Advertisement
ಸೂತ್ರ ಬೊಂಬೆ ಕುಣಿತ ಅಥವಾ ಬೊಂಬೆಯಾಟ ಎಂಬುದು ಪ್ರಾಚೀನ ಕಾಲದಿಂದಲೇ ಬಳಕೆಯಲ್ಲಿರುವ ಒಂದು ಕಲಾಪ್ರಕಾರ. ಬೊಂಬೆಗಳನ್ನು ತೆಳುವಾದ ಸೂತ್ರ ಅಥವಾ ದಾರದ ಸಹಾಯದಿಂದ ಯಾವುದಾದರೂ ಕಥಾ ಹಂದರಕ್ಕೆ ತಕ್ಕಂತೆ ಕುಣಿಸುವುದು ಈ ಕಲೆಯ ವಿಶೇಷತೆ. ಧ್ವನಿಯನ್ನು ಸೂತ್ರದಾರನೇ ನೀಡಬೇಕಾಗುತ್ತದೆ. ಕೇವಲ ಹಳ್ಳಿಗಳಲ್ಲಿ ಮಾತ್ರ ಪ್ರಚಲಿತದಲ್ಲಿದ್ದ ಈ ಕಲೆ ಅನಂತರದಲ್ಲಿ ವಿದೇಶೀಯರಿಂದ ಪ್ರಮುಖ ಆಕರ್ಷಣೆಯನ್ನು ಪಡೆದು ಎಲ್ಲ ಕಡೆ ಪ್ರಸಿದ್ಧಿಯನ್ನು ಪಡೆಯಿತು. ಇತ್ತೀಚೆಗೆ ಸೂತ್ರದ ಗೊಂಬೆಯಾಟ ಒಂದು ಕೋರ್ಸ್ ಆಗಿ ಗುರುತಿಸಲ್ಪಡುತ್ತಿದೆ.
ಮೊದಲೇ ಹೇಳಿದಂತೆ ಗೊಂಬೆಯಾಟ ಒಂದು ಕಲೆಯಾದ್ದರಿಂದ ಇದರ ತರಬೇತಿ ಕೂಡ ರಂಗಭೂಮಿಗೆ ಹೆಚ್ಚು ಹತ್ತಿರವಾಗಿರುತ್ತದೆ. ಮಿಮಿಕ್ರಿ, ನೃತ್ಯ ಸಂಗೀತ ಕ್ಷೇತ್ರಗಳಲ್ಲಿ ಆಸಕ್ತಿ ಇರುವವರು ಈ ತರಬೇತಿಯನ್ನು ಆಯ್ದುಕೊಳ್ಳಬಹುದು. ಮಾತು ಹಾಗೂ ಕೈಚಳಕ ಎರಡೂ ಚುರುಕಾಗಿ ನಡೆಯಬೇಕಾದ ಈ ಕಲೆಯಲ್ಲಿ ಬೊಂಬೆಗಳ ಅಭಿನಯಕ್ಕೆ ಧ್ವನಿಯಾಗಬೇಕಾದ ಜವಾಬ್ದಾರಿ ಕೂಡ ಸೂತ್ರದಾರನದ್ದಾಗಿರುತ್ತದೆ. ಕಲೆ ಅಥವಾ ಇನ್ನಾವುದಾದರೂ ವಿಷಯದಲ್ಲಿ ಪದವಿ ಮುಗಿಸಿದ ಬಳಿಕ ಈ ಕೋರ್ಸ್‌ನ್ನು ಆಯ್ದುಕೊಳ್ಳಬಹುದು.
ಅರೆಕಾಲಿಕ ಅಥವಾ ಪೂರ್ಣಕಾಲಿಕ
ಸೂತ್ರದ ಗೊಂಬೆ ಕುಣಿತದಲ್ಲಿ ಅರೆಕಾಲಿಕ ಹಾಗೂ ಪೂರ್ಣಕಾಲಿಕ ಕೆಲಸ ಮಾಡುವ ಅವಕಾಶವಿರುತ್ತದೆ. ಕೆಲಸ ಅಥವಾ ಕ್ಷೇತ್ರ ಬೇರೆಯದ್ದಾಗಿದ್ದು ಈ ಕಲೆಯಲ್ಲಿ ಆಸಕ್ತಿ ಇದ್ದವರಿಗೆ ಇದನ್ನು ಅರೆಕಾಲಿಕ ವೃತ್ತಿಯಾಗಿ ಆಯ್ದುಕೊಳ್ಳಬಹುದು. ಕೇವಲ ಮನೋರಂಜನೆಗಾಗಿ ಮಾತ್ರ. ಕೆಲವು ಇಂತಹ ಗೊಂಬೆಯಾಟ ಮಾಡುವ ತಂಡದೊಂದಿಗೆ ಸೇರಿಕೊಂಡು ಬಿಡುವಿನ ಸಮಯದಲ್ಲಿ ಇದನ್ನು ಮಾಡಬಹುದು.
Related Articles
Advertisement
ಕೋರ್ಸ್ ಕಾಲಾವಧಿ4 ತಿಂಗಳ ಕಾಲಾವಧಿಯ ಈ ಕೋರ್ಸ್‌ನಲ್ಲಿ ಮುಂದೆ ಹೆಚ್ಚು ಕಲಿಕೆಗೆ ಅವಕಾಶಗಳಿವೆ. ಮುಂಬಯಿ ವಿಶ್ವವಿದ್ಯಾಲಯವು ಮೊದಲ ಬಾರಿಗೆ ಪುಪ್ಪೆಟ್ರಿ ಕೋರ್ಸ್ ಅಥವಾ ಸೂತ್ರದ ಗೊಂಬೆ ಕಲಿಕೆಯನ್ನು ಆರಂಭಿಸಿತು. ಕೋಲ್ಕತಾದಲ್ಲಿ ಕೂಡ ಇದರ ಕಲಿಕೆಗೆ ಅವಕಾಶವಿದೆ. •ಸುಶ್ಮಿತಾ ಶೆಟ್ಟಿ