Advertisement
ಮಂಗಳೂರಿನ ಕೆಎಂಸಿ, ಎ.ಜೆ. ಆಸ್ಪತ್ರೆ, ಇಂಡಿಯಾನಾ, ಫಾದರ್ ಮುಲ್ಲರ್, ಕೆ.ಎಸ್. ಹೆಗ್ಡೆ, ಆಳ್ವಾಸ್, ವೆನಾÉಕ್ ಸೇರಿದಂತೆ ಸದ್ಯ 12 ಆಸ್ಪತ್ರೆ ಯವರು ಈ ವ್ಯವಸ್ಥೆಗೆ ಸಹಭಾಗಿತ್ವ ನೀಡಿದ್ದಾರೆ. ಸಾರ್ವಜನಿಕರು “ಸೇವಿಯರ್’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಆ ಆ್ಯಪ್ ಮೂಲಕ “ಮನವಿ’ ಬಟನ್ ಒತ್ತಿದರೆ ತಾವಿರುವ ಸ್ಥಳಕ್ಕೆ ಕೆಲವೇ ನಿಮಿಷಗಳಲ್ಲಿ ಆ್ಯಂಬುಲೆನ್ಸ್ ಧಾವಿಸಿ ಬರಲಿದೆ. ಪ್ರಾಥಮಿಕ ಚಿಕಿತ್ಸೆ ನೀಡುವ ಸ್ವಯಂ ಸೇವಕರ ತಂಡವನ್ನೂ ರಚಿಸಲಾಗಿದ್ದು ಅವರ ಸೇವೆಯೂ ಲಭಿಸಲಿದೆ. ಇದಕ್ಕೆ ಪೂರಕವಾಗಿ ಪೊಲೀಸರು, ಗೃಹರಕ್ಷಕ ದಳದ ಸದಸ್ಯರಿಗೂ ತರಬೇತಿ ನೀಡಲಾಗಿದೆ.
ಕೆಎಂಸಿಯ ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್ ಮಾತನಾಡಿ, ಹಳ್ಳಿಗಳ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರ ಲಭ್ಯವಿಲ್ಲದೆ ಲಕ್ಷಾಂತರ ಮಂದಿ ಹೃದ್ರೋಗಿಗಳ ಸಾವು ಸಂಭವಿಸುತ್ತಿದೆ. ಈ ನಿಟ್ಟಿನಲ್ಲಿ ಹೃದ್ರೋಗ ವೈದ್ಯರು ಮತ್ತು ದಾನಿಗಳ ಸಹಕಾರದೊಂದಿಗೆ ದ.ಕ. ಮತ್ತು ಉಡುಪಿ ಜಿಲ್ಲೆಯ ಹಳ್ಳಿಗಳ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಇಸಿಜಿ ಯಂತ್ರವನ್ನು ನೀಡಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸೇವಿಯರ್ ಆ್ಯಪ್ ವ್ಯವಸ್ಥೆಯೂ ಇಸಿಜಿ ಸೇವೆಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
Related Articles
Advertisement
“ಸೇವಿಯರ್’ ಬಳಕೆ ಹೇಗೆ?ಡಾ| ಮನೀಶ್ ರೈ ಮಾತನಾಡಿ, ಆ್ಯಂಬುಲೆನ್ಸ್ ಹಾಗೂ ಆಸ್ಪತ್ರೆಗಳ ಜತೆಗೆ ಲಿಂಕ್ ಆಗಿರುವ ವ್ಯವಸ್ಥೆಯ ಆ್ಯಪ್ ಇದು. ಮೊಬೈಲ್‌ನಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿದ್ದರೆ, ತುರ್ತು ಸಂದರ್ಭ ದಲ್ಲಿ ಇದರಲ್ಲಿರುವ “ಆ್ಯಂಬುಲೆನ್ಸ್ ರಿಕ್ವೆಸ್ಟ್’ ಬಟನ್ ಒತ್ತಿದರಾಯಿತು. ತತ್‌ಕ್ಷಣ ಹತ್ತಿರ ದಲ್ಲಿರುವ ಎಲ್ಲ ಆ್ಯಂಬುಲೆನ್ಸ್‌ಗಳ ಮೊಬೈಲ್ ಗಳು ಬೀಪ್ ಆಗುತ್ತವೆ. ಮನವಿ ಬಂದ ಸ್ಥಳದ ಜಿಪಿಎಸ್ ವಿವರವೂ ಸಿಗುತ್ತದೆ. ಅವರು ರಿಕ್ವೆಸ್ಟನ್ನು ಓಕೆ ಮಾಡಿದ ಕೂಡಲೇ ಆ್ಯಂಬುಲೆನ್ಸ್ ಚಾಲಕರ ಮೊಬೈಲ್ ಸಂಖ್ಯೆ ರಿಕ್ವೆಸ್ಟ್ ಕಳು ಹಿಸಿ ದವರಿಗೆ ಸಿಗುತ್ತದೆ. ಎಷ್ಟು ಹೊತ್ತಿನಲ್ಲಿ ಆ್ಯಂಬು ಲೆನ್ಸ್ ಸ್ಥಳಕ್ಕೆ ತಲುಪುತ್ತದೆ ಎಂಬುದು ರಿಯಲ್ ಟೈಮ್‌ನಲ್ಲಿ ಗೊತ್ತಾಗಲಿದೆ. ಪ್ರಸ್ತುತ ಖಾಸಗಿ, ಸರಕಾರಿ ಸೇರಿ 12 ಆಸ್ಪತ್ರೆಗಳು ಮಾತ್ರ ಈ ವ್ಯವಸ್ಥೆ ಯಲ್ಲಿ ಕೈಜೋಡಿಸಿದ್ದು, ಆ ಆಸ್ಪತ್ರೆಗಳ ವ್ಯಾಪ್ತಿ ಯಲ್ಲಿ ಮಾತ್ರ ಆ್ಯಂಬುಲೆನ್ಸ್ ಸೇವೆ ದೊರೆಯ ಲಿದೆ. ಮುಂದೆ ಇನ್ನಷ್ಟು ಆಸ್ಪತ್ರೆಗಳನ್ನು ಇದರಲ್ಲಿ ಜೋಡಿಸಲಾಗುತ್ತದೆ. ರೋಗಿಗೆ ಆ್ಯಂಬು ಲೆನ್ಸ್ ಸೇವೆ ಉಚಿತವಾಗಿರುತ್ತದೆ ಎಂದರು.