Advertisement

‘ಜೀವನ-ದೇವರ ಸಂಬಂಧ ಭಕ್ತಿಭಾವದಲ್ಲಿ ಅಡಗಿದೆ’

01:50 AM May 20, 2019 | Sriram |

ಕುಂಬಳೆ: ಜೀವನ ಮತ್ತು ದೇವರ ಸಂಬಂಧ ಭಕ್ತಿಭಾವದಲ್ಲಿ ಅಡಗಿದೆ, ಭಾವ ಶುದ್ಧಿಯ ಮೂಲಕ ಆತ್ಮ ಸಾಕ್ಷಾತ್ಕಾರ ಸಾಧ್ಯವಿದ್ದು, ಭಜನೆಯ ಮೂಲಕವೇ ಭಾವ ಶುದ್ಧಿಯ ಕಾರ್ಯ ನಡೆಯಬೇಕಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

Advertisement

ಸಜಂಕಿಲ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಉದ್ಘಾಟನಾ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವದ ಅಂಗವಾಗಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ತೆಂಗಿನ ಹಿಂಗಾರವನ್ನು ಅರಳಿಸಿ ಧಾರ್ಮಿಕ ಸಭೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸಮಾಜದ ಪರಿವರ್ತನೆಗೆ ಕಾರಣೀಭೂತರಾಗುವವರು ಒಂದು ಯುವ ಸಮುದಾಯ ಮತ್ತು ಮಹಿಳಾ ಸಮುದಾಯ, ಮಹಿಳೆಯರು ಮನೆ-ಮನವನ್ನು ಬೆಳಗಿದರೆ, ಯುವ ಸಮುದಾಯವು ತನ್ನ ಅಂತಶಕ್ತಿಯ ಮೂಲಕ ಸಮಾಜವನ್ನು ಬೆಳಗುವಲ್ಲಿ ಪ್ರೇರಕ ಶಕ್ತಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ನವೀಕರಣ ಸಮಿತಿ ಅಧ್ಯಕ್ಷ ರಮೇಶ ಎಂ. ಬಾಯಾರು ವಹಿಸಿ ಮಾತನಾಡಿ ಭಜನಾ ಮಂದಿರಗಳು ಭಕ್ತಿಯ ಪ್ರತೀಕವಾಗಿದ್ದು, ಭಕ್ತಿ ಮಾರ್ಗವು ಸಮಾಜವನ್ನು ಧರ್ಮ ಮಾರ್ಗದಲ್ಲಿ ಮುನ್ನಡೆಯುವಂತೆ ಮಾಡುವಲ್ಲಿ ಸಫಲವಾಗಿದೆ ಎಂದರು.

ಪ್ರಮುಖರಾದ ಗಣೇಶ್‌ ಎನ್‌. ಭಟ್, ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್, ಗಣಪತಿ ಭಟ್ ಆವಳಮಠ,ಯಂ.ವಿಶ್ವನಾಥ ಭಟ್ ಮೇಲಿನ ಪಂಜ ಶುಭಾಶಂಸನೆಗೈದರು. ಸಮಾರಂಭದಲ್ಲಿ ಮಂದಿರ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಕುಶಲಕರ್ಮಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಹಲವು ವರ್ಷಗಳಿಂದ ಭಜನಾ ಮಂಡಳಿಯ ಅಧ್ಯಕ್ಷರಾಗಿರುವ ಕೆ.ವಾಸುದೇವ ಭಟ್ರವರನ್ನು ಸನ್ಮಾನಿಸಲಾಯಿತು.

Advertisement

ಎಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲೂ ಎ ಪ್ಲಸ್‌ ಸಾಧನೆಗೈದ ಜಯಶ್ರೀ ಡಿ. ಅವರನ್ನು ಸ್ವಾಮೀಜಿಯವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಹರಸಿದರು. ಸದಾನಂದ.ಎಂ ಸ್ವಾಗತಿಸಿದರು.ಶ್ರೀಕಾಂತ್‌ ಮಾಸ್ತರ್‌ ವಾಟೆತ್ತಿಲ ವಂದಿಸಿದರು. ಶ್ರೀರಾಮ ಮಾಸ್ತರ್‌ ಆವಳ ಕೆದುಕೋಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next