Advertisement
ಉದ್ಯೋಗಾವಕಾಶಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ಉದ್ಯೋಗ ಪಡೆಯುವುದು ಕೂಡ ಸವಾಲಿನ ಕೆಲಸ. ಹೀಗಾಗಿ ವೃತ್ತಿಯನ್ನೇ ನಂಬಿಕೊಂಡು ಕೂರುವಂತಿಲ್ಲ. ಅದಕ್ಕಾಗಿ ಹವ್ಯಾಸಗಳನ್ನೇ ಪಾರ್ಟ್‌ಟೈಂ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈಜು ಕಲಿಕೆಯೂ ಒಂದು ಹೊಸ ದಾರಿಯನ್ನು ತೋರಬಲ್ಲದು.
ಈಜು ಗೊತ್ತಿದ್ದರೆ ಸಾಕು. ತರಬೇತುದಾರರಾಗಿ ಸ್ವಂತ ವೃತ್ತಿಯನ್ನು ಮಾಡಿಕೊಳ್ಳಬಹುದು. ಹೆಡ್ ಸ್ವಿಮ್ ಕೋಚ್ ಡಿಗ್ರಿಯ ಅನಂತರ ಏನಾಗಬೇಕು ಎಂಬ ಗೊಂದಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ, ಫಿಸಿಕಲ್ ಎಜುಕೇಶನ್ ಬಗ್ಗೆ ತಿಳಿದುಕೊಂಡು ಡಿಗ್ರಿಯಲ್ಲಿ ಆ್ಯತ್ಲೆಟಿಕ್ ಕ್ರೀಡಾಪಟುವಾಗಿರುವವರು ಅನಂತರ ಹೆಡ್ ಸ್ವಿಮ್ ಕೋಚ್ ವೃತ್ತಿಗೆ ಟ್ರೈ ಮಾಡಬಹುದು. ಅಸಿಸ್ಟೆಂಟ್ ಸ್ವಿಮ್ಮಿಂಗ್ ಕೋಚ್
ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಅಸಿಸ್ಟೆಂಟ್ ಸ್ವಿಮ್ಮಿಂಗ್ ಕೋಚ್ ಆಗಿ ಸೇರಿಕೊಳ್ಳಬಹುದು. ಇಲ್ಲಿ ಸ್ವಿಮ್ಮಿಂಗ್ ಬಗ್ಗೆ ಬೇಸಿಕ್ ಜ್ಞಾನವನ್ನು ಹೊಂದಿರಬೇಕು. ಪಾರ್ಟ್ ಟೈಮ್ ಆಗಿ ಕೆಲಸ ಮಾಡಬಹುದು. ವಾರದಲ್ಲಿ 20 ಗಂಟೆ ಕೆಲಸವಿರುತ್ತದೆ. ನೆಮ್ಮದಿಯ ಜತೆಗೆ ಹಣವನ್ನೂ ಸಂಪಾದಿಸಿಕೊಳ್ಳಬಹುದು. ಸತತ ಪರಿಶ್ರಮದಿಂದ ರಾಷ್ಟ್ರೀಯ ಮಟ್ಟದ ಈಜುಪಟುವಾಗುವ ಕನಸನ್ನೂ ನನಸಾಗಿಸಬಹುದು.
Related Articles
ಸೀನಿಯರ್ ಕೋಚ್‌ಗಳಿಗೆ ಹೆಡ್ ಸೀನಿಯರ್ ಕೋಚ್ ಆಗಿಯೂ ವೃತ್ತಿ ನಿರ್ವಹಿಸಬಹುದು.
Advertisement
ತರಬೇತಿ ಕೇಂದ್ರಗಳುಮಂಗಳೂರು ಭಾಗದಲ್ಲಿ ಹಲವು ಸ್ವಿಮ್ಮಿಂಗ್ ತರಬೇತಿ ಕೇಂದ್ರಗಳಿವೆ. ನಗರಕ್ಕೆ ಹತ್ತಿರವಾಗಿ ಶ್ರೀನಿವಾಸ ನಗರ, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಬೆಳಗ್ಗೆ 9.30ರಿಂದ ಸಂಜೆ 6.30ರವರೆಗೆ ತರಬೇತಿ ನೀಡಲಾಗುತ್ತದೆ. ಅಶೋಕನಗರದ ಕೋಡಿಕಲ್‌ನಲ್ಲಿ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಹಾಗೂ ಸಂಜೆ 5 ರಿಂದ 9 ಗಂಟೆಯವರೆಗೆ ತರಬೇತಿಗಳನ್ನು ನೀಡಲಾಗುತ್ತದೆ. ಲೇಡಿಹಿಲ್ ಬಳಿಯಲ್ಲಿ ಫೆರ್ರೀ ರೋಡ್ ಬಳಿಯೂ ಸ್ವಿಮ್ಮಿಂಗ್ ತರಬೇತಿ ಕೇಂದ್ರಗಳಿವೆ. ಸ್ವಿಮ್ಮಿಂಗ್‌ಗೆ ಸಂಬಂಧಿಸಿದ ಸರ್ಟಿಫಿಕೇಟ್ ಕೋರ್ಸ್‌ಗಳು ಇವೆ. ಈ ಬಗ್ಗೆ ಆನ್‌ಲೈನ್ ಅಥವಾ ತರಬೇತಿ ಕೇಂದ್ರಗಳಿಂದ ಮಾಹಿತಿ ಪಡೆಯಬಹುದು. ಹಲವು ಪ್ರಯೋಜನ
· ಕಲುಷಿತ ವಾತಾವರಣ ಹೆಚ್ಚಿನವರಲ್ಲಿ ಉಸಿರಾಟದ ತೊಂದರೆಯನ್ನುಂಟು ಮಾಡುತ್ತಿದೆ. ಇದರ ನಿವಾರಣೆಗೆ ಔಷಧಗಳಿಗೇ ಮೊರೆಹೋಗಬೇಕಿಲ್ಲ. ನೀರಿನಲ್ಲಿ ಈಜುವ ಅಭ್ಯಾಸ ಮಾಡಿಕೊಂಡರೆ ತನ್ನಿಂತಾನೇ ಉಸಿರಾಟದ ತೊಂದರೆ ನಿವಾರಣೆಯಾಗುವುದು. · ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಈಜು ಸಹಕಾರಿ. ಇದರಿಂದ ದೇಹದಲ್ಲಿ ಶಕ್ತಿ ವೃದ್ಧಿಯಾಗುವುದು. ಮಾತ್ರವಲ್ಲದೆ ಫಿಟ್ನೆಸ್ ಕಾಪಾಡಲು ಇದು ನೆರವಾಗುತ್ತದೆ. · ನಿತ್ಯವು ಎದ್ದ ಕೂಡಲೇ ಈಜಾಡುವ ಅಭ್ಯಾಸ ಮಾಡಿದರೆ ದೇಹ, ಮನಸ್ಸು ಉಲ್ಲಸಿತವಾಗುತ್ತದೆ. ದಿನ ಪೂರ್ತಿ ಚುರುಕಾಗಿ ಕೆಲಸ ಮಾಡಬಹುದು. ಮಾನಸಿಕ ಒತ್ತಡ ನಿವಾರಣೆಯಾಗುವುದು ಮಾತ್ರವಲ್ಲದೆ ನಿದ್ದೆಯ ತೊಂದರೆಯನ್ನೂ ನಿವಾರಿಸಿಕೊಳ್ಳಬಹುದು. ಶ್ರುತಿ ನೀರಾಯ