Advertisement

ಟೈಲರ್‌ಗಳಿಗೆ ಜೀವನ ಭದ್ರತೆ- ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಆಗ್ರಹ

11:05 PM Dec 05, 2023 | Team Udayavani |

ಬೆಳಗಾವಿ: ಅಸಂಘಟಿತ ವಲಯದಲ್ಲಿ ಕರ್ನಾಟಕ ರಾಜ್ಯದಾದ್ಯಂತ ಸುಮಾರು 10 ಲಕ್ಷ ಮಂದಿ, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6,000 ಮಂದಿ ಟೈಲರ್‌ ವೃತ್ತಿ ನಿರತರಾಗಿದ್ದು, ಅವರಿಗೆ ಜೀವನ ಭದ್ರತೆ ತೀರಾ ಆವಶ್ಯಕವಾಗಿದೆ. ಅವರಿಗೆ ಸಾಮಾಜಿಕ ಭದ್ರತೆಯಿಲ್ಲ, ಅವರಿಗಾಗಿ ಟೈಲರ್‌ ಕ್ಷೇಮನಿಧಿ ಮಂಡಳಿಯನ್ನು ರಚಿಸಿ, ಆ ಮೂಲಕ ಭವಿಷ್ಯ ನಿಧಿ ಹಾಗೂ ಮಾಸಿಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಮತ್ತು ಕುಟುಂಬ ಆರೋಗ್ಯ ವಿಮಾ ಯೋಜನೆಯನ್ನು ಒದಗಿಸುವಂತೆ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರು ವಿಧಾನಸಭಾ ಅಧಿವೇಶನದಲ್ಲಿ ಮಂಗಳವಾರ ಸದನದ ಗಮನ ಸೆಳೆದರು.

Advertisement

ಇದಕ್ಕೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಉತ್ತರಿಸಿ, ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಅವರಿಗೆ ಈಗಾಗಲೇ ಸಮರ್ಪಕ ಲಿಖೀತ ಉತ್ತರವನ್ನು ನೀಡಲಾಗಿದೆ. ರಾಜ್ಯದಲ್ಲಿರುವ 43 ಅಸಂಘಟಿತ ವಲಯ ಕಾರ್ಮಿಕ ವಲಯದೊಳಗೆ ಟೈಲರ್‌ಗಳನ್ನೂ ಸೇರ್ಪಡೆಗೊಳಿಸಲಾಗಿದೆ. ಶಾಸಕರ ಪ್ರಶ್ನೆಯಂತೆ ಅವರಿಗೆ ನೇರವಾಗಿ ಭವಿಷ್ಯ ನಿಧಿ ಪಿಂಚಣಿ ನೀಡಲು ಬರುವುದಿಲ್ಲ. ಮುಂಬರುವ ದಿನಗಳಲ್ಲಿ ಸರಕಾರ ಕೈಗೊಳ್ಳುವ ಸಾಮಾಜಿಕ ಭದ್ರತಾ ಯೋಜನೆಯಡಿ ಟೈಲರ್‌ಗಳಿಗೆ ಕ್ಷೇಮ ನಿಧಿ ನೀಡಲು ಕ್ರಮ ವಹಿಸಲಾಗುವುದು. ಪತ್ರಿಕಾ ವಿತರಕರಿಗೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next