Advertisement

ನಮ್ಮವರಿಗೆ ಇದ್ದಿಲು ಹೊರಗಿನವರಿಗೆ ವಜ್ರ

06:26 PM Sep 15, 2020 | Suhan S |

ಮದ್ರಾಸ್‌ ಪ್ರಾಂತ್ಯಕ್ಕೆಲ್ಲ ಪ್ರಸಿದ್ಧವಾಗಿದ್ದ ಪ್ರಸಿಡೆನ್ಸಿ ಕಾಲೇಜಿನ ಇಂಟರ್‌ ಮೀಡಿಯೆಟ್‌ ತರಗತಿಗಳಲ್ಲಿ ಶೈಕ್ಷಣಿಕ ವರ್ಷದ ಮೊದಲ ದಿನ. ವಿಜ್ಞಾನ ಪ್ರೊಫೆಸರರು ತರಗತಿ ಪ್ರವೇಶಿಸಿ, ಪ್ಲಾಟ್‌ಫಾರಮ್ಮಿನಲ್ಲಿ ನಿಂತು ಎಲ್ಲರನ್ನೂ ಒಮ್ಮೆ ಅವಲೋಕಿಸುತ್ತ ಬರುವಾಗಕಣ್ಣಿಗೆ ಬಿದ್ದದ್ದು, ಆ ಪುಟ್ಟ ಹುಡುಗ.17 – 18 ರ ಹರೆಯದ, ಮೀಸೆ ಮೂಡುತ್ತಿದ್ದ ಯುವಕರ ಮಧ್ಯದಲ್ಲಿ,14ಕ್ಕೂಕಾಲಿಡದ ಈ ಪುಟ್ಟ ಬಾಲಕ, ಮೊದಲ ಬೆಂಚಲ್ಲಿಕೂತು ಏನು ಮಾಡುತ್ತಿದ್ದಾನೆ? ಯಾರಯ್ಯ ನೀನು? ಕಾಲೇಜಿನ ತರಗತಿಯಲ್ಲಿ ನಿನಗೇನುಕೆಲಸ? ಎಂದು ಸ್ವಲ್ಪಕುತೂಹಲ, ಸ್ವಲ್ಪ ಅಸಹನೆಯಿಂದಕೇಳಿದರು.

Advertisement

ಹುಡುಗ ಎದ್ದುನಿಂತ. ಸ್ವಲ್ಪವೂ ಅಳುಕದೆ ಹೇಳಿದ: ನಾನು ಈ ಕ್ಲಾಸಿನ ವಿದ್ಯಾರ್ಥಿ ಸ್ವಾಮಿ. ಪಾಠಕೇಳಲು ಬಂದಿದ್ದೇನೆ! ಹಾಗೆ ಹೇಳಿದ್ದು ಚಂದ್ರಶೇಖರ ವೆಂಕಟರಾಮನ್‌. ಸಂಕ್ಷಿಪ್ತವಾಗಿ ಸಿ.ವಿ. ರಾಮನ್‌.ಆತನಿಗಿನ್ನೂ13 ತುಂಬಿರಲಿಲ್ಲವೆಂಬುದು ಸತ್ಯವೇ ಆದರೂ, ಆತಕಾಲೇಜು ಸೇರಲು ಬೇಕಾದ ಎಲ್ಲ ಅರ್ಹತೆಗಳನ್ನು ಸಂಪಾದಿಸಿಕೊಂಡೇ ಬಂದಿದ್ದ.

ಹತ್ತನೇ ತರಗತಿಯನ್ನು ಹನ್ನೆರಡನೇ ವಯಸ್ಸಿಗೇ ಪೂರೈಸಿಯೇ ಕಾಲೇಜು ಮೆಟ್ಟಿಲು ಹತ್ತಿದ್ದ. ಅಷ್ಟೇಕೆ, ಭೌತಶಾಸ್ತ್ರದ ಉದ್ಗಂಥಗಳನ್ನೆಲ್ಲ ಓದಿಕೊಂಡಿದ್ದ. ಕೆಲವು ವಿಷಯಗಳಲ್ಲಿಕಾಲೇಜಿನ ಪ್ರಾಧ್ಯಾಪಕರಿಗಿದ್ದಷ್ಟೇ ಜ್ಞಾನವನ್ನೂ ಸಂಪಾದಿಸಿದ್ದ. ರಾಮನ್‌ ತನ್ನ ವಯಸ್ಸಿಗೆ ಮೀರಿದ ಜ್ಞಾನವನ್ನು ಸಂಪಾದಿಸಿದ್ದರಷ್ಟೇ ಅಲ್ಲ, ಹಾಗೆ ಹೆಚ್ಚುವರಿ ಜ್ಞಾನ ಸಂಪಾದಿಸಿದ್ದೇನೆಂಬ ಅರಿವೂ ಅವರಿಗಿತ್ತು. ಭೌತಶಾಸ್ತ್ರದ ವಿಷಯದಲ್ಲಿ ತಮ್ಮ ತಿಳಿವಳಿಕೆಯ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ.

