Advertisement

ಜೀವನ ನಿಂತಿರುವುದೇ ಆಯ್ಕೆಗಳ ಮೇಲೆ

07:21 AM Jan 28, 2019 | |

ಹೌದು, ಒಂದು ತಪ್ಪು ಆಯ್ಕೆ ನಮ್ಮ ಜೀವನವನ್ನೇ ನಾಶ ಮಾಡಿದರೆ, ಸರಿಯಾದ ಆಯ್ಕೆ ಜೀವನವನ್ನು ಸಮೃದ್ಧವಾಗಿಸಬಹುದು. ಓದಿನಿಂದ ಹಿಡಿದು ಉದ್ಯೋಗ, ಸ್ನೇಹಿತರು, ಜೀವನ ಸಂಗಾತಿ ಹೀಗೆ ಒಂದಿಲ್ಲೊಂದು ಆಯ್ಕೆಯ ಪ್ರಸಂಗಗಳು ಜೀವನದಲ್ಲಿ ಬರುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ನಮ್ಮ ನಿರ್ಧಾರಗಳು ಏನಿರುತ್ತವೆ ಎಂಬುದರ ಮೇಲೆಯೇ ನಮ್ಮ ಭವಿಷ್ಯವೂ ನಿರ್ಧಾರವಾಗುತ್ತದೆ.

Advertisement

ಒಂದು ಕಪ್ಪೆ ಮತ್ತು ಇಲಿ ಬಹಳ ಆತ್ಮೀಯ ಸ್ನೇಹಿತರಾಗಿದ್ದವು. ಎಷ್ಟರ ಮಟ್ಟಿಗೆ ಆತ್ಮೀಯರು ಅಂದರೆ ಒಂದು ಕ್ಷಣವೂ ಒಂದನ್ನೊಂದು ಬಿಟ್ಟಿರಲಾರದಷ್ಟು. ಆದರೆ ಕೆಲವು ಸನ್ನಿವೇಶಗಳಲ್ಲಿ ದೂರ ದೂರವೇ ಇರಬೇಕಾದ ಸ್ಥಿತಿ ಅವೆರಡಕ್ಕೂ ಅನಿವಾರ್ಯವಾಗಿತ್ತು. ಒಂದು ದಿನ ಇವುಗಳ ನಡುವೆ ಮಾತುಕತೆ ನಡೆಯುವ ಸಂದರ್ಭ ಈ ವಿಷಯ ಚರ್ಚೆಗೆ ಬಂತು. ಬಿಟ್ಟಿರಲಾರದ ಕಾರಣ ಒಟ್ಟಿಗೆ ಇರಲು ಉಪಾಯವೊಂದನ್ನು ಮಾಡಿ ಇವೆರಡರ ಒಂದೊಂದು ಕಾಲನ್ನು ಸೇರಿಸಿ ಹಗ್ಗ ಕಟ್ಟಿಕೊಂಡವು. ಅಂದಿನಿಂದ ಎರಡೂ ಸದಾ ಜತೆಯಾಗಿಯೇ ಇದ್ದವು. ಹೀಗಿರುವಾಗ ಒಂದು ದಿನ ಕೆರೆ ಪಕ್ಕ ಸಂಚರಿಸುವ ವೇಳೆ ನೀರಿನಲ್ಲಿ ಹುಳವೊಂದು ತೇಲುತ್ತಿರುವುದು ಕಪ್ಪೆ ಕಣ್ಣಿಗೆ ಬಿತ್ತು. ಆಹಾ ಇವತ್ತಿಗೆ ನನಗೆ ಒಳ್ಳೆಯ ಆಹಾರ ಸಿಕ್ಕಿತೆಂದು ಕಪ್ಪೆ ಕ್ಷಣಮಾತ್ರದಲ್ಲೇ ಕೆರೆಗೆ ನೆಗೆದುಬಿಟ್ಟಿತು. ಹಗ್ಗ ಕಟ್ಟಿಕೊಂಡಿದ್ದ ಕಾರಣ ಇಲಿಯೂ ಕೆರೆಗೆ ಬಿದ್ದು ತನ್ನ ಪ್ರಾಣ ಕಳೆದುಕೊಂಡಿತು. ಈ ವೇಳೆ ಅಲ್ಲೇ ಹಾರಾಡುತ್ತಿದ್ದ ಕಾಗೆಯ ಕಣ್ಣಿಗೆ ನೀರಲ್ಲಿ ಸತ್ತು ಬಿದ್ದಿರುವ ಇಲಿ ಕಣ್ಣಿಗೆ ಬಿತ್ತು. ಕಾಗೆ ತಡಮಾಡದೆ ಇಲಿಯನ್ನು ಕಚ್ಚಿಕೊಂಡು ಹಾರತೊಡಗಿತು. ಈ ವೇಳೆ ನೀರಲ್ಲಿ ಹುಳ ತಿನ್ನುತ್ತಿದ್ದ ಕಪ್ಪೆಯೂ ಇಲಿಯೊಡನೆ ತೆರಳಿ ತನ್ನ ಪ್ರಾಣ ಕಳೆದುಕೊಂಡಿತು.

ಇದು ಆಯ್ಕೆಯ ಕುರಿತು ಹೇಳುವ ಚಿಕ್ಕ ಕಥೆಯಾಗಿದ್ದರೂ ಸಂದೇಶ ಬಹಳ ದೊಡ್ಡದಿದೆ. ಕೆಲವೊಮ್ಮೆ ಆಯ್ಕೆಗಳು ಆಪತ್ತು ತಂದೊಡ್ಡುವ ಪ್ರಮೇಯವನ್ನೂ ಎದುರಿಸಬೇಕಾಗಬಹುದು. ಹಾಗಾಗಿ ಆಯ್ಕೆಯ ವಿಚಾರದಲ್ಲಿ ಎಚ್ಚರ ಅಗತ್ಯ.ಆಯ್ಕೆಯಲ್ಲಿ ಎಡವಿದೆವೋ ಜೀವನವನ್ನೇ ಕಳೆದುಕೊಂಡಂತೆ ಎನ್ನುವುದೇ ಕಥೆಯ ಸಾರ.

ಪ್ರಸನ್ನ ಹೆಗಡೆ ಊರಕೇರಿ

Advertisement

Udayavani is now on Telegram. Click here to join our channel and stay updated with the latest news.

Next