Advertisement

Khata-Khat: ಜೀವನ ಖಟಾ-ಖಟ್‌ ಅಲ್ಲ, ಅದಕ್ಕೆ ಪರಿಶ್ರಮ ಬೇಕು…: ರಾಹುಲ್‌ ಗೆ ಜೈಶಂಕರ್ ಟಾಂಟ್

12:21 PM Sep 14, 2024 | Team Udayavani |

ಹೊಸದಿಲ್ಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S Jaishankar) ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ದ ಟೀಕೆ ಮಾಡಿದ್ದು, ಜೀವನವು “ಖಟಾ-ಖಟ್” (ಸುಲಭವಾದ ಕೆಲಸ) ಅಲ್ಲ. ಅದಕ್ಕೆ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಖಾತೆಗಳಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವುದಾಗಿ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪದೇ ಪದೇ “ಖಟಾ-ಖಟ್” ಪದವನ್ನು ಬಳಸಿದ್ದರು.‌

ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕುರಿತು ಮಾತನಾಡುತ್ತಾ ಜೈಶಂಕರ್ ಈ ಹೇಳಿಕೆ ನೀಡಿದ್ದಾರೆ.

ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, “ನೀವು ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳನ್ನು ನಿರ್ಮಿಸುವವರೆಗೆ, ಆ ನೀತಿಗಳನ್ನು ಜಾರಿಗೆ ತರುವವರೆಗೆ, ಅದು ಕಠಿಣ ಕೆಲಸವಾಗಿದೆ. ಜೀವನವು ‘ಖಟಾ-ಖಟ್’ ಅಲ್ಲ, ಜೀವನವು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಾಗಿದೆ”‌ ಎಂದರು.

Advertisement

“ಕೆಲಸವನ್ನು ಹೊಂದಿರುವ ಮತ್ತು ಅದರಲ್ಲಿ ಶ್ರಮಿಸಿದ ಯಾರಿಗಾದರೂ ಅದು ತಿಳಿದಿದೆ. ಹಾಗಾಗಿ ಇದು ನಿಮಗೆ ನನ್ನ ಸಂದೇಶವಾಗಿದೆ, ನಾವು ಶ್ರಮ ಪಡಬೇಕು” ಎಂದು ಜೈಶಂಕರ್ ಹೇಳಿದರು.‌

ಒಂದು ದೇಶವು ತನ್ನ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸದೆ ದೊಡ್ಡ ಶಕ್ತಿಯಾಗಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು.

“ನಾವು ಅದಕ್ಕೆ ಅಸಮರ್ಥರು, ನಾವು ಅದನ್ನು ಪ್ರಯತ್ನಿಸಬಾರದು ಎಂದು ಹೇಳುವ ಜನರಿದ್ದಾರೆ. ನೀವು ನಿಜವಾಗಿಯೂ ಉತ್ಪಾದನೆಯಿಲ್ಲದೆ ವಿಶ್ವದ ಪ್ರಮುಖ ಶಕ್ತಿಯಾಗಬಹುದೇ? ಏಕೆಂದರೆ ಒಂದು ಪ್ರಮುಖ ಶಕ್ತಿಗೆ ತಂತ್ರಜ್ಞಾನದ ಅಗತ್ಯವಿದೆ. ಯಾರೂ ಉತ್ಪಾದನೆ ಅಭಿವೃದ್ಧಿಪಡಿಸದೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ” ಎಂದು ಜೈಶಂಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next