Advertisement
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 143ನೇ ಜಯಂತಿ ಅಂಗವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಏಕತಾ ಓಟ ಸಂಚಾಲನ ಸಮಿತಿಯಿಂದ ಅ. 31ರಂದು ನಡೆದ ರಾಷ್ಟ್ರೀಯ ಏಕತಾ ಓಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ನೆಮ್ಮದಿಯ ಜೀವನಕ್ಕಾಗಿ ಶ್ರಮಿಸಿದ ಸರ್ದಾರ್ ಪಟೇಲರು ನಿತ್ಯ ನಿರಂತರ ನಮ್ಮ ಕಣ್ಣ ಮುಂದಿರಬೇಕು ಎನ್ನುವ ಉದ್ದೇಶದಿಂದ ಬೃಹತ್ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ರೈತರು, ಶ್ರಮ ಜೀವಿಗಳಿಂದ ಸಂಗ್ರಹಿಸಿದ ಕಬ್ಬಿಣ ಗಳಿಂದ ಅವರ ಪುತ್ಥಳಿಯನ್ನು ರಚಿಸಲಾಗಿದೆ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ದೇಶದ ಏಕತೆಗೆ ಶ್ರಮಿಸಿದ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರು ಯಾವುದೇ ಕ್ರಾಂತಿಯಿಲ್ಲದೆ ದೇಶವನ್ನು ಒಗ್ಗೂಡಿಸಿದ್ದಾರೆ. ದೇಶದ ಅಖಂಡತೆಗಾಗಿ ಅವರು ಸಲ್ಲಿಸಿದ ಸೇವೆಯನ್ನು ದೇಶದ ಪ್ರಜೆಗಳಿಗೆ ನೆನೆಪಿಸುವ ಉದ್ದೇಶದಿಂದ ಏಕತಾ ಓಟ ಆಯೋಜಿಸಲಾಗಿದೆ ಎಂದರು. ಆಂಜನೇಯ ಮಂತ್ರಾಲಯದ ಬಳಿಯಿಂದ ಹೊರಟ ರಾಷ್ಟ್ರೀಯ ಏಕತಾ ಓಟಕ್ಕೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮುಖ್ಯ ರಸ್ತೆಯ ಮೂಲಕ ಸಾಗಿ ದರ್ಬೆ ವೃತ್ತದ ಬಳಿ ಸಮಾಪನಗೊಂಡಿತು.
Related Articles
Advertisement
ಅಖಂಡ ಭಾರತ ನಿರ್ಮಾಣ560 ರಾಜ್ಯಗಳನ್ನು ಒಟ್ಟುಗೂಡಿಸಿ ಅಖಂಡ ಭಾರತ ನಿರ್ಮಾಣ ಮಾಡಿದ್ದಾರೆ. ಅವರ ಹುಟ್ಟುಹಬ್ಬ ದೇಶದ ಜನತೆಗೆ ಏಕತೆಯ ಸಂದೇಶ ನೀಡುವಂತಾಗಬೇಕು. ಉಕ್ಕಿನ ಮನಸ್ಸಿನ ವ್ಯಕ್ತಿಯಾಗಿರುವ ಪಟೇಲ್ ಉಕ್ಕಿನ ವ್ಯಕ್ತಿಯಾಗಿ ಜಗತ್ತಿಗೆ ಪರಿಚಯಿಸಲ್ಪಟ್ಟಿದ್ದಾರೆ. ದೇಶದ ಏಕತೆಗಾಗಿ ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟವರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಪ್ರಥಮ ಗೃಹ ಸಚಿವರಾಗಿ, ಉಪ ಪ್ರಧಾನಿ ಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು ಎಂದು ಶಾಸಕರು ಹೇಳಿದರು.