನ್ನು ಪ್ರಯೋಗ ಮಾಡಿ ನೋಡಲು ಹೋಗುವುದಿಲ್ಲ.
ಆ್ಯಸಿಡ್ ವಾಶ್ ಎಂಬುದು ಕೇವಲ ಜೀನ್ಸ್‌ಗೆ ಸೀಮಿತವಾಗದೆ, ಅಂಗಿ, ಟಿ ಶರ್ಟ್, ಉದ್ದ ತೋಳಿನ ಡ್ರೆಸ್, ಸ್ಲಿವ್ ಲೆಸ್ ಡ್ರೆಸ್, ಜಾಕೆಟ…, ಶಾರ್ಟ್, ಲಂಗ, ಮಿನಿ ಸ್ಕರ್ಟ್, ಲೆಗ್ಗಿಂಗ್ಸ್, ಟೋಪಿ, ಬ್ಯಾಗ್ ಹಾಗು ಶೂ ಗಳಲ್ಲೂ ತುಂಬಾ ಸಮಯದಿಂದ ಬಳಸಲಾಗುತ್ತಿದೆ. ಜೀನ್ಸ್ ನಲ್ಲಿ ಆ್ಯಸಿಡ್ ವಾಶ್ ಮತ್ತು ಅದರಲ್ಲೂ ರಿಪ್ಡ್ ಜೀನ್ಸ್ (ಮಂದಿಯ ಹತ್ತಿರ ಹರಿದ ಜೀನ್ಸ್) ಅನ್ನು, ಕಾಲೇಜು ಹೋಗುವ ಯುವಕ ಯುವತಿಯರು ಇಷ್ಟ ಪಟ್ಟು ತೊಡುತ್ತಾರೆ. ಸಿನಿಮಾ ತಾರೆಯರೂ ಈ ಟ್ರೆಂಡ್ ಅನ್ನು ಫಾಲೋ ಮಾಡುತ್ತಿದ್ದಾರೆ ಅಂದ ಮೇಲೆ ಅವರ ಅಭಿಮಾನಿಗಳು ಮಾಡದೆ ಇರುತ್ತಾರೆಯೇ?
ತಿಳಿ ಬಣ್ಣದ ಚೆಲುವು
ಇದು ನಿನ್ನೆ- ಮೊನ್ನೆಯಿಂದ ಶುರುವಾದ್ದದ್ದಲ್ಲ. 1960ರಿಂದಲೇ ಆ್ಯಸಿಡ್ ವಾಶ್ ಜೀನ್ಸ್ ಪ್ರಿಯರಲ್ಲಿ ಫೇವರಿಟ್ ಆಗಿದೆ. ಅಷ್ಟಕ್ಕೂ, ಈ ವಿಧಾನ ಫ್ಯಾಷನ್ ಆಗಲು ಕಾರಣ, ಸಮುದ್ರದ ನೀರು. ಉಪ್ಪು ನೀರಿನಿಂದಾಗಿ ಸಫìರ್‌ಗಳ ಜೀನ್ಸ್ ಬಣ್ಣ ಕಳೆದುಕೊಳ್ಳುತ್ತಿದ್ದವು. ಬಿಸಿಲಿನಲ್ಲಿ ಒಣಗಲು ಹಾಕಿದಾಗ ಒಂದು ಬದಿಯಷ್ಟೇ ಬಣ್ಣ ತಿಳಿಯಾಗುತ್ತಿತ್ತು. ಇದರಿಂದ ಬಟ್ಟೆಯ ಇನ್ನೊಂದು ಬದಿಯನ್ನೂ ಒಣಗಿಸಬೇಕಾಗುತ್ತಿತ್ತು. ಹಾಗಾಗಿ, ಬ್ಲೇಚ್ ಬೆರೆಸಿದ ನೀರಿನಲ್ಲಿ ಜೀನ್ಸ್ ಅನ್ನು ಒಗೆದು ಬಿಡುತ್ತಿದ್ದರು. ಆಗ ಜೀನ್ಸ್ ಸಂಪೂರ್ಣವಾಗಿ ತಿಳಿ ಬಣ್ಣದ್ದಾಗುತ್ತಿತ್ತು.
1980ರಲ್ಲಿ ಹೆವಿ ಮೆಟಲ್ ಮತ್ತು ರಾಕ್ ಬ್ಯಾಂಡ್‌ಗಳ ಸಂಗೀತಗಾರರು ತಮ್ಮ ಜೀನ್ಸ್ ಮತ್ತು ಜಾಕೆಟ್‌ಗಳ ಮೇಲೆ ಬ್ಲೇಚ್ ಎರಚುತ್ತಿದ್ದರು. ಆಗ ಬಟ್ಟೆಗಳ ಮೇಲೆ ಕ್ಯಾಮಫ್ಲಾಜ… (ಮರೆಮಾಚುವಿಕೆ) ವಿನ್ಯಾಸ ಮೂಡಿಬರುತ್ತಿತ್ತು. ಇದು, ಇವರ ಅಭಿಮಾನಿಗಳಲ್ಲಿ ಹೊಸ ಕ್ರೇಜ… ಹುಟ್ಟು ಹಾಕಿತು. ಜೀನ್ಸ್‌ನ ಬಣ್ಣವನ್ನು ಸಂಪೂರ್ಣವಾಗಿ ತಿಳಿ ಮಾಡಿದರೆ, ಅದು ಬಹುತೇಕ ಬಿಳಿಯಂತೆ ಕಾಣುತ್ತದೆ. ಮಂಜಿನ ಬಣ್ಣವನ್ನು ಹೋಲುವ ಕಾರಣದಿಂದ, ಈ ಬಣ್ಣದ ಜೀನ್ಸ್ ಅನ್ನು ಸ್ನೋ ವಾಶ್ ಎಂದು ಕರೆಯಲಾಗುತ್ತದೆ.
ಅದಿತಿಮಾನಸ ಟಿ. ಎಸ್.