Advertisement

ಬದುಕಿಗೆ ಮೌಲ್ಯಯುತ ಶಿಕ್ಷಣ ಅವಶ್ಯ

03:14 PM Sep 27, 2020 | Suhan S |

ಮಂಡ್ಯ: ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಶಿಕ್ಷಣ ಬದುಕು ಕಟ್ಟಿಕೊಳ್ಳುವುದನ್ನು ಕಲಿಸುತ್ತದೆ ಎಂದು ಮಾಜಿ ಸಚಿವ ಮತ್ತು ಮಂಡ್ಯ ಜಿಲ್ಲಾ ಬಿಜೆಪಿ ಸಂಘಟನೆಯ ಉಸ್ತುವಾರಿ ಎ.ಮಂಜು ಹೇಳಿದರು.

Advertisement

ತಾಲೂಕಿನ ಸಾತನೂರು ಗ್ರಾಮದ ಅಚೀವರ್ ಇಂಟರ್‌ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನಲ್ಲಿ ರಾಜ್ಯ ಶೈಕ್ಷಣಿಕ ದಿಕ್ಸೂಚಿಮತ್ತು ಸುಧಾರಣಾ ಸಮಿತಿ, ಅನನ್ಯ ಹಾರ್ಟ್‌ ಸಂಸ್ಥೆಯು ಶನಿವಾರ ಆಯೋಜಿಸಿದ್ದ ಭಾರತೀಯ ಶಿಕ್ಷಣ-ಅನುಷ್ಠಾನದಲ್ಲಿ ಮೋದಿ ಸರ್ಕಾರದ ಹೆಜ್ಜೆಗಳು ಮತ್ತು ಸವಾಲುಗಳು ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ನೀತಿ ಜಾರಿ: ಭಾರತದ ಶಿಕ್ಷಣ ಪದ್ಧತಿ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ವಿಶ್ವವೇ ಅನುಸರಿಸುತ್ತಿದೆ. ಹೀಗಾಗಿ ಶಿಕ್ಷಣದ ವಿಚಾರದಲ್ಲಿ ಭಾರತ ನಿಜಕ್ಕೂ ವಿಶ್ವಗುರುವಾಗಿದೆ. ಸ್ವಾತಂತ್ರ್ಯ ನಂತರ ಶಿಕ್ಷಣ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ. ಅದರಲ್ಲೂ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಹಿಂದೆ ಕೆಲವರಿಗೆ ಮಾತ್ರವೇ ಉನ್ನತ ಶಿಕ್ಷಣ ಸಿಗುತ್ತಿತ್ತು. ಒಂದು ವರ್ಗಕ್ಕೆ ಮಾತ್ರ ಶಿಕ್ಷಣ ಸಿಗುತ್ತಿತ್ತು. ಆದರೀಗ ಹಲವು ಸರ್ಕಾರ ಗಳ ಚಿಂತನೆಗಳ ಫ‌ಲವಾಗಿ ಶಿಕ್ಷಣ ನೀತಿಗಳು ಬದಲಾಗಿವೆ. ಇದರಿಂದ ಎಲ್ಲ ವರ್ಗದವರಿಗೆ ಶಿಕ್ಷಣ ಸಿಗುತ್ತಿದೆ. ಆದರೆ, ಭಾರತದಲ್ಲಿ ಓದಿದವರು ಭಾರತಕ್ಕಿಂತ ಬೇರೆ ದೇಶಗಳಿಗೆ ಸೇವೆ ನೀಡಿದ್ದೇ ಹೆಚ್ಚು. ದೇಶದ ವಿಜ್ಞಾನಿಗಳು, ಎಂಜಿನಿಯರ್‌ ಗಳಿಂದ ವಿಶ್ವದ ವಿವಿಧ ರಾಷ್ಟ್ರಗಳು ಅಭಿವೃದ್ಧಿ ಸಾಧಿಸಿವೆ. ಇದು ಹೆಮ್ಮೆಯ ಸಂಗತಿ ಎಂದರು.

ಶೈಕ್ಷಣಿಕ ಸುಧಾರಣೆಗೆ ನಾಂದಿ: ಇದೀಗ ಪ್ರಧಾನಿ ಮೋದಿ ಅವರು ಮತ್ತೆ ಶೈಕ್ಷಣಿಕ ‌ ಸುಧಾರಣೆಗೆ ನಾಂದಿ ಹಾಡಿದ್ದರೆ. ಯುವ ಜನರನ್ನು ಭಾರತದ ‌ ಸತ್ಪ್ರಜೆಯಾಗಿ ರೂಪಿಸುವ ಶಕ್ತಿ ಶಿಕ್ಷಣಕ್ಕಿದೆ. ಹೊಸ ‌ ಶಿಕ್ಷಣ ನೀತಿಯಿಂದ ‌ ಇದು ಇನ್ನಷ್ಟು ಹೆಚ್ಚಾಗಿದೆ. ಅಂಬೇಡ್ಕರ್‌ ಅವರು ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಆದರೆ, ಅವರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲ ವರ್ಗದ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆಯಲು ಅಂಬೇಡ್ಕರ್‌ ಕಾರ‌ಣ ಎಂದು ತಿಳಿಸಿದರು.

