Advertisement

ಜೀವನ ದೇವರ ಕಾಣಿಕೆ: ಡಾ|ಹೆಗ್ಗಡೆ 

04:08 PM Dec 16, 2017 | Team Udayavani |

ಬೆಳ್ತಂಗಡಿ: ಮನುಷ್ಯನಿಗೆ ಆಹಾರ, ನಿದ್ರೆ, ಭಯ, ಮೈಥುನ ಎಂಬ ವಿಶೇಷ ಆಕಾಂಕ್ಷೆಗಳಿರುತ್ತವೆ. ಈ ಎಲ್ಲ ವಿಚಾರಗಳಲ್ಲಿ ಮನಸ್ಸೇ ಪ್ರಮುಖವಾಗಿದೆ. ಪ್ರತಿಯೊಬ್ಬರೂ ಬದುಕಬೇಕೆಂದು ಆಹಾರ ಸೇವನೆ ಮಾಡುತ್ತಾರೆ. ಅಮಲು ಹೋದಾಗ ಗೌರವ ಬರುತ್ತದೆ. ಸೋಲು ಜಾರುತ್ತದೆ. ಎಚ್ಚರಿಕೆಯಿಂದ ಬಾಳು ನಡೆಸಲು ಖಂಡಿತ ಸಾಧ್ಯಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಉಜಿರೆ ಜಾಗೃತಿ ಸೌಧ ವ್ಯಸನ ಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ 102ನೇ ವಿಶೇಷ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು.

Advertisement

ಕೋತಿಯು ರಸ್ತೆ ದಾಟುತ್ತಿದ್ದರೆ ವಾಹನ ಬಂದಾಗ ಭಯಪಡುತ್ತ ತನ್ನ ಜೀವದ ರಕ್ಷಣೆ ಮಾಡುತ್ತದೆ. ಮನಸ್ಸಿನ ಬುದ್ಧಿಯಿಂದ ಸಂಬಂಧ, ವ್ಯಕ್ತಿತ್ವ ರೂಪಿಸಬಹುದಾಗಿದೆ. ಮದ್ಯಪಾನ ವಿಶೇಷ ಆಕರ್ಷಣೆಯುಳ್ಳ, ಪಂಚೇಂದ್ರಿಯಗಳ ಹಿಡಿತ ತಪ್ಪಿಸುವ, ಅಪಾಯದ ಸೆಳೆತಕ್ಕೆ ತಳ್ಳುವ, ಯಾವುದೇ, ಯಾರೂ ಒಪ್ಪದ ಕೆಲಸ ಮಾಡಲು ಪ್ರೇರೇಪಿಸುವ ಕೆಟ್ಟ ವಸ್ತುವಾಗಿದೆ. ತಮ್ಮ ಹೆಜ್ಜೆ ಗುರುತನ್ನು ಪರಿಚಯಿಸುವ, ಧರ್ಮದ ಚೌಕಟ್ಟಿನಲ್ಲಿ ಎಲ್ಲರಿಗೂ ಹಿತವಾಗುವ ಬದುಕನ್ನು ರೂಪಿಸಲು ಯಾವುದೇ ಅಭ್ಯಾಸವಿಲ್ಲದೆ ಜೀವನ ದೇವರ ಕಾಣಿಕೆಯೆಂಬಂತೆ ತಿಳಿದು ಬಾಳಲು ಈ ವಿಶೇಷ ಶಿಬಿರಗಳು ಸಹಾಯವಾಗುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next