Advertisement

ಲಾಕ್‌ಡೌನ್‌ ತೆರವಿಗೆ ಆತುರತೆ ಅಪಾಯ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

03:06 AM Apr 12, 2020 | Hari Prasad |

ಜಿನೇವಾ: ಕೋವಿಡ್ 19 ವೈರಸ್ ಹೆಚ್ಚು ಪೀಡಿತವಾದ ಸ್ಪೇನ್‌, ಫ್ರಾನ್ಸ್‌, ಜರ್ಮನಿ, ಇಟಲಿಗಳಂತಹ ರಾಷ್ಟ್ರಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆಯಾದರೂ, ಲಾಕ್‌ಡೌನ್‌ ತೆರವು ವಿಚಾರದಲ್ಲಿ ಆತುರ ಬೇಡ. ಇಂತಹ ಆತುರದ ನಿರ್ಧಾರ ಸೋಂಕು ಮತ್ತೆ ತೀವ್ರಗತಿಯಲ್ಲಿ ಹರಡಲು ಕಾರಣವಾಗಬಹುದು. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸದಿದ್ದರೆ ಅದು ತುಂಬಾ ಅಪಾಯಕಾರಿಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಎಚ್ಚರಿಸಿದೆ.

Advertisement

ಚೀನದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುರೋಪ್‌ನ್ನು ಕೋವಿಡ್ ನ ಹೊಸ ಕೇಂದ್ರಸ್ಥಾನ ಎಂದು ಘೋಷಿಸಿದೆ.

ಈ ಬಗ್ಗೆ ಮಾತನಾಡಿದ ಡಬ್ಲ್ಯೂಎಚ್‌ಒ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್‌ ಅಧಾನೋಮ್‌ ಫೆಬ್ರೆಯೆಸಸ್‌, ಕೆಲವು ರಾಷ್ಟ್ರಗಳಲ್ಲಿ ಶೇ.10ರಷ್ಟು ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕಿಗೆ ಒಳಗಾಗಿರುವುದು ವಿಷಾದನೀಯ. ಅಮೆರಿಕ, ಚೀನದಂತಹ ರಾಷ್ಟ್ರಗಳಲ್ಲಿ ಆರೋಗ್ಯ ಕೇಂದ್ರದ ಹೊರಗಡೆ ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗಿರುವುದು ಶೋಚನೀಯ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next