1906ರಲ್ಲಿ ಲಂಡನ್ನಿಂದಪ್ರಕಟವಾಗುತ್ತಿದ್ದ, ಆಗಿನ ಕಾಲದ ಪ್ರಸಿದ್ಧ ವಿಜ್ಞಾನ ಪತ್ರಿಕೆ ಫಿಲಸಾಫಿಕಲ್‌ಜರ್ನಲ್ ನಲ್ಲಿ ಒಂದುಪ್ರಬುದ್ಧ ಲೇಖನ ಪ್ರಕಟವಾಯಿತು. ಲೇಖಕರ ಹೆಸರು ಚಂದ್ರಶೇಖರ ವೆಂಕಟರಾಮನ್‌, ಬಿ.ಎ ವಿದ್ಯಾರ್ಥಿ, ಪ್ರಸಿಡೆನ್ಸಿ ಕಾಲೇಜು ಎಂದು ಇತ್ತು. ಸಹಜವಾಗಿಯೇ ಆ ಕಾಲೇಜಿನ ಪ್ರಾಧ್ಯಾಪಕರ ಗಮನವನ್ನು ಅದು ಸೆಳೆಯಿತು. ಸೀನಿಯರ್‌ ಪ್ರೊಫೆಸರ್‌ ಒಬ್ಬರು ರಾಮನ್ನರನ್ನುಕರೆದುಕೇಳಿದರು: “ಏನಯ್ಯ, ಈ ಲೇಖನವನ್ನು ನೀನು ನನಗೆ ತೋರಿಸಿಯೇ ಇಲ್ಲವಲ್ಲ?’ ಸ್ವಲ್ಪವೂ ಅಳುಕದೆ ರಾಮನ್‌- ಆರು ತಿಂಗಳ ಹಿಂದೆಯೇ ಅದನ್ನು ತಮ್ಮಕೈಗಿಟ್ಟಿದದೆ. ನಿಮ್ಮ ಪ್ರತಿಕ್ರಿಯೆಯನ್ನೂ ಕೇಳಿದ್ದೆ. ಆದರೆ ನೀವದನ್ನು ಓದಿದ ಬಗ್ಗೆ ಯಾವೊಂದು ಮಾತನ್ನೂ ಆಡಿಲ್ಲ. ಹುಡುಕಿದರೆ ಅದು ನಿಮ್ಮ ಮೇಜು ಅಥವಾ ಕಪಾಟಿನಲ್ಲೇ ಸಿಗಬಹುದು ಎಂದು ಪ್ರತ್ಯುತ್ತರಿಸಿದರು!

ಹೌದು, ಅದು ಪ್ರಾಧ್ಯಾಪಕರ ಮೇಜಿನಲ್ಲೇ ಕಡತಗಳ ಮಧ್ಯೆ ಆರು ತಿಂಗಳಿಂದ ಬಿದ್ದುಕೊಂಡಿತ್ತು! ಇಲ್ಲಿನವರಿಗೆ ಇದ್ದಿಲಾಗಿ ಕಂಡದ್ದು ಹೊರಗಿನವರಿಗೆ ವಜ್ರವೆಂದು ಅರಿವಾಗಿತ್ತು. ರಾಮನ್ನರಿಗೆ ಭೌತಶಾಸ್ತ್ರದ ಬಗ್ಗೆಯಷ್ಟೇ ಅಲ್ಲ, ಸಾಧನೆಯನ್ನು ಗುರುತಿಸುವುದರಲ್ಲಿ ಜನ ತೋರುವ ಔದಾಸೀನ್ಯದ ಬಗ್ಗೆಯೂ ಆಳವಾದ ಅರಿವಿತ್ತು. ಸಾಧನೆ ಮಾಡಿ ಮೌನವಾಗುಳಿದರೆ ಪ್ರಯೋಜನವಿಲ್ಲ, ಅದನ್ನು ಸರಿಯಾದ ವೇದಿಕೆಯಲ್ಲಿಟ್ಟಾಗಷ್ಟೇ ಅದಕ್ಕೆ ಮರ್ಯಾದೆ ಎಂಬುದು ಬಹುಶಃ ಅವರು ಕಾಲೇಜಿನಲ್ಲಿಕಲಿತ ಹಲವು ಪಾಠಗಳಲ್ಲೊಂದು. ­

Advertisement

 

-ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next