ಔಷಧಗಳು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆ ದೊರೆಯಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ವಿದೇಶಗಳಿಗೆ ತುಲನೆ ಮಾಡಿದರೆ, ನಮ್ಮಲ್ಲೇ ಕಡಿಮೆ ದರಕ್ಕೆ ಜೀವರಕ್ಷಕ ಔಷಧಗಳು ಸಿಗುತ್ತಿವೆ ಎಂದು ಸಮೀಕ್ಷೆಯೊಂದು ಹೇಳಿದೆ. ಆ ವರದಿಯಲ್ಲೇನಿದೆ? ವಿವರಗಳು ಇಲ್ಲಿವೆ.
Advertisement
ಸಮೀಕ್ಷೆ ಯಾರಿಂದ? ಲಂಡನ್ ಮೂಲದ ಮೆಡ್‌ಬೆಲ್ಲೆಯ ಡಿಜಿಟಲ್ ಹೆಲ್ತ್‌ಕೇರ್ ಪ್ಲಾಟ್‌ಫಾರ್ಮ್ ಈ ಒಂದು ಸಮೀಕ್ಷೆಯನ್ನು ನಡೆಸಿದ್ದು, 13 ಸಾಮಾನ್ಯ ಜೀವ ರಕ್ಷಕ ಔಷಧಗಳ ಬೆಲೆ ವ್ಯತ್ಯಾಸವನ್ನು ವಿಶ್ಲೇಷಿಸಿದೆ.
ವಿಶ್ವಾದ್ಯಂತ 50 ದೇಶಗಳಲ್ಲಿ ಈ ಒಂದು ಸಮೀಕ್ಷೆ ನಡೆದಿದ್ದು, ಆ 13 ಔಷಧಗಳ ಬೆಲೆ ವ್ಯತ್ಯಾಸವನ್ನು ಯುರೋ ದರದಲ್ಲಿ ಅಳೆಯಲಾಗಿದೆ. ಅಮೆರಿಕದಲ್ಲಿ ಅತಿ ದುಬಾರಿ
ವರದಿಯ ಪ್ರಕಾರ ಜೀವ ರಕ್ಷಕ ಔಷಧಗಳು ಅಮೆರಿಕ ದೇಶದಲ್ಲಿ ಅತಿ ದುಬಾರಿಯಾಗಿದ್ದು, ಇತರ ದೇಶಗಳಲ್ಲಿರುವ ದರಕ್ಕಿಂತ ದುಪ್ಪಟ್ಟು ಹೆಚ್ಚು ದರ ಹೊಂದಿದೆ. ಅನಂತರದ ಸ್ಥಾನವನ್ನು ಜಪಾನ್ ಪಡೆದುಕೊಂಡಿದೆ.
Related Articles
ಕನಿಷ್ಠ ಮೊತ್ತದಲ್ಲಿ ಜೀವ ರಕ್ಷಕ ಔಷಧಗಳು ದೊರೆಯುವ 10 ದೇಶಗಳ ಪಟ್ಟಿಯಲ್ಲಿ ಭಾರತ ಗುರುತಿಸಿಕೊಂಡಿದ್ದು, 7 ನೇ ಸ್ಥಾನದಲ್ಲಿದೆ.
Advertisement
ಅತಿ ದುಬಾರಿಹೃದಯದ ಕಾಯಿಲೆ, ಅಸ್ತಮಾ, ಕ್ಯಾನ್ಸರ್, ಸಕ್ಕರೆ ಕಾಯಿಲೆ ಸೇರಿದಂತೆ ರೋಗ ನಿರೋಧಕಗಳ ಬೆಲೆ ಅಮೆರಿಕ ದೇಶದಲ್ಲಿ ಇತರ ದೇಶಗಳ ಕನಿಷ್ಠ ಮೊತ್ತಕ್ಕಿಂತ ಒಂದು ಪಟ್ಟು ಹೆಚ್ಚಿದೆ. ವಿದೇಶಗಳಲ್ಲಿ ದುಬಾರಿ ಯಾಕೆ ?
ದೇಶದಲ್ಲಿ ಜೀವ ರಕ್ಷಕ ಔಷಧಗಳ ಮೇಲಿನ ಪೇಟೆಂಟ್ ಅಧಿಕಾರವನ್ನು 20 ವರ್ಷಗಳಿಗೆ ನಿಗದಿ ಪಡಿಸಿದ್ದು, ವಿದೇಶಗಳು ಇದರಿಂದ ಹೊರತಾಗಿದೆ. ಅಲ್ಲಿನ ಔಷಧ ಕಂಪೆನಿಗಳು ಆಗಾಗ್ಗೆ ಬೆಲೆ ವಿಸ್ತರಣೆ ನೀತಿಯನ್ನು ಅನುಸರಿಸುತ್ತಿದ್ದು, ಕನಿಷ್ಠ ಮೊತ್ತಕ್ಕಿಂತ ಹೆಚ್ಚಾಗಿ ಬೆಲೆಯನ್ನು ನಿಗದಿ ಮಾಡಿ ಜನರ ಮೇಲೆ ಹೇರುತ್ತವೆ. ಯಾಕೆ ಕಡಿಮೆ ?
ಇತರ ರಾಷ್ಟ್ರಗಳಿಗೆ ಹೋಲಿಸಿದ್ದರೆ ದೇಶ ಪ್ರತ್ಯೇಕ ಏಕಸ್ವಾಮ್ಯತೆ ಮಾನದಂಡ ಮತ್ತು ನಿಯಮಗಳನ್ನು ಅಳವಡಿಸಿಕೊಂಡಿದ್ದು, ಪ್ರತಿಸ್ಪರ್ಧಿಗಳಿಂದ ಮುಕ್ತವಾಗಿದೆ. ಜತೆಗೆ ದೇಶದಲ್ಲಿ ಈ ಕ್ಷೇತ್ರದ ಕಾನೂನಿನ ಯೋಜನೆಗಳು ನ್ಯಾಯ ಸಮ್ಮತವಾಗಿದೆ. ಸರಕಾರವೂ ಬೆಲೆ ನಿಯಂತ್ರಣ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಜನರಿಕ್ ಔಷಧ: ಭಾರತ ಮುಂಚೂಣಿಯಲ್ಲಿ
50,000 ಕೋಟಿ ರೂ. ಮೌಲ್ಯದ ಜನರಿಕ್ ಔಷಧಗಳನ್ನು ರಫ್ತು ಮಾಡುವಲ್ಲಿ ದೇಶ ಮುಂಚೂಣಿಯಲ್ಲಿದೆ. ಜತೆಗೆ ವಿಶ್ವದಲ್ಲಿ ದೇಶೀಯ ಔಷಧ ಉದ್ಯಮ ಕೇತ್ರ ಮುಂದಿದೆ.