Advertisement

ಬಂಡೆ ಮೇಲೆ ನಿಂತುಕೊಂಡು…

06:15 PM Mar 25, 2019 | mahesh |

ಚಿತ್ರ: ಫ್ರೀ ಸೊಲೊ
ಅವಧಿ: 91 ನಿಮಿಷ
ನಿರ್ದೇಶನ: ಎಲಿಝಬೆತ್‌ ಚಾಯ್‌

Advertisement

ಇತ್ತೀಚೆಗಷ್ಟೇ ಡಾಕ್ಯುಮೆಂಟರಿ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿ ಪಡೆದ ಈ ಚಿತ್ರ, ಹೆಸರಾಂತ ರಾಕ್‌ ಕ್ಸೆ„ಂಬರ್‌ ಅಲೆಕ್ಸ್‌ ರೊನಾಲ್ಡೋ ಅವರ ಏಕಾಂಗಿ ಸಾಹಸಗಾಥೆ. ಸುಮಾರು 3 ಸಾವಿರ ಅಡಿ ಎತ್ತರದ, 90 ಡಿಗ್ರಿ ಕೋನದಲ್ಲಿ ನಿಟಾರನೆ ನಿಂತ ಬಂಡೆಯನ್ನು ಅಲೆಕ್ಸ್‌, ಸಾರ್ವಜನಿಕರೆದುರು ಏರುತ್ತಾರೆ. ಹೆಜ್ಜೆ ಹೆಜ್ಜೆಗೂ ಜಾರುವ, ಸವಲೊಡ್ಡುವ ಬಂಡೆಗೆ ಯಾವುದೇ ಹಗ್ಗ ಬಳಸದೇ ಏರುವಾಗ, ಕ್ಯಾಮೆರಾ ಕಣ್ಣಿನಲ್ಲಿ ಕೆಳಕ್ಕೆ ಕಾಣುವ ಪ್ರಪಾತ, ನೋಡುಗರನ್ನು ದಂಗುಬಡಿಸುತ್ತದೆ. ಅಲೆಕ್ಸ್‌ ಅವರ ಬೆನ್ನಿಗೆ, ಕ್ಯಾಮೆರಾಮನ್‌ ಜಿಮ್ಮಿ ಚಿನ್‌, ಮೈನವಿರೇಳಿಸುವಂಥ ಆ ದೃಶ್ಯವನ್ನು ಸೆರೆಹಿಡಿಯುತ್ತಾ ಹೋಗುವುದೂ ಒಂದು ಚಾಲೆಂಜಿಂಗ್‌ನಂತೆಯೇ ಕಾಣಿಸುತ್ತದಾದರೂ, ಅವರು ರೋಪ್‌ ಬಳಸಿರುತ್ತಾರೆ ಅನ್ನೋದು ಸಮಾಧಾನದ ಸಂಗತಿ. ಎಲ್ಲೂ ಎಡವದೇ, ಕೊನೆಗೂ ತುದಿ ತಲುಪುವ ಸಾಹಸಕ್ಕೆ ಎಲ್ಲರ ಮೆಚ್ಚುಗೆ ಸಿಗುತ್ತದೆ.

ಆದರೆ, ಅಲೆಕ್ಸ್‌ ಹೀಗೆ ಒಂದೇ ಟೇಕ್‌ನಲ್ಲಿ ಬಂಡೆ ಏರಿದ ಹಿಂದೆ ಕಣ್ಣೀರ ಕತೆಯೇ ಇದೆ. ಆ ಕಠಿಣ ಪೂರ್ವಾಭ್ಯಾಸಗಳನ್ನೂ ಕಣ್ಣಿಗೆ ಕಟ್ಟುವಂತೆ ಈ ಡಾಕ್ಯುಮೆಂಟರಿ ಚಿತ್ರ ತೋರಿಸುತ್ತದೆ. ಶೇ.30 ಭಾಗ ಎತ್ತರ ಏರಿದಾಗ ಅಲೆಕ್ಸ್‌, ಧೊಪ್ಪನೆ ಬಿದ್ದು, ಮೊಣಕಾಲಿನ ಮೂಳೆಗೂ ಗಂಭೀರ ಪೆಟ್ಟು ಮಾಡಿಕೊಂಡಿರುತ್ತಾರೆ. ನಂತರ ಕಠಿಣ ತರಬೇತಿಯಲ್ಲಿ ಆ ನೋವನ್ನೆಲ್ಲ ಮರೆತು, ದಾಖಲೆ ನಿರ್ಮಿಸುತ್ತಾರೆ. ಸಾಹಸಪ್ರಿಯರು ಒಮ್ಮೆ ನೋಡಲೇಬೇಕಾದ ಚಿತ್ರ.

Advertisement

Udayavani is now on Telegram. Click here to join our channel and stay updated with the latest news.

Next