Advertisement

ಬಂಟ್ವಾಳ : ತಾಂತ್ರಿಕ ದೋಷದಿಂದ ಕೆಟ್ಟು ನಿಂತ ಲಿಫ್ಟ್ : ನಾಲ್ವರು ಮಕ್ಕಳು ಅಪಾಯದಿಂದ ಪಾರು :

07:58 PM Dec 25, 2020 | Suhan S |

ಬಂಟ್ವಾಳ: ವಸತಿ ಸಮುಚ್ಚಯ ವೊಂದರಿಂದ ದಿನಪಯೋಗಿ ವಸ್ತು ಗಳನ್ನು ಖರೀದಿ ಮಾಡಲೆಂದು ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ನಾಲ್ವರು ಬಾಲಕಿಯರು ತಾಂತ್ರಿಕ ಅಡಚಣೆಯಿಂದ ಲಿಫ್ಟ್ ನಲ್ಲಿಯೇ ಬಾಕಿಯಾಗಿದ್ದ ಘಟನೆ ಶುಕ್ರವಾರ ಸಂಜೆ ಕಲ್ಲಡ್ಕದಲ್ಲಿ ನಡೆದಿದೆ.

Advertisement

ಕಲ್ಲಡ್ಕದ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ  ಈ ಘಟನೆ ನಡೆದಿದೆ. ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ಬಾಲಕಿಯರ ಜೊತೆಯಲ್ಲಿ ಬಾಲಕಿಯ ಸಂಬಂಧಿ ಬಾಲಕಿಯರು ಬಾಕಿಯಾಗಿದ್ದರು. ನೇರಳಕಟ್ಟೆಯ ನಿವಾಸಿಗಳಾದ ಫಿದಾನೈನ (15), ಮಯಿಷೀನಾ (14) ಹಾಗೂ ಸಿಯಾನಾ(13), ಅಪ್ಸ ( 19)  ಅವರು ಲೆಪ್ಟ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಫಿದಾನೈನ ಅವಳ ಸಂಬಂಧಿಕರಾದ  ಮಕ್ಕಳು ಮನೆಯಿಂದ ಕೆಳಗೆ ಕಲ್ಲಡ್ಕದಲ್ಲಿರುವ ಅಂಗಡಿಗೆ ಸಾಮಗ್ರಿಗಳ ತರಲೆಂದು ವಸತಿ ಸಂಕೀರ್ಣದ ಲಿಫ್ಟ್ ಮೂಲಕ ಕಳೆಗೆ ಬರುತ್ತಿದ್ದಂತೆ ಅರ್ಧದಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್ ಕೆಟ್ಟು ಹೋಗಿದೆ.

ಇದನ್ನೂ ಓದಿ : ಜನವರಿಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮನ; ಅಷ್ಟರಲ್ಲಿ ಸಾಕಷ್ಟು ಬದಲಾವಣೆ ಖಂಡಿತಾ: ಯತ್ನಾಳ್

ಬಾಲಕಿಯರು ಅ ಕೂಡಲೇ ಮನೆಯವರಿಗೆ ವಿಷಯ ತಿಳಿಸಿದ್ದು ಮನೆಮಂದಿ ಜೊತೆಗೆ ಸ್ಥಳೀಯರು ಲಿಫ್ಟ್  ಅರ್ಧ ಓಪನ್ ಮಾಡಿ ಅವರಿಗೆ ಗಾಳಿ ಬೀಸುವ ಉದ್ದೇಶದಿಂದ ಟೇಬಲ್ ಪ್ಯಾನ್ ಒಂದನ್ನು ಇಡುವ ವ್ಯವಸ್ಥೆ ಮಾಡಿದ್ದರು.

Advertisement

ಬಳಿಕ ಅಗ್ನಿಶಾಮಕ ದಳದವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕಟ್ಟಡದ ಲಿಫ್ಟ್ ನ ಕೆಲಸ ಮಾಡಿದ ಸಂಬಂಧಿಸಿದ ಕಂಪೆನಿ ಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ಲಿಫ್ಟ್ ನ ತಾಂತ್ರಿಕ ದೋಷವನ್ನು ಸರಿಪಡಿಸಿ ಸುಮಾರು 7.15 ಗಂಟೆಗೆ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಹೊರಗೆ ಬರುವಂತೆ ಮಾಡಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಎಸ್.ಐ. ಅವಿನಾಶ್ ಬೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next