ಶಿಕ್ಷಣ, ಸಂಸ್ಕೃತಿ ಭಾರತದ ಶಕ್ತಿ: ವಿಚಾರ ಮಂಡಿಸಿದ ಪ್ರಾಧ್ಯಾಪಕ ಹಾಗೂ ಚಿಂತಕ ಡಾ.ಲಕ್ಷ್ಮೀಶ್‌, ಹಿಂದಿನ ಹಾಗೂ ಇಂದಿನ ಮತ್ತು ಮುಂದಿನ ಶೈಕ್ಷಣಿಕ ವ್ಯವಸ್ಥೆಯನ್ನು ಸ್ಥೂಲವಾಗಿ ಪರಿಚಯಿಸಿದರು. ಜ್ಞಾನವೆಂದರೆ ಹಂಚಿಕೊಳ್ಳುವುದು. ಅಂಧಕಾರವನ್ನು ನಿವಾರಿಸುವವನೇ ಗುರು. ಅಂತಹ ಶಕ್ತಿ ಶಾಲಿ ಶಿಕ್ಷಕರನ್ನು ಹೊಂದಿರುವ ಭಾರತವನ್ನು ಒಡೆಯಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಮೆಕಾಲೆ ಅವರು ಬ್ರಿಟಿಷ್‌ ಸರ್ಕಾರಕ್ಕೆ ತಿಳಿಸಿದ್ದಾರೆ. ಭಾರತದ ಶಿಕ್ಷಣ ವ್ಯವಸ್ಥೆ, ಇಲ್ಲಿನ ಸಂಸ್ಕೃತಿ, ಆಚಾರ -ವಿಚಾರಗಳಿಂದಲೇ ಭಾರತ ಶಕ್ತಿಯಾಗಿದೆ ಎಂಬ ಸಂಗತಿಯನ್ನು ಅವರು ಪ್ರತಿಪಾದಿಸಿದ್ದರು ಎಂದು ಸ್ಮರಿಸಿದರು.

Advertisement

ಸೃಜನಶೀಲತೆ ಬಹಳ ಮುಖ್ಯ: ಮನುಷ್ಯನಿಗೆ ಸೃಜನಶೀಲತೆ ಬಹಳ ಮುಖ್ಯ. ಇಂಥ ‌ ಸೃಜನಶೀಲತೆ, ಸಂಸ್ಕೃತಿ, ಸಂಸ್ಕಾರವನ್ನು ಶತಶತಮಾನಗಳಿಂದ ಕಲಿಸುತ್ತಾ ಬಂದಿದೆ. ಆದರೀಗ ಮಕ್ಕಳು ‌ಮಣ್ಣಿನೊಂದಿಗೆ ಆಡುತ್ತಿದ್ದ ಆಟಪಾಠಗ ‌ಳನ್ನು ಬಿಟ್ಟು ಮೊಬೈಲ್‌, ಕಂಪ್ಯೂಟರ್‌ ಗೇಮ್‌ ಗಳಿಗೆ ಮೊರೆ ಹೋಗಿದ್ದಾರೆ. ಇಂಥ  ಪ‌ರಿಸ್ಥಿತಿಯಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಅರಳಿಸುವ ಕೆಲಸವನ್ನು ಹೊಸ ‌ ಶಿಕ್ಷಣ ನೀತಿ ಮಾಡಲಿದೆ. ಹಿಂದಿನ ಗುರುಕುಲ ಪದ್ಧತಿಯ ಶಿಕ್ಷಣ ಮೌಲ್ಯಗಳನ್ನು ಎತ್ತಿಹಿಡಿಯುವುದು ಹೊಸ ‌ ಶಿಕ್ಷಣ ನೀತಿಯಆಶಯವಾಗಿದೆ ಎಂದು ತಿಳಿಸಿದರು.

ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರ‌ಣಾ ಸಮಿತಿ ರಾಜ್ಯಾಧ್ಯಕ್ಷ ಡಾ. ಸುಧಾಕರ ಹೊಸಳ್ಳಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತ ಡಾ.ಸಿದ್ದರಾಮಯ್ಯ, ಅನನ್ಯ ಹಾರ್ಟ್‌ ಸಂಸ್ಥೆಯ ಅದ್ಯಕ್ಷೆ ಬಿ.ಎಸ್‌.ಅನುಪಮ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next