Advertisement
ನೌಕರಿಯಲ್ಲಿ ಇರುವವರಿಗೆ, ಉದ್ಯೋಗದಾತರು ಒಪ್ಪುವ ಮೇರೆಗೆ ಸಂಬಳದಿಂದ ಪ್ರತೀ ತಿಂಗಳೂ ಮುರಿದು (ಸ್ಯಾಲರಿ ಸೇವಿಂಗ್ಸ್ ಸ್ಕೀಮ…) ವಿಮಾ ಕಂತುಗಳನ್ನು ಸಲ್ಲಿಸಬಹುದು. ಪ್ರತೀ ತಿಂಗಳೂ ತುಂಬುವುದರಿಂದ, ಇಲ್ಲಿ ಸ್ವಲ್ಪ ಕಡಿಮೆ ಪ್ರೀಮಿಯಂ ಇರುತ್ತದೆ. ವಿಮಾ ಕಂತುಗಳನ್ನು ಮನಿ ಆರ್ಡರ್ (ಎಂ.ಒ.), ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ) ಅಥವಾ ಚೆಕ್ಕುಗಳ ಮೂಲಕ (ಪರ ಊರಿನ ಚೆಕ್ಕುಗಳಾದಲ್ಲಿ ಕಲೆಕ್ಷನ್ ಚಾರ್ಜನ್ನು ಪ್ರೀಮಿಯಂ ಹಣಕ್ಕೆ ಸೇರಿಸಿ ಚೆಕ್ಕನ್ನು ಬರೆಯಬೇಕು) ತುಂಬಬಹುದು. ವಿಮಾ ಕಂಪೆನಿಗಳ ಶಾಖೆಗಳಲ್ಲಿ ಹಾಗೂ ನಿಗದಿಪಡಿಸಿದ ಬ್ಯಾಂಕ್‌ಗಳ ಶಾಖೆಗಳಲ್ಲೂ ವಿಮಾ ಕಂತುಗಳನ್ನು ತುಂಬಬಹುದು. ಇ.ಸಿ.ಎಸ್. ಮುಖಾಂತರವೂ ಆನ್‌ಲೈನ್‌ನಲ್ಲಿಯೂ ವಿಮಾ ಕಂತುಗಳನ್ನು ಪಾವತಿ ಮಾಡ ಬಹುದು. ಪಾಲಿಸಿದಾರರ ಹಿತಾ ಸಕ್ತಿ ಹಾಗೂ ಪಾಲಿಸಿದಾರರಿಗೆ ಯಾವುದೇ ತೊಂದರೆ ಗಳಾಗದಂತೆ ಹಲವು ನಗರ ಗಳಲ್ಲಿ ಓಂಬುಡ್ಸ್‌ಮನ್ ಕಚೇರಿಗಳನ್ನು ತೆರೆಯಲಾಗಿದೆ. ಅವುಗಳಲ್ಲಿ ದಕ್ಷಿಣ ಭಾರತದ ನಗರಗಳಾದ ಹೈದರಾಬಾದ್, ಚೆನ್ನೆ ಕೂಡಾ ಸೇರಿವೆ.
Advertisement
ಜೀವ ವಿಮೆ ಮತ್ತು ಇತರ ವಿಚಾರಗಳು
11:18 PM Feb 02, 2020 | Sriram |
Advertisement
Udayavani is now on Telegram. Click here to join our channel and stay updated with the latest news.